
ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಭಾರತ್ ಬ್ಯಾಂಕ್;
ರವೀಂದ್ರನಾಥ್ ಎಂ ಭಂಡಾರಿ.
ಯಾವುದೇ ಆರ್ಥಿಕ ಸಂಸ್ಥೆ ಯಶಸ್ವಿ ಪಥದಲ್ಲಿ ಸಾಗಬೇಕಿದ್ದರೆ ಅಲ್ಲಿಯ ಸಿಬ್ಬಂದಿ ವರ್ಗ ಗ್ರಾಹಕರ ವಿಶ್ವಾಸವನ್ನು ಗಳಿಸಬೇಕು, ಅದರಲ್ಲಿ ತುಳು ಕನ್ನಡಿಗರ ಆಡಳಿತದ ಭಾರತ್ ಬ್ಯಾಂಕ್ ಗ್ರಾಹಕರ ವಿಶ್ವಾಸವನ್ನು ಗಳಿಸಿ ಯಶಸ್ವಿಯಾಗಿದೆ ಎಂದು ಹೇಳಲು ಹೆಮ್ಮೆ ಆಗುತ್ತದೆ. ನಾನು ಕಳೆದ 30 ವರ್ಷಗಳಿಂದ ಈ ಶಾಖೆಯಲ್ಲಿ ಸಂಬಂಧವನ್ನು ಇಟ್ಟುಕೊಂಡಿದ್ದೇನೆ ಇವರ ಸೇವಾ ಕಾರ್ಯಗಳು ನನ್ನಂಥ ಉದ್ಯಮಿಗಳಿಗೆ ಬಹಳಷ್ಟು ಸಹಕಾರಿಯಾಗುತ್ತದೆ .ಬ್ಯಾಂಕಿನ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವೆಲ್ಕಮ್ ಪ್ಯಾಕೇಜಿಂಗ್ ಅಂಡ್ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ರವೀಂದ್ರನಾಥ್ ಎಂ ಭಂಡಾರಿ ಅವರು ನುಡಿದರು.
ಅವರು ಅಂಧೇರಿ ಪೂರ್ವದ ಭಾರತ್ ಬ್ಯಾಂಕಿನ ಶಾಖೆಯ 30ನೇ ವರ್ಷದ ಸಂಭ್ರಮಾಚರಣೆಯನ್ನು ದೀಪ ಪ್ರಜ್ವಲಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬ್ಯಾಂಕಿನ ನಿರ್ದೇಶಕರಾದ ಗಣೇಶ್ ಡಿ ಪೂಜಾರಿ, ಸುರೇಶ್ ಸುವರ್ಣ, ನಿರಂಜನ್ ಪೂಜಾರಿ ಅವರು ಬ್ಯಾಂಕಿನ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಸಿಬ್ಬಂದಿಗಳು ಎಂಥ ಒತ್ತಡದ ಪರಿಸ್ಥಿತಿಯಲ್ಲಿದ್ದರೂ ಗ್ರಾಹಕರ ಭಾವನೆಗೆ ಧಕ್ಕೆ ಬರದಂತೆ ನೋಡಿಕೊಂಡು ಬ್ಯಾಂಕಿನ ವ್ಯವಹಾರವನ್ನು ಇಮ್ಮಡಿಗೊಳಿಸಿದ್ದಾರೆ ಎಂದು ನುಡಿದರು.
ಬ್ಯಾಂಕಿನ ಮಹಾಪ್ರಬಂದಕರಾದ ಜನಾರ್ಧನ್ ಪೂಜಾರಿಯವರು ಮಾತನಾಡಿ ಭಾರತ್ ಬ್ಯಾಂಕ್ ಅತಿ ವೇಗದಲ್ಲಿ ಗ್ರಾಹಕರ ಮನಸೆಳೆಯುವುದರೊಂದಿಗೆ ಹಲವಾರು ಪುರಸ್ಕಾರಗಳನ್ನು ಪಡೆದಿದೆ. ಈ ಪರಿಸರದಲ್ಲಿ ಭಾರತ ಬ್ಯಾಂಕ್ ನ ಶಾಖೆ ಎಲ್ಲಾ ರೀತಿಯಲ್ಲೂ ಗ್ರಾಹಕರನ್ನು ಸಂತೃಪ್ತಿಗೊಳಿಸಿದೆ ಎಂದು ನುಡಿದರು.
ಶ್ರೀ ಉಮಾಮಹೇಶ್ವರಿ ಮಂದಿರದ ಪ್ರಧಾನ ಅರ್ಚಕರಾದ ಎಸ್ ಎನ್ ಉಡುಪ ಅವರು ಗಣ ಹೋಮ, ನಾರಾಯಣ ಗುರುಗಳ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಿದರು.
ಈ ಸಮಾರಂಭಕ್ಕೆ ಬ್ಯಾಂಕಿನ ಕಾರ್ಯಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಉಪಕಾರ್ಯಧ್ಯಕ್ಷರಾದ ನ್ಯಾಯವಾದಿ ಸೋಮನಾಥ್ ಬಿ ಅಮೀನ್, ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿದ್ಯಾನಂದ ಕರ್ಕೇರ, ಜೊತೆ ಆಡಳಿತ ನಿರ್ದೇಶಕರಾದ ದಿನೇಶ್ ಬಿ ಸಾಲಿಯನ್ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಶುಭ ಹಾರೈಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ನಾರಾಯಣ ಗೌಡ, ಉದ್ಯಮಿಗಳಾದ ನಾಗರಾಜ್ ಪಡುಕೋಣೆ, ನಿತ್ಯ ರಾಮ್ ಪೂಜಾರಿ, ದಿವಾಕರ್ ಸುವರ್ಣ, ದಾನೇಶ್ ಶೆಟ್ಟಿ ಜಗಜೀವನ್ ಪೂಜಾರಿ, ರಮಾನಂದ ಸಾಲಿಯಾನ್, ಶರತ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಉಪಸ್ಥಿತರಿದ್ದ ಗ್ರಾಹಕರನ್ನು, ಹಿತೈಷಿಗಳನ್ನು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳನ್ನು, ಉದ್ಯಮಿಗಳನ್ನು ಅಂಧೇರಿ ಪೂರ್ವ ಶಾಖೆಯ ಮುಖ್ಯ ಪ್ರಬಂಧಕರಾದ ದಿನೇಶ್ ಪೂಜಾರಿಯವರು ಸ್ವಾಗತಿಸಿದರು, ಸಿಬ್ಬಂದಿ ವರ್ಗದವರು ಸಹಕರಿಸಿದರು.