
ಮುಂಬಯಿ : ಮುಂಬಯಿ ಮಹಾನಗರದ ತುಳು ನಾಡಿನಂತಿರುವ ಮೀರಾ-ಭಾಯಂದರ್ ನಲ್ಲಿ ದೈವೀ ಕಲೆಯಾದ ಯಕ್ಷಗಾನವನ್ನು ಪ್ರದರ್ಶಿಸಿ ಹಿರಿಕಿರಿಯರಿಗೆ ಯಕ್ಷಗಾನ ಕಲಿಸುತ್ತಿರುವ ಗುರು ಶ್ರೀ ನಾಗೇಶ್ ಕುಮಾರ್ ಪೊಳಲಿಯವರ ಕಾರ್ಯ ಸ್ಲಾಘನೀಯ. ವೇಷ ಹಾಕುವುದು ಮುಖ್ಯವಲ್ಲ, ಯಕ್ಷಗಾನದಿಂದ ಯುವ ಜನಾಂಗಕ್ಕೆ ಆದರ್ಶ ಬದುಕು ನಡೆಸುವಂತಾಗುತ್ತದೆ ಎಂದು ಬಾಂಬೆ ಬಂಟ್ಸ್ ಅಸೋಷಿಯೇಶನ್ ನ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಯವರು ನುಡಿದರು.
ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ಇದರ 8ನೇ ವಾರ್ಷಿಕೋತ್ಸವ ಸಮಾರಂಭವು ಅ. 13 ರಂದು ಸೈಂಟ್ ಥೋಮಸ್ ಚರ್ಚ್, ಸಾಯಿಬಾಬ ನಗರ, ಮೀರಾರೋಡ್ ಪೂರ್ವ ಇಲ್ಲಿ ಜರಗಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು ಯಕ್ಷಗಾನದಲ್ಲಿ ಕಲಾವಿದನಾದವನಿಗೆ ಆತನ ಬದುಕಲ್ಲಿ ಸಂಸ್ಕಾರ, ಸಂಸ್ಕೃತಿಯ ಅರಿವು ಉಂಟಾಗುತ್ತದೆ. ಕಿರಿಯ ಮಕ್ಕಳು ಯಕ್ಷಗಾನದಲ್ಲಿ ಯಶಸ್ವಿಯಾಗಿ ಪಾತ್ರ ನಿರ್ವಹಿಸುತ್ತಿದ್ದು ಈ ಕಲೆಯಲ್ಲಿ ಉಳಿಸಿ ಬೆಳೆಸುವ ಪ್ರಯತ್ನವನ್ನು ಮಾಡುತ್ತಿರುವ ನಾಗೇಶ್ ಪೊಳಲಿಯವರಿಗೆ ಎಲ್ಲರ ಸಹಾಯ ಅಗತ್ಯ. ಮುಂಬರುವ ಚುನಾವಣೆಯಲ್ಲಿ ತುಳು ಕನ್ನಡಿಗರನ್ನು ಪ್ರೋತ್ಸಾಹಿಸುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.




ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ನ ನಾಗೇಶ್ ಕುಮಾರ್ ಪೊಳಲಿಯವರು ಪ್ರಸ್ತಾವನೆಯ ಮಾತುಗಳನ್ನಾಡುತ್ತಾ ಸುಮಾರು ಹನ್ನೆರಡು ವರ್ಷಗಳ ಹಿಂದೆ ಹತ್ತು ಮಕ್ಕಳಿಂದ ಪ್ರಾರಂಭವಾದ ನಮ್ಮ ಸಂಸ್ಥೆಯಲ್ಲಿ ಇದೀಗ ನೂರಕ್ಕೂ ಅಧಿಕ ಮಕ್ಕಳು ಯಕ್ಷಗಾನ ಕಲಿಯುತ್ತಿದ್ದಾರೆ. ಯಕ್ಷಗಾನ ಪ್ರದರ್ಶನಕ್ಕೆ ಮಕ್ಕಳಿಗೆ ಸೂಕ್ತ ವೇದಿಕೆಯ ಅಗತ್ಯವಿದೆ. ಇದಕ್ಕೆ ದಾನಿಗಳ ಸಹಾಯ ಅಗತ್ಯ ಎಂದರು.
