September 6, 2026
Mumbai News Kannada
ಸುದ್ದಿ

ರಂಗ ಸುದರ್ಶನ (ರಿ) ಸಸಿಹಿತ್ಲು ಇವರಿಂದ, ದೈವ ನಡೆ -ಚಿಂತನ ಮಂಥನ, ರಂಗ ಸ್ನೇಹ ಸಂಗಮ – ಡಾ.ಸುರೇಂದ್ರ ಕುಮಾರ್ ಹೆಗ್ಡೆ “ರಂಗ ಭೀಷ್ಮ” ಬಿರುದು ಪ್ರಧಾನ






ಕಲಾರಾಧನೆ ಸರಸ್ವತಿಯ ಆರಾಧನೆ – ಡಾ. ಸತ್ಯಪ್ರಕಾಶ್ ಶೆಟ್ಟಿ

ಮುಂಬಯಿ : ಸಸಿಹಿತ್ತ್ಲುವಿನ ರಂಗ ಸುದರ್ಶನ ವು ಸಸಿಯಾಗಿದ್ದು ಇದೀಗ ಹೆಮ್ಮರವಾಗಿ ಬೆಳಿದಿದೆ. ಇದು ಪರಮಾನಂದ ಸಾಲ್ಯನರ ಅಲೌಕಿಕ ಶಕ್ತಿಯಿಂದ ಸಾಧ್ಯ. ಸರಸ್ವತಿಯು ಅಚಲೆಯಾಗಿದ್ದು ಯಾರಿಂದಲೂ ಕಸಿದುಕೊಳ್ಳಲು ಅಸಾಧ್ಯ. ಕಲೆಗೆ ವಿವಿಧ ರೂಪಗಳಿವೆ, ಕಲಾರಾಧನೆಯು ಸರಸ್ವತಿಯ ಆರಾಧನೆ, ಎಂದು ನಗರದ ಖ್ಯಾತ ಸಮಾಜ ಸೇವಾ, ವೈದ್ಯ ಡಾ. ಸತ್ಯಪ್ರಕಾಶ್ ಶೆಟ್ಟಿ ನುಡಿದರು.

ನ. ೧೦ ರಂದು ಕರ್ನಾಟಕ ಕರಾವಳಿಯ ಕಲಾ ಸಂಸ್ಥೆ ರಂಗ ಸುದರ್ಶನ (ರಿ) ಸಸಿಹಿತ್ಲು ಇವರು ಸಾಂತಾ ರೋಸ್ ಪೂರ್ವದ ಬಿಲ್ಲವರ ಎಸೋಸಿಯೇಶನ್ ನ ಬಿಲ್ಲವ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಆಯೋಜಿಸಿದ ದೈವ ನಡೆ -ಚಿಂತನ ಮಂಥನ, ರಂಗ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ-ಕನ್ನಡಿಗರ ಕಲಾವಿದರ ಪರಿಷತ್ತ ಮಹಾರಾಷ್ಟ್ರ ದ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ “ರಂಗ ಭೀಷ್ಮ “ಬಿರುದು ಪ್ರಧಾನ
ಹಾಗೂ ಶಿವಪುರ್ಸಾದ ಬಬ್ಬರ್ಯ ನಾಟಕ ಪ್ರದರ್ಶನ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪರಮಾನಂದ ಸಾಲ್ಯಾನ್ ರವರಂತವರಿಗೆ ನೀಡಬೇಕಿದ್ದು ಇಂದು ಕೇಳಿ ಪಡಕೊಳ್ಳುವ ಪರಿಸ್ಥಿತಿ ಬಂದಿದೆ. ನಾಟಕಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರೊಂದಿಗೆ ಮನಸ್ಸಿಗೆ ಹಾಗೂ ಆರೋಗ್ಯಕ್ಕೆ ಉತ್ತಮ ಪರಿಣಾಮ ಬೀಳುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪರಮಾನಂದ ಸಾಲ್ಯಾನ್ ಅವರು ತುಳು ನಾಡಿನ ನಮ್ಮೆಲ್ಲರಿಗೆ ದೈವ ಮುಖ್ಯ. ಧೈವ ನಿಂದನೆಯಿಂದ ಸಮಸ್ಯೆ ಸಾಧ್ಯ. ಧೈವ ಆರಾದನೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷ, ಅದ್ಭುತ ರಂಗಕರ್ಮಿ, ಕಲಾ ಸಂಘಟಕ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಅವರಿಗೆ ರಂಗ ಭೀಷ್ಮ ಬಿರುದು ಪುರಸ್ಕಾರ ನೀಡಿ ವೇದಿಕೆಯ ಎಲ್ಲಾ ಗಣ್ಯರು ಸನ್ಮಾನಿಸಿದರು.
ಸನ್ಮಾನ ಪತ್ರವನ್ನು ಪತ್ರಕರ್ತ ಹರೀಶ್ ಹೆಜಮಾಡಿ ವಾಚಿಸಿದರು.

