ಮಂಗಳೂರು ನ 21. ಸಾಯಿಶಕ್ತಿ ಕಲಾ ಬಳಗದ ವತಿಯಿಂದ ಮಂಗಳೂರಿನ ಪುರಭವನದಲ್ಲಿ *”ಜೋಡು ಜೀಟಿಗೆ” ಪೌರಾಣಿಕ ಕಥಾಭಾಗದ ಪ್ರಥಮ ಪ್ರದರ್ಶನದ ಉದ್ಘಾಟನೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಐಕಳ ಹರೀಶ್ ಶೆಟ್ಟಿ ಅವರು
ಪೌರಾಣಿಕ ನಾಟಕಗಳಿಂದಾಗಿ ಕಲಾಭಿಮಾನಿಗಳು ಧರ್ಮದ ಜಾಗೃತಿಯಲ್ಲಿ ನಡೆಯಲು ಸಾಧ್ಯವಾಗಲಿ. ನಾಟಕ ಕಲಾಪ್ರೇಕ್ಷಕರ ಮನಸ್ಸನ್ನು ಗೆಲ್ಲುವಂತಾಗಲಿ. ನಿರಂತರ ಪ್ರದರ್ಶನಗೊಂಡು ಕಲಾವಿದರಿಗೆ ಹೆಚ್ಚು ಅವಕಾಶ ಲಭಿಸುವಂಥಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ ಹಾಗೂ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.*
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಶಿರಿಡಿ ಸಾಯಿಬಾಬಾ ಮಂದಿರದ ಟ್ರಸ್ಟಿ ಬಿಪಿನ್ ದಾಸ್ ಖೋಲೆ, ಹರೀಶ್ ಆರಿಕೋಡಿ, ಜೆ. ಆರ್. ಲೋಬೊ, ವಿಶ್ವಾಸ್ ದಾಸ್, ಲಾವಣ್ಯ ವಿಶ್ವಾಸ್ ದಾಸ್, ಕವಿತಾ ಐವನ್ ಡಿಸೋಜ, ಮಲ್ಲಿಕಾ ಪಕ್ಕಳ, ಕರ್ನೂರು ಮೋಹನ್ ರೈ, ದಿನೇಶ್ ರಾವ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನೆ ಬಳಿಕ ಲಾವಣ್ಯ ವಿಶ್ವಾಸ್ ದಾಸ್ ನಿರ್ಮಾಣದ,ಕೀರ್ತನ್ ಭಂಡಾರಿ, ಕುಳಾಯಿ ರಚಿಸಿರುವ,ಬಿ.ಎಸ್.ಕಾರಂತ್ ಇಂಚರ ಇವರು ಸಂಗೀತ ನಿರ್ದೇಶನದ,ಗೌರವ್ ಶೆಟ್ಟಿಗಾರ್ ಮಠದಕಣಿ ನಿರ್ವಹಣೆಯ,ಸಾಯಿಶಕ್ತಿ ಕಲಾ ಬಳಗದ ಕಲಾವಿದರು ಅಭಿನಯಿಸಿದ ಜೋಡು ಜೀಟಿಗೆ” ಪೌರಾಣಿಕ ನಾಟಕದ
ಪ್ರಥಮ ಪ್ರದರ್ಶನ ನಡೆಯಿತು,