24.7 C
Karnataka
April 3, 2025
ಪ್ರಕಟಣೆ

    ಕುಲಾಲ ಸಂಘ ಮುಂಬಯಿ :  ಅ 27ರಂದು  94ನೇ ವಾರ್ಷಿಕ ಮಹಾಸಭೆ.



  

     ಮುಂಬಯಿಅ 25. ಮಹಾ ನಗರದ ಅತ್ಯಂತ ಹಿರಿಯ ಹಾಗೂ ಪ್ರತಿಷ್ಠಿತ ಜಾತಿಯ ಸಂಸ್ಥೆಗಳಲೊಂದಾದ ಕುಲಾಲ ಸಂಘ ಮುಂಬಯಿ ಇದರ 94ನೇ ವಾರ್ಷಿಕ ಮಹಾಸಭೆಯು ಅ.27ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ ಬಿಲ್ಲವ ಭವನ ,ಗುರುನಾರಾಯಣ ಮಾರ್ಗ ,ಸಂತಾಕ್ರುಜ್ (ಪೂ) ಮುಂಬಯಿ  ಇಲ್ಲಿ ಸಂಘದ ಅಧ್ಯಕ್ಷರಾದ ರಘು ಎ ಮೂಲ್ಯರವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.

      ಮಹಾಸಭೆಯಲ್ಲಿ ವಾರ್ಷಿಕ ವರದಿ, ಅಯ – ವ್ಯಯ ವಿವರವನ್ನು ಸಭೆಯ ಮುಂದಿಟ್ಟು ಮಂಜೂರು ಮಾಡಲಾಗುವುದು,ನೂತನ ಲೆಕ್ಕ ಪರಿಶೋದಕರ ನೇಮಕ , ಹಾಗೂ ಸಂಘದ ಹಿರಿಯ ಸಾಧಕರಾದ ಜಯರಾಮ್ ಕೆ ಮೂಲ್ಯ, ಬಾಂಡುಪ್, ಬಿ ಜಿ ಅಂಚನ್ ನೇರುಲ್, ಆನಂದ್ ಬಿ ಮೂಲ್ಯ ಇವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು

     ಸಂಘಕ್ಕೆ  ಶ್ರಮಿಸಿದವರಿಗೆ ಸನ್ಮಾನ : ದಿ . ಪಿ ಜಿ ಮೂಲ್ಯ ರೋಲಿಂಗ್ ಶೀಲ್ಡ್ ನ್ನು ಉದ್ಯಮಿ ಜಗದೀಶ್ ಬಂಜನ್ ರವರಿಗೆ .ದಿ.ಪಿ ಕೆ ಸಾಲಿಯಾನ್ ಸ್ಮರಣಾರ್ಥ ರೋಲಿಂಗ್ ಶೀಲ್ಡ್ ಸ್ಮರಣಿಕೆಯನ್ನು ಎಲ್ ಆರ್ ಮೂಲ್ಯ 

ದಿ .ಆರ್ ಎಂ  ಮಡ್ವ ಸ್ಮರಣಾರ್ಥ ರೋಲಿಂಗ್ ಶಿಲ್ಡನ್ನು ಅಶೋಕ್ ಬಿ ಕುಲಾಲ್ ರವರಿಗೆ ನೀಡಿ ಗೌರವಿಸಲಾಗುವುದು..

    ಬಂಟ್ವಾಳ ಬಾಬು ಸಾಲಿಯಾನ್ ಸ್ಮರಣಾರ್ಥ ಸ್ಕಾಲರ್ ಷಿಪ್ ನ್ನು  ಮುಂಬಯಿ ನಗರದಲ್ಲಿ SSC ಮೆರಿಟ್ ಲಿಸ್ಟ್ ನಲ್ಲಿ ಪಾಸಾದವರಿಗೆ,ಶಾಂತ ಸುಬ್ಬಯ್ಯ ಸ್ಕಾಲರ್ ಶಿಪ್, HSC ನಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತಿರ್ಣರಾದ ಮಕ್ಕಳನ್ನು ಸನ್ಮಾನಿಸಲಾಗುವುದು.

  ಈ ಸಭೆಯಲ್ಲಿ ಅಮೂಲ್ಯ ತ್ರೈಮಾಸಿಕ ಪತ್ರಿಕೆಯ 26ನೇ ವರ್ಷದ ಹುಟ್ಟು ಹಬ್ಬದ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗುವುದು.

  ಮನರಂಜನೆಯ ಕಾರ್ಯಕ್ರಮದ ಅಂಗವಾಗಿ ಉಪ ಸಮಿತಿಯ ಸದಸ್ಯರಿಂದ  ನೃತ್ಯ ಕಾರ್ಯಕ್ರಮ ಹಾಗೂ ನವಿ ಮುಂಬಯಿ ಮಹಿಳಾ ವಿಭಾಗದವರಿಂದ ಅನಿಲ್ ಹೆಗ್ಡೆ ಪೆರ್ಡೂರು ಇವರು ಬರೆದ “ಮಾಮಿ ಮರ್ಮಲ್”ಹಾಸ್ಯಮಯ ಕಿರುನಾಟಕ ಜರಗಲಿದೆ.

    ಈ ವಾರ್ಷಿಕ ಮಹಾ ಸಭೆಗೆ ನಮ್ಮ ಸದಸ್ಯರೆಲ್ಲರೂ ಕ್ಲಪ್ತ ಸಮಯಕ್ಕೆ ಹಾಜರಿದ್ದು ಈ ಮಹಸಭೆಯನ್ನು ಯೆಶಸ್ವಿಗೊಳಿಸಬೇಕಾಗಿ ಸಂಘದ ಗೌರವ ಅಧ್ಯಕ್ಷರು ದೇವದಾಸ್ ಕುಲಾಲ್,ಉಪಾಧ್ಯಕ್ಷ ಡಿ ಐ ಮೂಲ್ಯ . ಗೌ ಪ್ರದಾನ ಕಾರ್ಯದರ್ಶಿ ಕರುಣಾಕರ ಸಾಲಿಯಾನ್,ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್,ಮತ್ತು ಎಲ್ಲ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ವಿನಂತಿಸಿದ್ದಾರೆ.

Related posts

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ವರ್ಲಿ : ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ (ರಿ), ನ 17 ರಂದು ಮಾಲೆ ಧಾರಣೆ

Mumbai News Desk

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk

ಮಲಾಡ್ ಕನ್ನಡ ಸಂಘ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಜ. 22 ರಂದು ಡೊಂಬಿವಲಿಯ ಶ್ರೀ ಜಗದಂಬ ಮಂದಿರದಲ್ಲಿ ಅಯೋಧ್ಯ ಮೂರ್ತಿ ಪ್ರತಿಷ್ಠೆಯ ಅಂಗವಾಗಿ ವಿಶೇಷ ಪೂಜೆ

Mumbai News Desk