
ಎಲ್ಲರಿಗೂ ನ್ಯಾಯವನ್ನು ಖಚಿತ ಪಡಿಸಿ, ಮಾನವ ಹಕ್ಕುಗಳಿಗೆ ಸರಿಯಾದ ಗೌರವ ನೀಡಿ, ಮಾನವ ಹಕ್ಕುಗಳ ರಕ್ಷಕರನ್ನು ರಕ್ಷಿಸುವ ಸರಕಾರೆತರ ಸಂಸ್ಥೆ ಅಂತಾರಾಷ್ಟ್ರೀಯ ಮಾನವಧಿಕಾರ ಫೆಡರೇಶನ್ ವಿಶ್ವದಾದ್ಯಂತ ಕಾರ್ಯ ನಿರತವಾಗಿದೆ.
ಭಾರತದಲ್ಲೂ ಈ ಸಂಸ್ಥೆ ವಿವಿಧ ರಾಜ್ಯಗಳ್ಳಲ್ಲಿ ಕಛೇರಿಯನ್ನು ಹೊಂದಿ ಸೇವೆಗೈಯುತಿದೆ. ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಷನ್ ಮಹಾರಾಷ್ಟ್ರ ಇದರ ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಮುಂಬೈಯ ಹಿರಿಯ ಪತ್ರಕರ್ತ ಯೋಗೇಶ್ ವಿ ಪುತ್ರನ್ ಅವರನ್ನು ನಿಯುಕ್ತಿಗೊಳಿಸಿದೆ.ಯೋಗೇಶ್ ಪುತ್ರನ್ ಅವರು ಕಳೆದ 2 ವರ್ಷಗಳಿಂದ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯೋಗೇಶ್ ಪುತ್ರನ್ ಓರ್ವ ಪತ್ರಕರ್ತನಾಗಿ ಮುಂಬಯಿಯಲ್ಲಿ ಚಿರಪರಿಚಿತರಾಗಿದ್ದು, ಸುಮಾರು 30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವರು.
ಮುಂಬೈಯ ಈ ಸಂಜೆ ಸುದ್ಧಿ, ಜನವಾಹಿನಿ, ಕರ್ನಾಟಕ ಮಲ್ಲ, ಉದಯವಾಣಿ, ದೆಹಲಿ ವಾರ್ತೆ, ಟೈಮ್ಸ್ ಅಪ್ ಕುಡ್ಲ (ತುಳು ) ಪತ್ರಿಕೆಗಳ್ಳಲ್ಲಿ ಯೋಗೇಶ್ ಕಾರ್ಯ ನಿರ್ವಹಿಸಿರುವರು.
ಪ್ರಸ್ತುತ ಮುಂಬಯಿಯ ಪ್ರಥಮ ದ್ರಶ್ಯ ವಾಹಿನಿ ಮುಂಬಯಿ ನ್ಯೂಸ್ ನಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕಳೆದ 14 ವರ್ಷಗಳಿಂದ ದುಡಿಯುತ್ತಿರುವರು.
ಮಹಾನಗರದ ಸಹಕಾರಿ ರಂಗದ ಮೊಗವೀರ ಬ್ಯಾಂಕ್ ನ ಉದ್ಯೋಗಿಯಾಗಿ 20 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದ ಬಳಿಕ ಯೋಗೇಶ್ ಅವರು ಪೂರ್ಣ ಪ್ರಮಾಣದಲ್ಲಿ ಮುಂಬಯಿ ನ್ಯೂಸ್ ನಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿರುವರು.
ಯೋಗೇಶ್ ಪುತ್ರನ್ ಅವರು ಮೊಗವೀರ ವ್ಯವಸ್ಥಾಪಕ ಮಂಡಳಿಯ ಸದಸ್ಯನಾಗಿ, ಕರ್ನಾಟಕ ಸಂಘ ಮಾಟುಂಗ, ಜಯಶ್ರೀಕ್ರಷ್ಣ ಪರಿಸರ ಪ್ರೇಮಿ ಸಮಿತಿ, ಕನ್ನಡಿಗ ಕಲಾವಿದ ರ ಪರಿಷತ್ ಮಹಾರಾಷ್ಟ್ರ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ, ವಸಯಿ ಕರ್ನಾಟಕ ಸಂಘ, ವಸಯಿ ತಾಲೂಕ ಮೊಗವೀರ ಸಂಘ, ಮುಂಬೈ ಫೋಟೋಗ್ರಾಪರ್ಸ್ ಎಸೋಸಿಯೇಷನ್, ಆಲ್ ಇಂಡಿಯಾ ಮೀಡಿಯಾ ಎಸೋಸಿಯೇಷನ್ ನ ಸದಸ್ಯರಾಗಿ ಸಕ್ರಿಯರಾಗಿರುವರು.
ಯೋಗೇಶ್ ಪುತ್ರನ್ ಅವರ ಧೀರ್ಘಕಾಲದ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್, ಅವರನ್ನು ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನಿಯುಕ್ತಿಗೋಳಿಸಿದ್ದು, ಈ ಸಂದರ್ಭದಲ್ಲಿ ಮುಂಬಯಿ ನ್ಯೂಸ್ ಟೀಮ್ ಅವರಿಗೆ ಶುಭ ಹಾರೈಸುತ್ತದೆ.




.
.
.