
ಕುಲಾಲ ಸಂಘ ಮುಂಬಯಿ ನವರಾತ್ರಿ ದಸರಾ ಹಬ್ಬದ ಅಂಗವಾಗಿ ಕುಲಾಲ ಸಂಘದ ಯುವ ವಿಭಾಗದವರು ಏರ್ಪಡಿಸಿದ ದುರ್ಗಾ ಪೂಜೆ ಹಾಗೂ ಗರ್ಬಾ ನೃತ್ಯ ಕಾರ್ಯಕ್ರಮವು ತಾರೀಕು 6 ಅಕ್ಟೋಬರ್ 2024ರಂದು ನಿತ್ಯಾನಂದ ಹಾಲ್ ಸಯನ್ ಇಲ್ಲಿ ಸಂಘದ ಅಧ್ಯಕ್ಷರಾದ ರಘು ಏ ಮೂಲ್ಯ ರವರ ಉಪಸ್ಥಿತಿಯಲ್ಲಿ ನಡೆಯಿತು.

ಮೊದಲು ದುರ್ಗಾ ಮಾತೆಗೆ ಮಂಗಳಾರತಿ ನಂತರ ಜ್ಯೋತಿ ಕೊ ಅಫ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷರಾದ ಗಿರೀಶ್ ಬಿ ಸಾಲಿಯನ್ , ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಾಧ್ಯಕ್ಷರಾದ ಸಂಜೀವ ಬಂಗೇರ ಮತ್ತು ಉಪಸ್ಥಿತರಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂಭ್ರಮಾಚರಣೆಯಲ್ಲಿ ಕಲಾತ್ಮಕ ಸೌಂದರ್ಯವನ್ನು ಮೀರಿ ಆಳವಾದ ಸಾಂಸ್ಕೃತಿಕ ಮಹತ್ವವನ್ನು ಹೊಂದಿ ಇದೊಂದು ನಮ್ಮ ಸಮುದಾಯ ಒಗ್ಗಟ್ಟಿನಿಂದ ಇರಲು ಪ್ರಜ್ಞೆಯನ್ನು ಬೆಳೆಸುತ್ತದೆ. ಎಲ್ಲ ಬಂದು ಬಾಂಧವರನ್ನು ,ಯುವ ವಿಭಾಗದವರನ್ನು ಏಕತೆಯ ಆಚರಣೆಯಲ್ಲಿ ಒಟ್ಟಿಗೆ ತರಲು, ನವರಾತ್ರಿಯಲ್ಲಿ ಎಲ್ಲರೂ ಭಾಗವಹಿಸಿ, ನರ್ತಿಸಿ ದುರ್ಗಾ ಮಾತೆಗೆ ಪೂಜೆ ಸಲ್ಲಿಸುವುದರಿಂದ ಇದು ಭಕ್ತಿಯ ಸಂಕೇತವಾಗಿದೆ . ಈ ನೃತ್ಯವು ಕಥೆ ಹೇಳುವ ಜಾನಪದವನ್ನು ಉಳಿಸುವ ಮತ್ತು ನಮ್ಮ ಸಂಪ್ರದಾಯವನ್ನು ಒಂದು ಪೀಳಿಗೆಯಿಂದ ಮುಂದಿನ ಪೀಳಿಗೆಗೆ ರವಾನಿಸುವ ಸಾಧನೆಯಾಗಿ ಕಾರ್ಯ ನಿರ್ವಹಿಸುತ್ತದೆ.ಅದಕ್ಕಾಗಿ ನಮ್ಮ ಯುವ ವಿಭಾಗದವರು ಸಿಕ್ಕಿದ ಅಲ್ಪ ಸಮಯದಲ್ಲಿ ಎಲ್ಲ ಸದಸ್ಯರನ್ನು ಒಟ್ಟು ಮಾಡಿ ಸಂಘದ 2ನೇ ವರ್ಷದ ಗರ್ಬಾ ನೈಟ್ ನ್ನು ಯಶಸ್ವಿಯಾಗಿ ಮಾಡಿ ತೋರಿಸಿದ್ದಾರೆ ಎಂದು ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ ನುಡಿದರು.

