
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಈ ಬಾರಿ 56 ಸಾಧಕರನ್ನು ಹಾಗೂ 20 ಸಂಸ್ಥೆಗಳನ್ನು ಆಯ್ಕೆಮಾಡಲಾಗಿದೆ.
ಬಂಟ್ವಾಳ ತಾಲೂಕಿನ ತುಂಬೆಯ ರಂಗ ಕಲಾವಿಧ, ಕಲಾ ಪೋಷಕ, ಸಾಮಾಜಿಕ, ಧಾರ್ಮಿಕ ಮುಂದಾಳು ಸದಾಶಿವ ತುಂಬೆ ಇವರಿಗೆ 2024-25ರ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸದಾಶಿವ ಅವರು ಇಂಚರ ಕಲಾವಿದರು ತುಂಬೆ ಎಂಬ ನಾಟಕ ತಂಡವನ್ನು ಕಟ್ಟಿ, ಅ ಮೂಲಕ ಕಲಾ ಪ್ರತಿಭೆ ಗುರುತಿಸಿ, ಕಲಾವಿದರನ್ನು ಬೆಳೆಸುವ ಹಾಗೂ ಕಲಾ ತಂಡಗಳನ್ನು ಪೋಷಿಸುವ ಕಾರ್ಯ ಮಾಡುತ್ತಿರುವರು.ಸದಾಶಿವ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿ ಸೇವೆಗೈಯುತ್ತಿರುವರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪಡೆದ ಸದಾಶಿವ ತುಂಬೆ ಅವರಿಗೆ ಮುಂಬಯಿಯ ಉದ್ಯಮಿ, ಮುಂಬಯಿ ನ್ಯೂಸ್ ನ ನಿರ್ದೇಶಕರಾದ ಕುಮಾರ್ ಎನ್ ಬಂಗೇರ ಅಭಿನಂದನೆ ಸಲ್ಲಿಸಿದ್ದಾರೆ.
.