ಕುರ್ಲಾ ಪಶ್ಚಿಮ ಕಾಜುಪಾಡ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅಕ್ಟೊಬರ್ 25ರಂದು, ಶುಕ್ರವಾರ, ಮಧ್ಯಾಹ್ನ 3 ಗಂಟೆಗೆ “ಸಂಪೂರ್ಣ ಶ್ರೀ ದೇವಿ ಮಾಹಾತ್ಮೆ” ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಪ್ರಭೋದನ ಪ್ರತಿಷ್ಟಾನದ ಪ್ರಯೋಕತ್ವದಲ್ಲಿ, ಶ್ರೀ ಜ್ಞಾನಶಕ್ತಿ
ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವ್ರಜ ಕ್ಷೇತ್ರ ಪಾವಂಜೆ ಮೇಳದ ಕಲಾವಿದರು, ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾನಾಮ್ರತದೊಂದಿಗೆ ಯಕ್ಷಗಾನ ನಡೆಯಲಿದೆ.
ಯಕ್ಷಗಾನದ ನಡುವೆ ಚಾಂದಿವಲಿ ವಿಧಾನ ಸಭಾ ಕ್ಷೇತ್ರದ ಶಾಸಕ ದಿಲೀಪ್ ಲಾಂಡೆ (ಮಾಮ ) ಅವರನ್ನು ಸನ್ಮಾನಿಸಲಾಗುವುದು.
ತುಳು – ಕನ್ನಡಿಗರು, ಯಕ್ಷಗಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತ್ತೆ ಆಯೋಜಕರು ವಿನಂತಿಸಿದ್ದಾರೆ.
.
.