ಮುಂಬಯಿಯ ಪ್ರತಿಷ್ಟಿತ ಸಾಮಾಜಿಕ ಸಂಘಟನೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ 82ನೇ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ 1ರ ಆದಿತ್ಯವಾರ, ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರ ತನಕ, ಚರ್ಚ್ ಗೇಟ್ ಬಳಿಯ ಕರ್ನಾಟಕ ಸ್ಪೋರ್ಟಿಂಗ್ ಎಸೋಸಿಯೇಶನ್ ಮೈದಾನದಲ್ಲಿ ಜರಗಲಿದೆ.
ಸಂಘದ ಗೌರವ ಅಧ್ಯಕ್ಷ ಸುರೇಶ್ ಆರ್ ಕಾಂಚನ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲಿರುವರು.
ಗೌರವ ಅತಿಥಿಗಳಾಗಿ ಸಮಾಜದ ಗಣ್ಯರುಗಳಾದ ಗೋಪಾಲ ಪುತ್ರನ್, ಮಹಾಬಲ ಕುಂದರ್, ರಮೇಶ್ ಬಂಗೇರ, ಸಂತೋಷ ಪುತ್ರನ್, ಕಿಶೋರ್ ಬಂಗೇರ, ರತ್ನಾಕರ ಚಂದನ್, ಪ್ರದೀಪ್ ಚಂದನ್, ಸಿ. ಕೆ. ನಾಯ್ಕ್ ಮತ್ತು ಉದಯ ಕೋಟೇಶ್ವರ ಪಾಲ್ಗೊಳ್ಳರಿರುವರು.
ಕ್ರೀಡಾಕೂಟದಲ್ಲಿ 5 ರಿಂದ 60 ವರ್ಷದೊಳಗಿನ ಸಮಾಜ ಬಾಂದವರು ಅವರ ವಯೋಮಿತಿಗನುಗುಣವಾಗಿ ಕ್ರೀಡೆಗಳಲ್ಲಿ ಭಾಗವಹಿಸ ಬಹುದು.
ಪಶ್ಚಿಮ ಮತ್ತು ಮದ್ಯ ವಲಯದ ಪುರುಷ/ಮಹಿಳೆಯರ ಹಗ್ಗ ಜಗ್ಗಾಟ ಕ್ರೀಡಾಕೂಟದ ವಿಶೇಷ ಆಕರ್ಷಣೆಯಾಗಲಿದೆ.
ದಿನವಿಡೀ ನಡೆಯುವ ಕ್ರೀಡಾಕೂಟದಲ್ಲಿ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ವಾರ್ಷಿಕ ಕ್ರೀಡೋತ್ಸವವನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವಂತೆ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವ ಕಾರ್ಯದರ್ಶಿ ಗಣೇಶ್ ಮೆಂಡನ್, ಗೌರವ ಕೋಶಾಧಿಕಾರಿ ಸತೀಶ್ ಶ್ರೀಯಾನ್, ಕ್ರೀಡಾ ಕಾರ್ಯದರ್ಶಿಗಳಾದ ಅಶೋಕ್ ಮೆಂಡನ್, ಉಮೇಶ್ ಮೊಗವೀರ ಮತ್ತು ಕೇಂದ್ರ ಕಛೇರಿಯ ಆಡಳಿತ ಮಂಡಳಿಯ ಸದಸ್ಯರು ವಿನಂತಿಸಿದ್ದಾರೆ.

next post