ಕಾರ್ಯಕ್ರಮ ಸೊಗಸಾಗಿ ನಡೆಯಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಾಧ್ಯಕ್ಷರಾದ ಸಂಜೀವ ಬಂಗೇರ ಕಮಿಟಿ ಸದಸ್ಯರಾದ ಬಿನಿತ್ ಜಿ ಸಾಲಿಯಾನ್,ವೇಣುಗೋಪಾಲ್ ಕರ್ಕೇರ,ಅಭಿಷೇಕ್ ಬಂಗೇರಾ , ತೇಜಸ್ ಮೂಲ್ಯ ಹಾಗೂ ಎಲ್ಲ ಯುವ ವಿಭಾಗದ ಸದಸ್ಯರ ಸಹಕಾರದಿಂದ ಹಾಗೂ ಕೇಂದ್ರ ಸಮಿತಿಯ ಗೌ .ಪ್ರಾ. ಕಾರ್ಯದರ್ಶಿ ಕರುಣಾಕರ ಸಾಲಿಯಾನ್, ಕೋಶಾಧಿಕಾರಿ ಜಯ ಅಂಚನ್, ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯದಕ್ಷರಾದ ವಾಸು ಬಂಗೇರ , ಮೀರಾ ರೋಡ್- ವೀರಾರ್ ಕಾರ್ಯಾಧ್ಯಕ್ಷರಾದ ಶಂಕರ್ ವೈ ಮೂಲ್ಯ, ಹಾಗೂ ಡಾ ಹರೀಶ್ ಬಿ ಸಾಲಿಯಾನ್ , ಗೊರೆಗಾವ್ ರಘು ಆರ್ ಮೂಲ್ಯ ,ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಚಿತ ಡಿ ಬಂಜನ್ , ಕಾರ್ಯದರ್ಶಿ ಕವಿತಾ ಹಂಡಾ, ಹಾಗೂ ನಯನಾ ಬಂಗೇರ ,ಮಮತಾ ಸದಾನಂದ್ ಕುಲಾಲ್,ಮಲ್ಲಿಕಾ ಏಸ್ ಮೂಲ್ಯ ,ಆರತಿ ಸಾಲಿಯಾನ್ , ಬೇಬಿ ಬಂಗೇರ ಸಹಕರಿಸಿದರು .
ಕಾರ್ಯಕ್ರಮವನ್ನು ಬೀನಿತ್ ಗಿರೀಶ್ ಸಾಲಿಯಾನ್ ನಿರೂಪಿಸಿ, ವಿಶೇಷವಾಗಿ ದಾನಿಗಳಾದ ಜಗದೀಶ್ ಬಂಜನ್ ,ಗಿರೀಶ್ ಸಾಲಿಯಾನ್ ಇವರನ್ನು ಹೂ ಗುಚ್ಛ ಕೊಟ್ಟು ಸತ್ಕರಿಸಿ ,ದಾನಿಗಳಿಗೆ ಸನ್ಮಾನ ಮತ್ತು ಅಂದಿನ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ಒಳ್ಳೆಯ ರೀತಿಯಲ್ಲಿ ನಿರೂಪಿಸಿದರು.

ಉತ್ತಮ ಗರ್ಬಾ ಡ್ಯಾನ್ಸ್,ಅಲಂಕಾರಯುತವಾದ ಉತ್ತಮ ಉಡುಪು ,ಮಕ್ಕಳಿಗೆ ,ಯುವಕ , ಯುವತಿಯರಿಗೆ ಮಹಿಳೆಯರಿಗೆ ವಿಶೇಷವಾಗಿ ಬಹುಮಾನ ವಿತರಿಸಲಾಯಿತು . ಮಕ್ಕಳ ಗ್ರೂಪಿನಲ್ಲಿ :ಕೆಯರ ಮೂಲ್ಯ , ಸಾನ್ವಿ ಬಂಗೇರ. ಐರೋಲಿ,ಯಕ್ಷ್ ಸಾಲಿಯಾನ್, ಹಂಸಿಕಾ ಸಾಲಿಯಾನ್.
ಒಳ್ಳೆಯ ಗರ್ಬಾ ಡ್ಯಾನ್ಸ್ ,: ಸುಜನ್ ಮೂಲ್ಯ ,ಪ್ರೇಮ ಎಲ್ ಮೂಲ್ಯ ವಾಶಿ, ನಿಶಿತಾ ಬಂಗೇರ ನಾಲಸೋಪರ , ಮೇಘಾ ಬಂಜನ್ ನಲಸೋಪರ.
ಆಕರ್ಷಕ ಉಡುಪು : ಜತಿನ್ ಕುಲಾಲ್ ದೊಂಬಿವಲಿ, ಪುಷ್ಪ ಕುಲಾಲ್,ನವ್ಯ ಕುಲಾಲ್,ನೃತ್ಯ ಕುಲಾಲ್ ಇವರಿಗೆ ಬಹುಮಾನ ನೀಡಲಾಯಿತು.
ರಾತ್ರಿಯ ಊಟೋಪಚಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.