ಆಶೀರ್ವಚನದ ನುಡಿಗಳನ್ನಾಡಿದ ಗೋಪಾಲ ಭಟ್ ಅವರು ನಾಗೇಶ್ ಪೊಳಲಿಯವರು ಕೇವಲ ಮೀರಾ ಭಾಯಂದರ್ ಮಾತ್ರವಲ್ಲ ಮುಂಬಯಿಯ ಇತರೆಡೆ ಹಾಗೂ ಊರಿನಲ್ಲಿಯೂ ಯಕ್ಷಗಾನದ ಸವಿರುಚಿಯನ್ನು ಕೊಡುತ್ತಿದ್ದಾರೆ. ಇವರಿಗೆ ನೂರಾರು ಶಿಷ್ಯರಿದ್ದು ಎಲ್ಲರ ಬದುಕಲ್ಲಿ ಶ್ರೇಯೋಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿಯವರು ಮಾತನಾಡುತ್ತಾ ಇಲ್ಲಿ ಯಕ್ಷಗಾನದ ಮೂಲಕ ಮಕ್ಕಳಿಗೆ ಜೀವನದಲ್ಲಿ ಉತ್ತಮ ಪರಿವರ್ತನೆಯಾಗುವ ಶಿಕ್ಷಣ ಸಿಗುತ್ತದೆ. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಇದೆಲ್ಲಾ ಮನೆಯಲ್ಲಿ ಕಲಿಸಲು ಅಸಾಧ್ಯ ಎನ್ನುತ್ತ ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿ ಶ್ರೀದೇವಿ ಯಕ್ಷಕಲಾ ನಿಲಯ ನಲಸೋಪಾರ ಇದರ ಅಧ್ಯಕ್ಷರಾದ ಶಶಿಧರ ಕೆ ಶೆಟ್ಟಿ ಇನ್ನಂಜೆ ಯವರು ಮಾತನಾಡುತ್ತಾ ಯಕ್ಷ ಪ್ರಿಯ ಬಳಗ ವು ನನ್ನದೇ ಸಂಸ್ಥೆಯಂತೆ. ಯಕ್ಷಗಾನದೊಂದಿಗೆ ಮಕ್ಕಳು ನಮ್ಮ ಸಂಸ್ಕೃತಿ ಹಾಗೂ ಬಾಷೆಯನ್ನು ಕಲಿಯುವಂತಾಗುತ್ತದೆ. ಇತರ ಮಕ್ಕಳಿಗೂ ಯಕ್ಷಗಾನ ಕಲಿಯಲು ಅವಕಾಶ ಸಿಗುತ್ತದೆ. ನಾಗೇಶ್ ಪೊಳಲಿಯವರು ಮಕ್ಕಳಿಗೆ ಯಕ್ಷಗಾನದ ತರಬೇತಿ ನೀಡಲು ಮಾಡುತ್ತಿರುವ ಪ್ರಯತ್ನದಂತೆ ಮಕ್ಕಳ ಪಾಲಕರು ಕೂಡಾ ಇದರ ಹಿಂದೆ ತುಂಬಾ ಪ್ರಯತ್ನ ನಡೆಸುತ್ತಿದ್ದಾರೆ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಅಭಿನಂದಿಸಬೇಕಾಗಿದೆ.
ಗೌರವ ಅತಿಥಿ ಸುರತ್ಕಲ್ ನ ಉಧ್ಯಮಿ ಡಿ. ಕೆ. ಶೆಟ್ಟಿ ಯವರು ಮಾತನಾಡಿ ಎಳೆಯ ಪ್ರಾಯದಲ್ಲೇ ನಾನು ಯಕ್ಷಗಾನವನ್ನು ನೋಡುತ್ತಿದ್ದು ನನಗೆ ಈಗಲೂ ಯಕ್ಷಗಾನದಲ್ಲಿ ಆಶಕ್ತಿ. ಇಂದು ಎಳೆಯ ಮಕ್ಕಳಿಗೆ ಯಕ್ಷಗಾನದ ಮೂಲಕ ವೇದಿಕೆಯಲ್ಲಿ ಅವಕಾಶ ಕಲಿಸಿದ್ದು ಈ ಸಂಸ್ಕೃತಿ ಸೂರ್ಯ ಚಂದ್ರರಿರುವ ತನಕ ಮೆರೆಯಲಿ ಎಂದರು.
