24.7 C
Karnataka
April 3, 2025
ಪ್ರಕಟಣೆ

ನ.17 ರಂದು ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವಾರ್ಷಿಕ ಕ್ರೀಡೋತ್ಸವ ದಂಗಲ್ 2024



ಹೊರನಾಡ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಡೊಂಬಿವಲಿ ಕರ್ನಾಟಕ ಸಂಘದ ಕ್ರೀಡಾ ವಿಭಾಗದ ವತಿಯಿಂದ ನವೆಂಬರ್ 17ರಂದು ರವಿವಾರ  ಬೆಳಿಗ್ಗೆ  8  ಗoಟೆ ಯಿಂದಾ ಡೊಂಬಿವಲಿ ಪೂರ್ವದ ಜೀಮ್ಖಾನಾ ಮೈದಾನದಲ್ಲಿ  ಡೊಂಬಿವಲಿ ಠಾಕುರ್ಲಿ ಹಾಗೂ ಕೊಪರ್ ಪರಿಸರದ ಕನ್ನಡಿಗರಿಗಾಗಿ  ವಾರ್ಷಿಕ ಕ್ರೀಡೋತ್ಸವ ದಂಗಲ್ 2024 ನ್ನು ಅಯೋಜಿಸಲಾಗಿದೆ.                                       

     ಈ ವೈಶಿಷ್ಟ್ಯಪೂರ್ಣ ಕ್ರೀಡೋತ್ಸವದಲ್ಲಿ ವಿವಿಧ ವಯೋಮಾನದ ಸ್ಪರ್ದಾಳುಗಳಿಗಾಗಿ ಅನೇಕ ವಿಶೇಷ ಸ್ಪರ್ದೆಗಳನ್ನು ಏರ್ಪಡಿಸಲಾಗಿದ್ದು  ,ಅವುಗಳಲ್ಲಿ  ಪರಿಸರದ ಸಂಘ ಸಂಸ್ಥೆಗಳ ಪಥ ಸಂಚಲನ,ಪುರುಷ ಹಾಗೂ ಮಹಿಳೆಯರಿಗಾಗಿ ಖೋಖೋ, ಹಗ್ಗ ಜಗ್ಗಾಟ ಹಾಗೂ ದಂಪತಿಗಳ ಮೂರುಕಾಲಿನ ಓಟದ ಸ್ಪರ್ಧೆ ಈ ವರ್ಷದ ಕ್ರೀಡೋತ್ಸವದ ವಿಶೇಷತೆ ಎಂದೆನಿಸಲಿದೆ. 5 ವರ್ಷ ದಿಂದ 60 ವರ್ಷ ಮೇಲ್ಪಟ್ಟ ಪುರುಷರಿಗೆ ಮತ್ತು ಮಹಿಳೆಯರಿಗೆ ವಿಶೇಷ ಆಟೋಟ ಸ್ಪರ್ದೆಗಳು ನಡೆಯಲಿದ್ದು ಯಶಸ್ವಿ ಕ್ರೀಡಾಪಟು ಹಾಗೂ ತಂಡಗಳಿಗೆ ಆಕರ್ಷಕ ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು.                         

    ರಿಲೇ ಒಟದ ಸ್ಪರ್ಧೆಯಲ್ಲಿ  ಮಹಿಳೆ ಹಾಗೂ ಪುರುಷರಿಗಾಗಿ ಪ್ರತ್ಯೇಕ ಸ್ಪರ್ಧೆಗಳಿದ್ದು,18ವರ್ಷ ಮೇಲ್ಪಟ್ಟ ಸ್ಪರ್ಧಾಳುಗಳಿಗೆ ಅವಕಾಶ ಇದ್ದು,ವಯಸ್ಸಿನ ದೃಢೀಕರಣಕ್ಕಾಗಿ ಆಧಾರ ಕಾರ್ಡ್ ಅಥವಾ ಇತರೆ ದಾಖಲಾತಿಯನ್ನು ಪ್ರಸ್ತುತ ಪಡಿಸುವದು ಅವಶ್ಯ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವದು.                                         

     *ಪಥ ಸಂಚಲನ* ಸ್ಪರ್ಧೆಯಲ್ಲಿ ಪ್ರತಿ ತಂಡಗಳಲ್ಲಿ ಕನಿಷ್ಠ 20 ಸದಸ್ಯರು ಭಾಗವಹಿಸುವದು  ಕಡ್ಡಾಯವಾಗಿದ್ದು,ಥೀಮ್ ತಂಡದ ಆಯ್ಕೆಯಾಗಿರುತ್ತದೆ. ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ 20 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ,ದ್ವಿತೀಯ ಬಹುಮಾನ 15 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ. ತೃತೀಯ ಬಹುಮಾನ 10 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು.                                   

    *ಹಗ್ಗಜಗ್ಗಾಟ ಸ್ಪರ್ಧೆ*- ಈ ಸ್ಪರ್ಧೆಯಲ್ಲಿ 18ವರ್ಷದ ಮೇಲ್ಪಟ್ಟ ಪುರುಷರು ಹಾಗೂ ಮಹಿಳೆಯರು ಭಾಗವಹಿಸ ಬಹುದಾಗಿದ್ದು ,ಪ್ರತಿ ತಂಡದಲ್ಲಿ 9 ಸ್ಪರ್ದಾಳುಗಳ ಜೊತೆಗೆ ಒಂದು ಹೆಚ್ಚುವರಿ ಸ್ಪರ್ದಾಳುವಿಗೆ ಅವಕಾಶವಿದೆ.ಪ್ರತಿ ಪುರಷರ ತಂಡದ ಗರಿಷ್ಠ ತೂಕ 750 ಕೆ.ಜೆ (ಪಾದರಕ್ಷೆ ರಹಿತ)ಹಾಗೂ ಮಹಿಳೆಯರ ತಂಡದ ಗರಿಷ್ಠ ತೂಕ 700 ಕೆ.ಜಿ (ಪಾದರಕ್ಷೆ ರಹಿತ) ಸ್ಪರ್ದಾಳುಗಳು ಸ್ಪರ್ಧೆ ಪ್ರಾರಂಭವಾಗುವ 2 ಗoಟೆ ಮುನ್ನ ತೂಕ ಪರಿಶೀಲನೆಗಾಗಿ ಸರತಿ ಸಾಲಿನಲ್ಲಿ ಉಪಸ್ಥಿತರಿರ ಬೇಕು. ಸ್ಪರ್ಧೆಯಲ್ಲಿಯ ವಿಜೇತರಿಗೆ ಪ್ರಥಮ ಬಹುಮಾನ 25 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ಹಾಗೂ ದ್ವಿತೀಯ ಬಹುಮಾನ 20 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು .                                           

   *ಖೋಖೋ* ಸ್ಪರ್ಧೆಯಲ್ಲಿ 15 ವರ್ಷ ಮೇಲ್ಪಟ್ಟ ಸ್ಪರ್ದಾಳುಗಳು ಭಾಗವಹಿಸ  ಬಹುದಾಗಿದ್ದು,ಪ್ರತಿ ತಂಡದಲ್ಲಿ 9 ಸ್ಪರ್ದಾಳು ಹಾಗೂ 2 ಹೆಚ್ಚುವರಿ ಸ್ಪರ್ದಾಳುಗಳು  ಇರಬೇಕು. ಸ್ಪರ್ಧೆಯ ಸಮಯ 7 ನಿಮಿಷದ್ದಾಗಿದ್ದು , ಸ್ಪರ್ದಾವಿಜೇತ ತಂಡಗಳಿಗೆ ಪ್ರಥಮ ಬಹುಮಾನ 20ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ .ದ್ವಿತೀಯ ಬಹುಮಾನ 15ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವದು.                                             

    ಕ್ರೀಡೋತ್ಸವದಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮ,ಯಾವುದೇ ವಾದ ವಿವಾದಗಳಿಗೆ ಅವಕಾಶ ಇರುವದಿಲ್ಲಾ. ಸ್ಪರ್ಧೆಯ ನಿಯಮ ಹಾಗೂ ಶರತ್ತಗಳನ್ನು ಬದಲಿಸುವ ಹಕ್ಕನ್ನು ಸಂಘವೂ ಕಾಯ್ದಿರಿಸಿದೆ.                       

   ಹೊರನಾಡಿನಲ್ಲಿ ಕನ್ನಡದ ರಾಯಭಾರಿಯಂತೆ ಕಾರ್ಯ ನಿರ್ವಹಿಸುತ್ತಿರುವ ತಮ್ಮದೇ ಆದ ಡೊಂಬಿವಲಿ ಕರ್ನಾಟಕ ಸಂಘದ  ಕ್ರೀಡಾ ವಿಭಾಗ ಆಯೋಜಿಸಿದ್ದ ಈ ವೈಶಿಷ್ಟ್ಯಪೂರ್ಣ ಕ್ರೀಡೋತ್ಸವದಲ್ಲಿ  ಸಮಸ್ತ ಕನ್ನಡ ಮನಸ್ಸು ಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಕ್ರೀಡೋತ್ಸವದ ಯಶಸಿಗೆ ಸಹಕರಿಸಬೇಕೆಂದು  ಸಂಘದ ಕಾರ್ಯಕಾರಿ ಮಂಡಳಿಯ ಪರವಾಗಿ ಸಂಘದ ಅಧ್ಯಕ್ಷರಾದ ಸುಕುಮಾರ ಎನ್ ಶೆಟ್ಟಿ. ಉಪಾಧ್ಯಕ್ಷರಾದ ಲೋಕನಾಥ ಎ ಶೆಟ್ಟಿ. ಕಾರ್ಯಾಧ್ಯಕ್ಷರಾದ ಡಾ.ದಿವಾಕರ  ಟಿ.ಶೆಟ್ಟಿ ಇಂದ್ರಾಳಿ.  ಉಪ ಕಾರ್ಯಾಧ್ಯಕ್ಷ ದೇವದಾಸ ಕುಲಾಲ್, ಗೌ.ಕಾರ್ಯದರ್ಶಿ ಪ್ರೋ ಅಜೀತ ಬಿ ಉಮರಾಣಿ . ಕೋಶಾಧಿಕಾರಿ ತಾರನಾಥ್ ಎಸ್. ಅಮೀನ್, ದಿನೇಶ್ ಬಿ ಕುಡ್ವ, ಜೊತೆ ಕೋಶಾಧಿಕಾರಿ ಶ್ರೀಮತಿ ವಿಮಲಾ ವಿ ಶೆಟ್ಟಿ

ಕ್ರೀಡಾ ಸಮೀತಿಯ ಕಾರ್ಯಾಧ್ಯಕ್ಷರಾದ ಪ್ರಭಾಕರ ಆರ್ ಶೆಟ್ಟಿ ಹಾಗೂ ಕಾರ್ಯದರ್ಶಿ   ರವಿ ಎಸ್. ಸನಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಬಹುದು 

ಸಂಘದ ಮುಖ್ಯ ಕಚೇರಿ : 0251-2483833/7738758589,

ಸುಕುಮಾರ ಎನ್ ಶೆಟ್ಟಿ – 9820296840,

ಡಾ. ದಿವಾಕರ ಟಿ ಶೆಟ್ಟಿ ಇಂದ್ರಾಳಿ – 9820591800,

ದೇವದಾಸ ಎಲ್ ಕುಲಾಲ್ – 9820507848,

ಪ್ರಭಾಕರ್ ಆರ್ ಶೆಟ್ಟಿ – 9820593109,

ರವಿ ಎಸ್ ಸನಿಲ್ – 9820067621,

ಜಗನ್ನಾಥ ವಿ ಶೆಟ್ಟಿ – 9819807205

Related posts

 ಪೆ 25,: ಮುಂಬಯಿಯ  ಕುಲಾಲ ಸಂಘದ ಯುವ ವಿಭಾಗದವತಿಯಿಂದ ಕ್ರೀಡೋತ್ಸವ  

Mumbai News Desk

ನವೆಂಬರ್ 24. ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ : 36ನೇ ವಾರ್ಷಿಕ ಮಹಾಪೂಜೆ ಮತ್ತು ಭಜನಾ ಮಂಗಳೋತ್ಸವ

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಮಹತೋಭಾರ ಶನೀಶ್ವರ ದೇವಸ್ಥಾನ – ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ 

Mumbai News Desk

ಸಾರ್ವಜನಿಕ ಶ್ರೀ ಶನೀಶ್ವರ ಸೇವಾ ಸಮಿತಿ ವಸಯಿ, ಫೆ.10ರಂದು ಬೆಳ್ಳಿಹಬ್ಬದ ಅಂಗವಾಗಿ ಶ್ರೀ ಶನಿ ಮಹಾಪೂ ಜೆ.

Mumbai News Desk

ಮೇ 4 ಮತ್ತು 5ರಂದು ನಿಟ್ಟೂರು ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ.

Mumbai News Desk