ಮುಖ್ಯ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ, ಹೋಬಳಿ ಮುಂಬಯಿಯ ಮಾಜಿ ಅಧ್ಯಕ್ಷ ಗೋಪಾಲ ಪುತ್ರನ್, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಯ ಉಪಾಧ್ಯಕ್ಷ ಸುರೇಶ್ ಕುಮಾರ್ ಕದ್ರಿ, ತೀಯಾ ಸಮಾಜ ಮುಂಬಯಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ,
ಬಿಲ್ಲವರ ಅಸೋಸಿಯೇಷನ್ ಮುಂಬಯಿ ನಾಲಸೋಪರ ಕಾರ್ಯಾಧ್ಯಕ್ಷ ಗಣೇಶ ಸುವರ್ಣ, ಕಲಾ ಪೋಷಕ ಉದ್ಯಮಿ ಪದ್ಮನಾಭ ಬಿ ಅಮೀನ್ ಸಸಿಹಿತ್ಲು, ಸಮಾಜ ಸೇವಕ ಸದಾನಂದ ಅಂಚನ್, ಕಲಾ ಪೋಷಕಿ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮಹಿಳಾ ಮುಖ್ಯಸ್ಥೆ ಕಲಾವತಿ ಎಚ್. ಕೋಟ್ಯಾನ್ ಮತ್ತು ಒಕ್ಕಲಿಗ ಸಂಘ ಮಹಾರಾಷ್ಟ್ರದ ಗೌರವ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಉಪಸ್ಥಿತರಿದ್ದರು.

ಶೇಖರ್ ಸಾಲ್ಯಾನ್ ಸಸಿಹಿತ್ಲು ಅವರ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮವನ್ನು ಆಧ್ಯಪಾಡಿ ಬಾಲಕೃಷ್ಣ ಶೆಟ್ಟಿ ಮತ್ತು ಹರೀಶ್ ಹೆಜಮಾಡಿ ನಿರ್ವಹಿಸಿದ
ಪದ್ಮನಾಭ ಸಸಿಹಿತ್ಲು , ಶೇಖರ್ ಸಾಲ್ಯಾನ್ ಸಸಿಹಿತ್ಲು, , ಚಂದ್ರಕಾಂತ್ ಸಾಲ್ಯಾನ್ ಸಸಿಹಿತ್ಲು, ಸಹಕರಿಸಿದರು.

ಬಬ್ಬರ್ಯನ ದೈವ ನಡೆ-ಧರ್ಮದ ಚೌಕಟ್ಟಿನಲ್ಲಿ ನಂಬಿಕೆ,ಆಚರಣೆ ವಿಷಯಾಧಾರಿತವಾಗಿ ಚಿಂತನ-ಮಂಥನ ಚರ್ಚಾ ಕಾರ್ಯಕ್ರಮ ವು ಕರ್ನಾಟಕ ಸಂಘ ಮಾಟುಂಗಾದ ಅಧ್ಯಕ್ಷ, ರಂಗ ತಜ್ಞ ಡಾ.ಭರತ್ ಕುಮಾರ್ ಪೊಲಿಪು ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಬಿ.ಎಸ್.ಕೆ. ಬಿ ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷ ಸುರೇಶ್ ರಾವ್ ಕಟೀಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಚಿಂತನ ಮಂಥನ ಚಿಂತಕರಾಗಿ ಖ್ಯಾತ ನಾಟಕಕಾರ ಜಾನಪದ ವಿದ್ವಾಂಸ ನಾರಾಯಣ ಶೆಟ್ಟಿ ನಂದಳಿಕೆ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ, ಅಂಕಣಕಾರ ಕಲಾ ಪೋಷಕ ಪೇತ್ರಿ ವಿಶ್ವನಾಥ ಶೆಟ್ಟಿ, ಉಪನ್ಯಾಸಕಿ ಕವಯಿತ್ರಿ ಡಾ. ಜಿ. ಪಿ. ಕುಸುಮ ಅವರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಮುಖ್ಯ ಸಂಪನ್ಮೂಲ ಅತಿಥಿಗಳಾಗಿ ಉದ್ಯಮಿ ಅಭಿನಯ ಮಂಟಪ ಇದರ ಅದ್ಯಕ್ಷ ಬಾಲಕೃಷ್ಣ ಡಿ ಶೆಟ್ಟಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಉಪಾಧ್ಯಕ್ಷ ಹರೀಶ್ ಡಿ. ಸಾಲಿಯಾನ್, ಉಪಸ್ಥಿತರಿದ್ದರು.
“ಚಾವಡಿ ಜತ್ತಿನ ಬೈದೆರ್” ಕಿರು ತುಳು ರೂಪಕ ರಂಗ ಸುದರ್ಶನ ಕಲಾವಿದರಿಂದ ಪ್ರದರ್ಶನಗೊಂಡಿತು.
ಸಭಾ ಕಾರ್ಯಕ್ರಮದ ಬಳಿಕ ನಾಟಕ ಕರಾವಳಿಯ ತಂಡ ಪರಮ ಪದ್ಮ ಕಲಾವಿದರಿಂದ “ಶಿವಪುರ್ಸಾದ ಬಬ್ಬರ್ಯೆ” ಐತಿಹಾಸಿಕ ನಾಟಕ ಪ್ರದರ್ಶನಗೊಂಡಿತು.