ಉದ್ಯಮಿ ಅರವಿಂದ ಆನಂದ ಶೆಟ್ಟಿ ಯವರು ಮಾತನಾಡುತ್ತ ತುಳು ಕನ್ನಡಿಗರು ನನ್ನ ಸಮಾಜದವರು. ಈ ಪರಿಸರದಲ್ಲಿ ಸುಮಾರು ಎಂಬತ್ತು ಸಾವಿರ ತುಳು ಕನ್ನಡಿಗರಿದ್ದು ಅವರ ಸಾಂಸ್ಕೃತಿಕ ಕಾರ್ಯಕ್ರಮದಲಿ ಬಾಗವಹಿಸಲು ಸಂತೋಷವಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಆಗಾಗ ನಡೆಯುದರೊಂದಿಗೆ ನಮ್ಮ ಸಮಾಜದ ಸಂಸ್ಕೃತಿಯು ಇಲ್ಲಿ ಶ್ರೀಮಂತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಬಂಟರ ಸಂಘ ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷರಾದ ಗುತ್ತಿನಾರು ರವೀಂದ್ರ ಶೆಟ್ಟಿ ಕೊಟ್ರಪ್ಪಾಡಿ ಮಾತನಾಡುತ್ತಾ ಪರಿಸರದ ತುಳು ಕನ್ನಡಿಗರ ಅಭಿವೃದ್ದಿಗಾಗಿ ನಾವೆಲ್ಲರೂ ಒಂದಾಗಬೇಕಾಗಿದೆ. ಚುನಾವಣೆಯು ಸಮೀಪಿಸುತ್ತಿದ್ದು ಇದೇ ತಿಂಗಳ 19 ರಂದು ಪರಿಸರದ ಎಲ್ಲಾ ತುಳು ಕನ್ನಡಿಗರ ಸಭೆಯನ್ನು ಕರೆಯಲಿರುವೆವು. ನಮ್ಮವರ ಒಗ್ಗಟ್ಟನ್ನು ತೋರಿಸುದರೊಂದಿಗೆ ರಾಜಕೀಯದಲ್ಲಿಯೂ ನಮ್ಮವರು ಕ್ರೀಯಾಶೀಲರಾಗಬೇಕಾದ ಅಗತ್ಯವಿದೆ. ನಾಗೇಶ್ ಅವರು ಮಕ್ಕಳ ಪ್ರತಿಭಾ ವಿಕಸನಕ್ಕೆ ಸೂಕ್ತ ವೇದಿಕೆ ಕಲ್ಪಿಸಿದ್ದಾರೆ ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಹಾಗೂ ಸಹಕಾರದ ಅಗತ್ಯವಿದೆ ಎಂದರು.
ಗೌರವ ಅತಿಥಿ ಬಂಟರ ಸಂಘ ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ವಸಂತಿ ಶಿವ ಶೆಟ್ಟಿ ಯಕ್ಷಗಾನವು ಗಂಡು ಕಲೆಯಾಗಿದ್ದು ಇದೀಗ ಮಹಿಳೆಯರು ಮಾತ್ರವಲ್ಲ ಸಣ್ಣ ಮಕ್ಕಳು ಯಕ್ಷಗಾನದಲ್ಲಿ ಬಾಗವಹಿಸುತ್ತಿದ್ದಾರೆ. ನಾಗೇಶ್ ಪೋಳಲಿಯವರು ಕೇವಲ ಮಕ್ಕಳಿಗೆ ಮಾತ್ರವಲ್ಲ ನಮ್ಮಂತ ಹಿರಿಯರಿಗೂ ಯಕ್ಷಗಾನದ ತರಬೇತಿಯನ್ನು ನೀಡುತ್ತಿರುವರು ಎಂದರು.
ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮೀರಾ ಗಾಂವ್ ಇದರ ಶ್ರೀ ಸಾಣೂರು ಶಾಂತಿಂಜ ಜನಾರ್ಧನ್ ಭಟ್, ಮುಖ್ಯ ಅತಿಥಿ ಗಿರೀಶ್ ಶೆಟ್ಟಿ ತೆಳ್ಳಾರ್, ಗೌರವ ಅತಿಥಿ ಹೋಟೆಲ್ ಅಪೂರ್ವದ ಮಹೇಶ್ ಪೂಜಾರಿ ಉಪಸ್ಥಿತರಿದ್ದರು.
ಯಕ್ಷ ಪ್ರಿಯ ಬಳಗದ ವಿದ್ಯಾರ್ಥಿಗಳಿಂದ ಗುರು ನಾಗೇಶ್ ಕುಮಾರ್ ಪೊಳಲಿಯವರ ನಿರ್ದೇಶನದಲ್ಲಿ ” ಶ್ರಿ ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಿತು.
ಸುನಿತಾ ಶೆಟ್ಟಿಯವರು ಪ್ರಾರ್ಥನೆ ಮಾಡಿದ್ದು ಸಭಾಕಾರ್ಯಕ್ರಮವನ್ನು ವೈ. ಟಿ. ಶೆಟ್ಟಿಯವರು ನಿರ್ವಹಿಸಿದರು. ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಯಿತು.