ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ದೀಪಾವಳಿ ಹಬ್ಬದ ಆಚರಣೆಯ ಕಾರ್ಯಕ್ರಮವು ತಾರೀಕು 31/10/24 ರಂದು ಮಂಗಳೂರು ಮೂಲತ್ವ ಸಾನಿಧ್ಯದಲ್ಲಿ ತಾರೆ ತೋಟ ಸುವರ್ಣ ರೆಸಿಡೆನ್ಸಿ ಇಲ್ಲಿ ನಡೆಯಲಿದೆ ಆದಿನ ಬೆಳಗಿನ ಜಾವ ಅರ್ಚನೆಯಾಗಿ ತದನಂತರ ಸ್ಪೂರ್ತಿ ಭಜನಾ ಮಂಡಳಿ ಪದವಿ ನಂಗಡಿ ಇವರಿಂದ ಭಜನಾ ಸಂಕೀರ್ತನ, ಧಾರ್ಮಿಕ ಕಾರ್ಯಕ್ರಮ, ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಇವರಿಗೆ ಅಭಿನಂದನ ಕಾರ್ಯಕ್ರಮ ನಡೆಯಲಿದೆ ತದನಂತರ ಅನ್ನದಾನವು ನಡೆಯಲಿದೆ ಎಂದು ಟ್ರಸ್ಟನ ಸಂಸ್ಥಾಪಕರಾದ ಶ್ರೀ ಪ್ರಕಾಶ್ ಮೂಲತ್ವ ತಿಳಿಸಿರುತ್ತಾರೆ ಎಲ್ಲರಿಗೂ ಆದರದ ಸ್ವಾಗತ.