ಕಳೆದ ಕೆಲವು ದಿನಗಳಿಂದ ಬಾಟ್ಸಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನೀರಿನ ಪ್ರಕ್ಷುಬ್ದತೆ ಹೆಚ್ಚಳದ ನಂತರ ಮುಂಬೈ ನಾಗರಿಕರು ನೀರನ್ನು ಕುದಿಸಿ, ಫಿಲ್ಟರ್ ಮಾಡಿ ಬಳಸುವಂತ್ತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸಲಹೆ ನೀಡಿದೆ.
ಕಳೆದ ಮೂರರಿಂದ ನಾಲ್ಕು ದಿನಗಳಿಂದ ಭಟ್ಸಾ ಜಲಾಶಯದ ಜಲನಯನ ಪ್ರದೇಶದಲ್ಲಿ ನಿರಂತರ ಮಳೆ ದಾಖಲಾಗಿರುವುದರ ಪರಿಣಾಮ ಅಕ್ಟೋಬರ್ 21ರಿಂದ ನದಿ ನಾಲೆಯಲ್ಲಿ ನೀರಿನ ಪ್ರಕ್ಷುಬ್ದತೆಯ ಹೆಚ್ಚಳವನ್ನು ಗಮನಿಸಲಾಗಿದ್ದು, ಮುಂಬೈನ ಪೂರ್ವ ಉಪನಗರಗಳು ಮತ್ತು ನಗರ ಪ್ರದೇಶದ ಕೆಲವು ಕಡೆಗಳಲ್ಲಿ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಬಿ ಎಂ ಸಿ ಯ ಹೈಡ್ರಾಲಿಕ್ ಎಂಜಿನಿಯರಿಂಗ್ ವಿಭಾಗ ನೀರು ಶುದ್ದಿಕರಣ ಘಟಕದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಅದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ನಾಗರಿಕರನ್ನು ಸೇವಿಸುವ ಮೊದಲು ನೀರನ್ನು ಫಿಲ್ಟರ್ ಮಾಡಿ ಮತ್ತು ಕುದಿಸಿ ಎಂದು ಒತ್ತಾಯಿಸುತದೆ.
ಬಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಮುಂಬೈ ನಾಗರಿಕರಿಗೆ ಏಳು ಜಲ ಮೂಲಗಳಿಂದ ನೀರನ್ನು ಪೂರೈಸುತ್ತಿದೆ, ಕಳೆದ ಮೂರು ನಾಲ್ಕು ದಿನಗಳಿಂದ ಭಟ್ಸಾ ನದಿಯ ಜಲನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ 2024ರ ಅಕ್ಟೋಬರ್ 21ರಿಂದ ನದಿ ಕಾಲುವೆಗಳಿಗೆ ಪ್ರವೇಶಿಸುವ ನೀರು ಹೆಚ್ಚಿದ ಪ್ರಕ್ಷುಬ್ದತೆ ತೋರಿಸಿದೆ.