
ಭಾಷೆ, ಸಂಸ್ಕೃತಿ ಕಟ್ಟುವುದಕ್ಕೆ ಸದಸ್ಯರು ಸಹಕಾರ ನೀಡಬೇಕು: ಸುಜಾತ ಆರ್ ಶೆಟ್ಟಿ
ಚಿತ್ರ ವರದಿ ದಿನೇಶ್ ಕುಲಾಲ್,
ಮುಂಬಯಿ ನ 12.ಕನ್ನಡ ಸಂಘ ಸಾಂತಾಕ್ರೂಜ್ ಇದರ 67ನೇ ವಾರ್ಷಿಕ ಮಹಾಸಭೆ ಹಾಗೂ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮವು. ನವಂಬರ್ 7ರಂದು ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಇದರ ಗೌರವ ಅಧ್ಯಕ್ಷ ಎಲ್ ವಿ ಅಮೀನ್ ಅವರ ಉಪಸ್ಥಿತಿಯಲ್ಲಿ
ಅಧ್ಯಕ್ಷೆ ಸುಜಾತ ಆರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಪ್ರಾರಂಭದಲ್ಲಿ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು ಹಾಗೂ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜಾತ ಆರ್ ಶೆಟ್ಟಿ ಅವರು ಸಂಘವು ಎಲ್ಲರ ಸಹಕಾರದಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು . ಹಿರಿಯರು ಕಟ್ಟಿದ ಈ ಸಂಘಟನೆಯನ್ನು ಅವರ ಮಾರ್ಗದರ್ಶನದಲ್ಲಿ ಹಾಗೂ ಆದರ್ಶದೊಂದಿಗೆ ಸದಾ ಸಾಮಾಜಿಕ ಚಟುವಟಿಕೆಗಳೊಂದಿಗೆ ಪರಿಸರದ ಜನರನ್ನು ಒಂದುಗೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನಸಹಾಯವನ್ನು ನೀಡುತ್ತಾ ಬಂದಿದ್ದೇವೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದಲ್ಲಿ ಸಕ್ರಿಯರಾಗಬೇಕು, ಹೊಸಬರಿಗೆ ಸಂಘದಲ್ಲಿ ಅವಕಾಶವಿದೆ ಆದರೆ ಯಾರೂ ಕೂಡ ಸಕ್ರಿಯರಾಗಿ ಸೇವೆ ತೊಡಗಿಕೊಳ್ಳುವುದು ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸೇವಾ ಚಟುವಟಿಕೆಗಳಲ್ಲಿ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ದಾನಿಗಳನ್ನು ಪ್ರೋತ್ಸಾಹಕರನ್ನು ಈ ಸಂದರ್ಭದಲ್ಲಿ ನಾನು ಸ್ಮರಿಸುತ್ತೇನೆ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಪ್ರೇಮನಾಥ ಶೆಟ್ಟಿ ಮಾತನಾಡಿ ಅವರು ಮಾತನಾಡಿ ಕನ್ನಡ ಸಂಘ ಸಾಂತಾಕ್ರೂಜ್ ಬಹಳ ಉತ್ತಮ ಸಮಾಜ ಪರ ಕಾರ್ಯಗಳನ್ನು ಮಾಡುತ್ತಾ ಬಂದಿದೆ ಇದರ ಕಾರ್ಯ ಚಟುವಟಿಕೆಗಳನ್ನು ನಾನು ಹತ್ತಿರದಿಂದ ಬಲ್ಲೆ. ಮಕ್ಕಳಿಗೆ ಶೈಕ್ಷಣಿಕ ಸಹಾಯವನ್ನು ನೀಡುವಂತ ಕಾರ್ಯಕ್ರಮ ಮಾಡುತ್ತಿರುವುದು ಅಭಿನಂದನೀಯ. ಇಂಥ ಕಾರ್ಯಗಳಿಗೆ ದಾನಿಗಳ ಸಹಕಾರವು ಸದಾ ಇರುತ್ತದೆ ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ ಭೋಜ ಶೆಟ್ಟಿ, ಸಿಎ ಪ್ರಕಾಶ್ ಶೆಟ್ಟಿ ಶ್ರೀಮತಿ ರತ್ನ ಶೆಟ್ಟಿ, ಶ್ರೀಮತಿ ಚೇತನ ಅಮೀನ್ , ಸಲಹಾ ಸಮಿತಿಯ , ಸಂಘ ಉಪಾಧ್ಯಕ್ಷ ಭುಜಂಗ ಆರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಜಯ ವಿ ಪೂಜಾರಿ, ಗೌರವಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಜಯ್ ಕುಮಾರ್ ಕೆ ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ಪಿ ಶೆಟ್ಟಿ, ಮೊದಲದವ್ರು ಉಪಸ್ಥಿತರಿದ್ದರು,
ವಿಜಯಕುಮಾರ್ ಕೋಟ್ಯಾನ್ ಸ್ವಾಗತಿಸಿದರು,
ಶಕೀಲಾ ಶೆಟ್ಟಿ ದತ್ತು ಸ್ವೀಕರಿಸಲಿರುವ ವಿದ್ಯಾರ್ಥಿಗಳ ಜಾತಿಯನ್ನು ವಾಚಿಸಿದರು
ಕಾರ್ಯಕ್ರಮದಲ್ಲಿ ಸದಸ್ಯರಾದ ಚಂದ್ರ ಜೆ ಕೋಟ್ಯಾನ್ ಬಿ ರವೀಂದ್ರ ಅಮೀನ್, ಪ್ರಸನ್ನ ಶೆಟ್ಟಿ,ಶ್ರೀಮತಿ ವನಿತಾ ನೋಂದಾ, ಶ್ರೀಮತಿ ಲಕ್ಷ್ಮಿ ಎನ್ ಕೋಟ್ಯಾನ್, ಶ್ರೀಮತಿ ಶಿಕಲಾ ಪಿ ಶೆಟ್ಟಿ ಶ್ರೀಮತಿ ಸುಮಾ ಎಂ ಪೂಜಾರಿ, ಶ್ರೀಮತಿ ಶಾಲಿನಿ ಜಿ ಶೆಟ್ಟಿ, ಪ್ರಕಾಶ್ ಸಿ ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಜಯ್ ಕುಮಾರ್ ಕೆ ಕೋಟ್ಯಾನ್, ಕಾರ್ಯದರ್ಶಿ ಶಕೀಲಾ ಪಿ ಶೆಟ್ಟಿ, ಲಿಂಗಪ್ಪ ಅಮೀನ್, ಸುಜಾತ ಉಚ್ಚಿಲ್, ವಾಸುದೇವರಾವ್, ಶಿವರಾಮ್ ಕೋಟ್ಯಾನ್, ಲೀಲಾ ಸಾಲಿಯಾನ್
ಮೊದಲಾದವರು ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಸಹಕರಿಸಿದರು
, ಈ ಸಂದರ್ಭದಲ್ಲಿ ದಾನಿಗಳ ಹಸ್ತದಿಂದ ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮವು ಜರಗಿತು. ಪರಿಸರದ ತುಳು ಕನ್ನಡಿಗರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡಿಗರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಸಂಘ ಬೆಳೆದಿದೆ:
ಎಲ್ ವಿ ಅಮೀನ್
ಸಂಘದ ಗೌರವಾಧ್ಯಕ್ಷರಾದ ಎಲ್ ವಿ ಅಮೀನ್ ಅವರು ಮಾತನಾಡಿ ಕಳೆದ 67ವರ್ಷಗಳಿಂದ ಕನ್ನಡ ಸಂಘ ಸಾಂತಾಕ್ರೂಜ್ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಪರಿಸರದಲ್ಲಿ ಬೆಳೆದು ನಿಂತಿದೆ. ಯುವಜನರು ಮುಂದೆ ಬಂದು ಈ ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ. ಸಂಘವು ನಿರಂತರ ಶೈಕ್ಷಣಿಕ ಸಹಾಯ ಹಾಗೂ ಆರ್ಥಿಕ ಸಹಾಯಗಳೊಂದಿಗೆ ಜನರ ಕಷ್ಟ ಸುಖಗಳೊಂದಿಗೆ ಸ್ಪಂದಿಸುತ್ತಾ ಬಂದಿರುತ್ತದೆ. ಇನ್ನು ಮುಂದೆ ಎಲ್ಲರ ಸಹಕಾರದಿಂದ ಸಂಘ ಇನ್ನಷ್ಟು ಬೆಳೆಯ ಬೇಕಾಗಿದೆ ಎಂದರು.