=====

ಮಹಾರಾಷ್ಟ್ರ ಎಲ್ಲಾ ಕಲವಿದರಿಗೆ ನೀಡಿದ ಗೌರವ – ಡಾ. ಸುರೇಂದ್ರ ಕುಮಾರ್ ಹೆಗ್ಡೆ

ಇಂದು ಈ ವೇದಿಕೆಯಲ್ಲಿ “ಶಿವಪುರ್ಸಾದ ಬಬ್ಬರ್ಯೆ” ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ನನಗೆ ಸಿಕ್ಕಿದ ಪ್ರಶಸ್ತಿ ಸನ್ಮಾನವನ್ನು ಬಬ್ಬರನ ಪ್ರಸಾದವೆಂದು ಸ್ವೀಕರಿಸುತ್ತಿರುವೆನು. ಇದು ಮಹಾರಾಷ್ಟ್ರ ಎಲ್ಲಾ ಕಲಾವಿದರಿಗೆ ನೀಡಿದ ಗೌರವ. ದೈವಾರದನೆ ಮಾಡಲು ಅಲ್ಲಿ ದೈವ ಚಾಕರಿದವ ಬೇಕು, ಪೂಜಾರಿ ಬೇಕು, ನಲಿಕೆದವ ಬೇಕು, ವಾಧ್ಯಕ್ಕೆ ದೇವಾಡಿಗರು ಬೇಕು, ಮದಿಪು ಹೇಳಲು ಬಂಟರು ಬೇಕು. ಒಟ್ಟಿನಲ್ಲಿ ಎಲ್ಲಾ ಜಾತಿ ಬಾಂದವರನ್ನು ಒಟ್ಟು ಸೇರಿಸಿ ನಡೆಸುವ ಹಾಗೂ ಮನೆಯ ಯಜಮಾನರ ಮಾರ್ಗದರ್ಶನದಲ್ಲಿ ಇಡೀ ಕುಟುಂಬದವರನ್ನು ಒಂದೆಡೆ ಸೇರಿಸುವ ಶಕ್ತಿ ದೈವಾರಾದನೆಗೆ ಇದೆ. ದೈವ ಸ್ಥಾನ ಬ್ರಹ್ಮಕಲಸ ಅಗತ್ಯ ಇಲ್ಲ ದೈವಾರಾಧನೆ ತುಳುನಾಡಿನ ಮೂಲ ನಂಬಿಕೆ ಎಂದು ನುಡಿದರು

===
ಬಬ್ಬರ್ಯನ ದೈವ ಎಲ್ಲ ಸಮುದಾಯಕ್ಕೆ ಸೇರಿದ್ದು, ಸಸಿಹಿತ್ಲು ವಿನಲ್ಲಿ ಭಗವತಿಯ ಪುಣ್ಯ ಕ್ಷೇತ್ರವಿದ್ದು ಯಾವುದೇ ಒಳ್ಳೆಯ ಕಾರ್ಯಕ್ಕೆ ಮೊದಲು ಭಗವತಿ ಮಾತೆಯ ಆಶ್ರೀರ್ವಾದ ಪಡೆಯುದನ್ನು ಕಾಣಬಹುದು. ಇಂದು ಪ್ರಶಸ್ತಿಯನ್ನು ಪಡೆದ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಆ ಪ್ರಶಸ್ತಿಗೆ ಅರ್ಹರು. ಪರಮಾನಂದ ಸಾಲ್ಯನರ ನೇತೃತ್ವದಲ್ಲಿ ನಡೆಯುತ್ತಿರುವ ಇಂದಿನ ನಾಟಕಕ್ಕೆ ಶುಭ ಹಾರೈಕೆ,
ಚಂದ್ರಶೇಖರ ಬೆಳ್ಚಡ, ತೀಯಾ ಸಮಾಜ ಮುಂಬಯಿಯ ಮಾಜಿ ಅಧ್ಯಕ್ಷ

====
ಇಂದಿನ ವೇದಿಕೆಯಲ್ಲಿ ಬಬ್ಬರ್ಯನ ದೈವದ ಚಿಂತನ ಮಂಥನ ನಡೆಯಿತು. ಕಲಾವಿದರ ನಾಡಾದ ಸಸಿಹಿತ್ಲುವಿನ ಕಲಾವಿದರ ಮೂಲಕ ರಂಗ ಸುದರ್ಶನ ಇನ್ನಷ್ಟು ಇಂತಹ ನಾಟಕ ಪ್ರದರ್ಶನಗೊಳ್ಳಲಿ. ಇದರಿಂದ ಯುವ ಜನಾಂಗಕ್ಕೆ ದೈವ ದೇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುವಂತಾಗಲಿ

ಗಣೇಶ ಸುವರ್ಣ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ನಾಲಸೋಪರ ಕಾರ್ಯಾಧ್ಯಕ್ಷ

ಪ್ರೇಕ್ಷಕರ ಪ್ರೋತ್ಸಾಹದಿಂದ ರಂಗ ಚಟುವಟಿಕೆಗಳ ಯಸಸ್ವಿ ಸಾಧ್ಯ. ವಿಶ್ವಾಸ, ಶ್ರದ್ಧಾ, ಭಕ್ತಿ ಯ ಪರಿಣಾಮ ನಮ್ಮ ಜೀವನದಲ್ಲಿ ಪರಿಣಾಮ ಬೀಳುತ್ತದೆ. ಇದರಿಂದ ಶಕ್ತಿ ಒಲಿದು ಬರುತ್ತದೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಸಂಸ್ಕಾರ ನೀಡಬೇಕಾಗಿದೆ. ಪರಮಾನಂದ ಸಾಲ್ಯಾನ್ ರ ಪರಿಶ್ರಮ ಹಾಗೂ ಸಾಧನೆಯಿಂದ ಉನ್ನತ ಮಟ್ಟಕ್ಕೇರಲು ಕಾರಣ.
ಕಲಾವತಿ ಎಚ್. ಕೋಟ್ಯಾನ್, ಕಲಾ ಪೋಷಕಿ ಸಸಿಹಿತ್ಲು ಬಿಲ್ಲವರ ಹಿತವರ್ಧಕ ಸಂಘ ಮಹಿಳಾ ಮುಖ್ಯಸ್ಥೆ



Related posts

ಪತ್ರಕರ್ತ, ಸಾಹಿತಿ, ರಂಗಕರ್ಮಿ ದಿ|ಪರಮಾನಂದ ವಿ.ಸಾಲ್ಯಾನ್ ರವರಿಗೆ ನುಡಿ ನಮನ,.

Mumbai News Desk

ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಸದಸ್ಯ ಪ್ರವೀಣ್ ಪೂಜಾರಿ (50) ನಿಧನ: ಮಂಡಳಿಯಿಂದ ತೀವ್ರ ಸಂತಾಪ

Mumbai News Desk

ಮುಂಬೈ ರೈಲು ಪ್ರಯಾಣಿಕರ ಗಮನಕ್ಕೆ: ಮೇ 19ರವರೆಗೆ ಸಿಎಸ್‌ಎಂಟಿ ರೈಲು ಸಂಚಾರ ಸ್ಥಗಿತ; ಮಂಗಳೂರು ಸೂಪರ್‌ಫಾಸ್ಟ್ ಪ್ರಯಾಣ ಥಾಣೆಯಲ್ಲೇ ಅಂತ್ಯ

Mumbai News Desk

ವಿಶ್ವಬೆಳಕು ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ

Mumbai News Desk

ಬೆಂಗಳೂರು – ಮುಂಬೈ ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ: ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ಸೇವೆ

Mumbai News Desk

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk