


ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ನ ಕಾರ್ಯಕ್ರಮ ಸಾಯಿ ಪರಿವಾರ್ ಸೇವಕರು ಗುರುತಿಸಿದ 200 ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಸಾವಿರಾರು ಜನರ ಪ್ರಾಣ ಕಾಪಾಡಿದ *ಈಶ್ವರ್ ಮಲ್ಪೆ* ಕಲಶೆಯಲ್ಲಿಟ್ಟ ತೆನೆಗೆ ಹಾಲೆರೆದು ಉದ್ಳಾಟಿಸಿದರು. ಬಿಜೆಪಿ ದ.ಕ ಜಿಲ್ಲಾ ಅಧ್ಯಕ್ಷ *ಸತೀಶ್ ಕುಂಪಲ* ಅಧ್ಯಕ್ಷತೆ ವಹಿಸಿದ್ದರು, ವಿಶೇಷ ಅತಿಥಿಗಳಾಗಿ ಬರ್ಕೆ ಪ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷ *ಯಜ್ಞೇಶ್ ಬರ್ಕೆ*, ಮಂಗಳೂರು ಯಾಂತ್ರಿಕ ಮೀನುಗಾರರ ಸಹಕಾರಿ ಸಂಘ ದ ಅಧ್ಯಕ್ಷ *ವರದರಾಜ್ ಬಂಗೇರ ಉಳ್ಳಾಲ*, ಅಸ್ತೃ ಗ್ರೂಪ್ ಅಪ್ ಕಂಪೆನೀಸ್ ನ ಸಿ.ಇ.ಒ *ಲಾಂಚುಲಾಲ್ ಕೆ.ಎಸ್*, ತುಳು ಚಲನಚಿತ್ರ ನಟ *ಸ್ವರಾಜ್ ಶೆಟ್ಟಿ*, ಆಗಮಿಸಿದ್ದರು. ಸಾಯಿ ಪರಿವಾರ್ ನ ಟ್ರಸ್ಟಿಗಳಾದ ಗಣೇಶ್ ಅಂಚನ್, ಗೀತೇಶ್ ಕುತ್ತಾರ್, ಮಟನ್ ರಾಜಾ, ಪುರುಷೋತ್ತಮ ಕಲ್ಲಾಪು ಉಪಸ್ಥಿತರಿದ್ದರು. ಸ್ಥಾಪಕ ಟ್ರಸ್ಟಿ ಪ್ರವೀಣ್ ಎಸ್ ಕುಂಪಲ ನಿರೂಪಿಸಿ, ಸ್ಥಾಪಕ ಸದಸ್ಯೆ ಧನಲಕ್ಷ್ಮಿ ಗಟ್ಟಿ ಸ್ವಾಗತಿಸಿದರು, ರಜನೀಶ್ ನಾಯಕ್ ವಂದಿಸಿದರು.