
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಜನ ಸಾಮಾಜಿಕ, ಧಾರ್ಮಿಕ ಸೇವಾ ಕರ್ತರಿಗೆ ಸನ್ಮಾನ,
ಮುಂಬಯಿ ನ 19. ಮಂಗಳೂರು ಮತ್ತು ಮುಂಬೈ ನಗರದಲ್ಲಿ ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಬಂದಿರುವ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಆಶ್ರಯದಲ್ಲಿ ನವೆಂಬರ್ 23ರಂದು ವಿಜಯ ಕಲಾವಿದರು ಕಿನ್ನಿಗೋಳಿ ಮುಂಬೈ ಪ್ರವಾಸದ ಪ್ರಥಮ ನಾಟಕ “ಅಮ್ಮ ಆಮುಂಡರ “ಉದ್ಘಾಟನಾ ಕಾರ್ಯಕ್ರಮ ಸಾಂತಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಸಂಜೆ 5:30ಕ್ಕೆನಡೆಯಲಿದೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರ ದ ಅತಿಥಿಗಳಾಗಿ ಜ್ಯೋತಿಷಿ ಡಾ. ಎಂ ಜೆ ಪ್ರವೀಣ್ ಭಟ್ , ಮುಂಬೈ ಬಂಟರ ಸಂಘದ ಎಸ್ಎಮ್ ಶೆಟ್ಟಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಸಾಂತಕ್ರೂಸ್ ಪೂರ್ವದ ಶ್ರೀಮಂತ್ರದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಬಂಜನ್,ಉದ್ಯಮಿ ಬಾಲಕೃಷ್ಣ ಶೆಟ್ಟಿ ಉಳೆಪಾಡಿ, ಕುಲಾಲ ಸಂಘ ಮುಂಬೈ ಚರ್ಚ್ ಗೇಟ್- ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, , ಸಾಪಲ್ಯ ಸೇವಾ ಸಂಘ ಮುಂಬೈಯ ಅಧ್ಯಕ್ಷ ಶ್ರೀನಿವಾಸ್ ಸಾಪಲ್ಯ, ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಸಂಸ್ಥೆಯ ನಿರ್ದೇಶಕಿ ಉಷಾ ವಿ ಶೆಟ್ಟಿ , ಗೊರೆಗಾವ್ ಪೂರ್ವದ ನಿತ್ಯಾನಂದ ಡೈಸ್& ಟೂಲ್ಸ್ ಆಡಳಿತ ನಿರ್ದೇಶಕ ಶ್ರೀಧರ್ ಮೂಲ್ಯ ಇವರು ಪಾಲ್ಗೊಳ್ಳಲಿದ್ದಾರೆ,
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್ , ಮತ್ತು ಸಂಘದ ಆಡಳಿತಗೆ ಒಳಪಟ್ಟ ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು
ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾವರ್ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಕುಲಾಲ್ ಮಂಗಳದೇವಿ, ಟ್ರಸ್ಟಿಗಳಾದ ಮಾಸ್ಟರ್ ಬಿ. ಸೀತಾರಾಮ ಕುಲಾಲ್. ನ್ಯಾಯವಾದಿ ಲಕ್ಷ್ಮಣ್ ಕುಂದರ್ ಬಿ ನಾಗೇಶ್ ಕುಲಾಲ್. ದಿನೇಶ್ ಕುಲಾರ್, ಪ್ರೇಮಾನಂದ ಕುಲಾಲ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.