
ಮುಂಬಯಿ ವಿನ್ಯಾಸ ಸಂಸ್ಥೆ “ಸುವಿದ”ದ ಪ್ರವರ್ತಕ, ಮುಂಬೈ ಕುಲಾಲ ಸಂಘದ ಹಿರಿಯ ಸದಸ್ಯ ದಿವಂಗತ ಸುಂದರ್ ಕರ್ಮರನ್ ಅವರ ಸುಪುತ್ರ ಸೂರಜ್ ಹಂಡೇಲ್ ಮತ್ತು ಜ್ಯೋತಿ ಸೂರಜ್ ಹಂಡೇಲ್ ಇವರ ಸುಪುತ್ರ ಕುಮಾರಿ ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ರಂಗ ಪ್ರವೇಶ ಸಮಾರಂಭವು ಅ. 20ರಂದು ಮೈಸೂರು ಅಸೋಷಿಯೇಷನ್ ಮಾಟುಂಗಾದ ಸಭಾಗ್ರಹದಲ್ಲಿ (ಮಧ್ಯ ರೈಲ್ವೆ) ನಡೆಯಿತು .
ನೃತ್ಯ ಗುರು ಆನಂದ ಸಚ್ಚಿದಾನಂದನ್ ಮತ್ತು ಜಯಲಕ್ಷ್ಮಿ ಆನಂದ್ ಇವರ ಶಿಷ್ಯೆ ಸುರವಿ ಹಂಡೇಲ್ ಇವರು ಈಗಾಗಲೇ ಭರತನಾಟ್ಯದಲ್ಲಿ ಉತ್ತಮ ತರಬೇತಿ ಪಡೆದಿದ್ದು ಒರ್ವ ಪ್ರತಿಭಾವಂತ ಭರತನಾಟ್ಯ ಕಲಾವಿದೆ.
ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ಸಂದರ್ಭದಲ್ಲಿ ಸೂರಜ್ ಮತ್ತು ಜ್ಯೋತಿ ಸೂರಜ್ ಅವರ ಪರಿವಾರದವರು ಹಿತೈಷಿಗಳು ಹಾಗೂ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯನ್ ಮತ್ತಿತರ ಪದಾಧಿಕಾರಿಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಮಂಗಳೂರು ಇದರ ಆಡಳಿತ ಮುಕ್ತೆಸರ ಪುರುಷೋತ್ತಮ್ ಕುಲಾಲ್ ಕಲ್ಬಾವ ಮತ್ತಿತರರು ಉಪಸ್ತರಿದ್ದು ಆಶೀರ್ವದಿಸಿದರು.