
ಮುಂಬಯಿ ಉಪನಗರ ದಹಿಸರ್ ಪೂರ್ವದ ಸಮಾಜಸೇವಕ, ಧಾರ್ಮಿಕ ಚಿಂತಕ ಶ್ರೀ ಜಯ ಸ್ವಾಮಿ ದಹಿಸರ್, ಅತ್ತೂರು ಗುಂಡ್ಯಡ್ಕ ಇವರ ಆಯೋಜನೆಯಲ್ಲಿ ಡಿ.1 ರಂದು ರವಿವಾರ 18ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾ ಪೂಜೆಯು ರಾಧಾಕೃಷ್ಣ ಮಂದಿರ ಹಾಲ್, ಸೈಂಟ್ ಥಾಮಸ್ ಸ್ಕೂಲ್ ಬಳಿ, ರಾವಲ್ಪಾಡ, ದಹಿಸರ್ ಪೂರ್ವ ಇಲ್ಲಿ ಶ್ರೀ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಅಂಧೇರಿ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 5:30 ಕ್ಕೆ ಮಹಾ ಗಣಪತಿ ಹೋಮ, 7:30ಕ್ಕೆ ಪ್ರಾಣಪ್ರತಿಷ್ಠೆ, ಪೂಜೆ, ಅರ್ಚನೆ, 8:00 ರಿಂದ 9:00ರ ತನಕ ನಾರಾಯಣಿಯಂ, ಕೇರಳ ಗ್ರೂಪ್ ದಹಿಸರ್ ಇವರಿಂದ, 10:00 ರಿಂದ 12:30ರ ತನಕ ಭಜನೆ – ಶ್ರೀದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನ ರಾವಾಲ್ವಾಡ, ದಹಿಸರ್ ಪೂರ್ವ ಇವರಿಂದ
12:30 ರಿಂದ 1:00ರ ತನಕ ದೀಪಾರಾಧನೆ, ಮಹಾ ಪೂಜೆಯನ್ನು ಶ್ರೀ ಚಂದ್ರಹಾಸ್ ಗುರುಸ್ವಾಮಿಯವರು ನಡೆಸಲಿದ್ದಾರೆ. ಬಳಿಕ ತೀರ್ಥಪ್ರಸಾದ
ವಿತರಣೆ ನಡೆಯಲಿದೆ. 1:00ರಿಂದ 3:00ರ ತನಕ ಸಾರ್ವಜನಿಕ ಅನ್ನದಾನ ಸೇವೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರೆಲ್ಲರೂ ಭಾಗವಹಿಸಿ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ಜಯಸ್ವಾಮಿ ದಹಿಸರ್ ಅತ್ತೂರು, ಗುಂಡ್ಯಡ್ಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.- 9902581150, 8452054984 ಕ್ಕೆ ಸಂಪರ್ಕಿಸಬಹುದು.