
ಮುಂಬಯಿ ನ 22. ಕುಲಾಲ ಸಂಘ ಮುಂಬಯಿ ಇದರ 2024-26 ರ ಸಾಲಿನ ಅವಧಿಗೆ ಪದಾಧಿಕಾರಿಗಳನ್ನು ನ 18 ರಂದು ಜರಗಿದ ಹಳೆಯ ಹಾಗೂ ಹೊಸ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ 2 ವರ್ಷದ ಕಾಲಾವಧಿಗೆ ಆಯ್ಕೆ ಮಾಡಲಾಯಿತು.
ಕುಲಾಲ ಸಂಘ ಮುಂಬಯಿ ಇದರ ಅಧ್ಯಕ್ಷರಾಗಿ ರಘು ಎ ಮೂಲ್ಯರವರನ್ನು ಪುನರಾಯ್ಕೆ ಮಾಡಲಾಯಿತು. ಗೌರಾವಧ್ಯಕ್ಷರಾಗಿ ದೇವದಾಸ್ ಕುಲಾಲ್, ಉಪಾಧ್ಯಕ್ಷರಾಗಿ ಡಿ ಐ ಮೂಲ್ಯ, ಗೌ .ಪ್ರ. ಕಾರ್ಯದರ್ಶಿಯಾಗಿ ಕರುಣಾಕರ ಸಾಲಿಯಾನ್. ಉಪಕಾರ್ಯದರ್ಶಿ ಲಕ್ಷ್ಮಣ್ ಸಿ ಮೂಲ್ಯ ಉಪ ಕಾರ್ಯದರ್ಶಿ ಸುನಿಲ್ ಕುಲಾಲ್. ಕೋಶಾಧಿಕಾರಿ ಯಾಗಿ ಜಯ ಅಂಚನ್. ಜೊತೆ ಕೋಶಾಧಿಕಾರಿ ರೇಣುಕಾ ಸಾಲಿಯಾನ್. ಕುಲಾಲ ಭವನ ಬಿಲ್ಡಿಂಗ್ ಕಮಿಟಿ ಕಾರ್ಯಾಧ್ಯಕ್ಷರಾಗಿ ಗಿರೀಶ್ ಬಿ ಸಾಲಿಯಾನ್. ಉಪಕಾರ್ಯಾಧ್ಯಕ್ಷರಾಗಿ: ಸುನಿಲ್ ಸಾಲಿಯಾನ್. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ: ಸುಚಿತಾ ಡಿ ಬಂಜಣ್.,
ಅಮೂಲ್ಯ ತ್ರೈಮಾಸಿಕ ಪತ್ರಿಕೆಯು ಸಂಪಾದಕರಾಗಿ ಆನಂದ್ ಬಿ ಮೂಲ್ಯ.,ಗುರುವಂದನಾ ಭಜನಾ ಮಂಡಳಿ ಆಧ್ಯಾತ್ಮಿಕ ಸಮಿತಿ ಕಾರ್ಯಾಧ್ಯಕ್ಷರಾಗಿ:ಸುಂದರ ಎನ್ ಮೂಲ್ಯ,ಮೆಂಬರ್ ಶಿಪ್ ಕಮಿಟಿ ಕಾರ್ಯಾಧ್ಯಕ್ಷರಾಗಿ ಸುಕುಮಾರ್ ಸಾಲಿಯಾನ್.ವೈದ್ಯಕೀಯ ಸಮಿತಿ ಕಾರ್ಯಾಧ್ಯಕ್ಷರಾಗಿ ಜಯರಾಜ್ ಪಿ ಸಾಲಿಯಾನ್.
ವಿದ್ಯಾರ್ಥಿ ಬಳಗದ ಕಾರ್ಯಾಧ್ಯಕ್ಷರಾಗಿ ವೇಣುಗೋಪಾಲ್ ಕರ್ಕೇರ. ಸಾಮಾಜಿಕ ಮತ್ತು ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ರಘು ಆರ್ ಮೂಲ್ಯ ಗೊರೆಗಾವ್ . ಕುಲಾಲ ಭವನ ಮಂಗಳೂರು ಕಮಿಟಿ ಕಾರ್ಯಾಧ್ಯಕ್ಷರಾಗಿ ವಿಶ್ವನಾಥ್ ಬಂಗೇರ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪಿ ಶೇಖರ್ ಮೂಲ್ಯ , ಕೆ .ಗೋಪಾಲ್ ಬಂಗೇರಾ ,. ಆನಂದ್ ಕೆ ಕುಲಾಲ್. ನ್ಯಾ.ಉಮಾನಾಥ ಕೆ ಮೂಲ್ಯ. ಉಮೇಶ್ ಬಂಗೇರ, ಸಂಜೀವ ಏನ್ ಬಂಗೇರ ,ಹರಿಯಪ್ಪ ಮೂಲ್ಯ, ಎಲ್ ಆರ್ ಮೂಲ್ಯ. ಆಯ್ಕೆ ಮಾಡಲಾಗಿದೆ,
ಅಧ್ಯಕ್ಷರಾಗಿ ಪುನರಾಯ್ಕೆಯಾದ ರಘು ಏ ಮೂಲ್ಯರವರು ಮಾತಾಡುತ್ತಾ ದೇವರ ದಯೆಯಿಂದ ಕಳೆದ ಎರಡು ವರ್ಷದಲ್ಲಿ ನಿಮ್ಮೆಲ್ಲರ ಮತ್ತು ನಮ್ಮ ಬಂದು ಮಿತ್ರರ ಸಹಕಾರದಿಂದ ಅತ್ಯುತ್ತಮ ಸಾಮಾಜಿಕ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಬಂದಿದ್ದೇವೆ. ಮುಂದೆ ನಮ್ಮ ಸಮಾಜದ ದೊಡ್ಡ ಕನಸಾದ ಮಂಗಳೂರಿನ ಕುಲಾಲ ಭವನವನ್ನು ಅತೀ ಶೀಘ್ರದಲ್ಲೇ ಲೋಕಾರ್ಪಣೆ ಮಾಡಲು ಈ ಕಾರ್ಯಕಾರಿ ಮಂಡಳಿ ಮತ್ತು ನಮ್ಮ ಎಲ್ಲ ಸ್ಥಳೀಯ ಸಮಿತಿಯ ಸದಸ್ಯರು ತುಂಬು ಹೃದಯದ ಸಹಕಾರವನ್ನು ಕೊಟ್ಟು ನಮ್ಮ ಯೋಜನೆಯಂತೆ ಎಪ್ರಿಲ್ ತಿಂಗಳಿನ ಒಳಗೆ ನಮ್ಮ ಕುಲಾಲ ಭವನ ನಿಮ್ಮ ಅಪೇಕ್ಷೆಯಂತೆ ಲೋಕಾರ್ಪಣೆ ಆಗಬೇಕು ಎಂದು ನೂತನ ಸದಸ್ಯರಲ್ಲಿ ವಿನಂತಿಸಿದರು.
ಗೌ ಪ್ರಾ ಕಾರ್ಯದರ್ಶಿ ಕರುಣಾಕರ ಸಾಲಿಯಾನ್ ಕಾರ್ಯಕ್ರಮವನ್ನು ನಿರೂಪಿಸಿ ನೂತನ ಸದಸ್ಯರಿಗೆ ವಂದನಾರ್ಪಣೆಗೈದರು.