
ದೀಪಾವಳಿ ಹಬ್ಬದ ಪ್ರಯುಕ್ತ ಕಾರ್ಯಕಾರಿ ಸಮಿತಿವತಿಯಿಂದ ಕೌಟುಂಬಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ :ನವಂಬರ್ 3. ರವಿವಾರ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆಯ ವತಿಯಿಂದ ನವಂಬರ್ 3 ರಂದು ಕಾರ್ಯಕಾರಿ ಸಮಿತಿಯ ಕುಟುಂಬದೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಫ್ರೆಂಡ್ಸ್ ಪಾರ್ಟಿ ಹಾಲ್ ನಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು.





ಅಧ್ಯಕ್ಷರಾದ ರಾಜು ಮೊಗವೀರ ತಗ್ಗರ್ಸೆಯವರು ಸಮ್ಮಿಲನಕ್ಕೆ ಬಂದ ಸದಸ್ಯರನ್ನು ಮತ್ತು ಅವರ ಕುಟುಂಬದವರೆಲ್ಲರನ್ನು ಪುಷ್ಪ ಗೌರವನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಡೊಂಬಿವಲಿ ಸಮಿತಿಯ ಸದಸ್ಯರಾದ ಚಂದ್ರ ನಾಯ್ಕ್ ರವರು ಸದಸ್ಯರಿಗೆ ವಿವಿಧ ರೀತಿಯ ಗೇಮ್ಸ್ ಗಳನ್ನು ಆಡಿಸುದರ ಮೂಲಕ ಸದಸ್ಯರನ್ನು ಹಾಗೂ ಅವರ ಮಕ್ಕಳನ್ನು ಹುರಿದುಂಬಿಸಿದರು. ಸದಸ್ಯರ ಮಕ್ಕಳಿಂದ ನ್ರತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯದರ್ಶಿ ಸಂತೋಷ ಪುತ್ರನ್ ರವರು ಡೊಂಬಿವಲಿ ಸಮಿತಿಯು ನಡೆದು ಬಂದ ರೀತಿ ಮತ್ತು ಮುಂಬರುವ ಕಾರ್ಯಕ್ರಮದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಉಪಾಧ್ಯಕ್ಷರಾದ ಬಾಬು ಮೊಗವೀರರವರು ಮಾತನಾಡುತ್ತ ಡೊಂಬಿವಲಿ ಸಮಿತಿಯು ಈ ವರುಷ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಫೆಬ್ರವರಿ ತಿಂಗಳಲ್ಲಿ ಡೊಂಬಿವಲಿ – ಕಲ್ಯಾಣ ಪರಿಸರದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗಾಗಿ ಹೂವಿನ ರಂಗೋಲಿ ಸ್ಪರ್ಧೆ ಮತ್ತು ಮಾರ್ಚ್ ತಿಂಗಳಲ್ಲಿ *ಕುಂದರಂಜನಿ 2024* ಬಹು ವಿಜೃಂಭಣೆಯಿಂದ ಜನದಟ್ಟನೆಯಲ್ಲಿ ತುಂಬಿರುವ ಸಭಾಗ್ರಹದಲ್ಲಿ ಜರಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಜುಲೈ ತಿಂಗಳಲ್ಲಿ ಡೊಂಬಿವಲಿ – ಕಲ್ಯಾಣ ಪರಿಸರದ ಸದಸ್ಯರ ಮಕ್ಕಳಿಗಾಗಿ ಶಾಲಾ ಪರಿಕರಗಳನ್ನು ವಿತರಿಸಲಾಯಿತು.
ಅಕ್ಟೋಬರ್ ತಿಂಗಳಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಜನರಿಗೆ ಉಚಿತ ನೇತ್ರ ತಪಾಸಣೆ ಮತ್ತು ಸುಮಾರು 35 ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ನಡೆದಿದೆ. ಇನ್ನು ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ಮಾಡಲು ನಿಮ್ಮೆಲ್ಲರ ಸಲಹೆ, ಸಹಕಾರ ಬೇಕು ಎಂದು ನುಡಿದರು. ಕೊನೆಗೆ ಊಟದ ನಂತರ ಅಧ್ಯಕ್ಷರವತಿಯಿಂದ ಸರ್ವ ಸದಸ್ಯರಿಗೂ ಸಿಹಿ ತಿಂಡಿ ಹಾಗೂ ಉಡುಗೊರೆ ವಿತರಿಸಲಾಯಿತು.
.
.