ಮುಂಬಯಿ ನ 28. ಕಾಂದಿವಲಿ ಪೂರ್ವ,ರಸ್ತೆ ನಂ.2.,. ಬಸರಾ ಸ್ಟುಡಿಯೋ, ಸಿಂಗ್ ಎಸ್ಟೇಟ್, ಸಮತಾ ನಗರ, ದಿ. ದೇವರಾಜ್ ಸ್ವಾಮೀಜಿ ಸ್ಥಾಪಿಸಿರುವ ಸದ್ಗುರು ಶ್ರೀ ಶನೀಶ್ವರ ದೇವಸ್ಥಾನದ 50 ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಅನ್ನದಾನ ಶನಿವಾರ ನ 30 ರಂದು ದಿನಪೂರ್ತಿ ನಡೆಯಲಿದೆ,
ಅಂದು ಸಂಜೆ 6.00 ಘಂಟೆಯಿಂದ 7.00 ಘಂಟೆಯವರೆಗೆ ಹೂವಿನ ಅಲಂಕಾರ ಪೂಜೆ, 7.00 ಘಂಟೆಯಿಂದ 7.30ರವರೆಗೆ ಕಲಶ ಪ್ರತಿಷ್ಠಾಪನೆ. ರಾತ್ರಿ 8.00ರ ನಂತರ ಭಜನೆ, ಕೀರ್ತನೆ, ತಿಲ ಅಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ, ತಾಂಬೂಲ ಪೂಜೆ, ಹೂವಿನ ಪೂಜೆ ಹಾಗೂ ಅನ್ನಸಂತರ್ಪಣೆ.
ಡಿ. 1ರ ಬೆಳಿಗ್ಗೆ 5.00 ಘಂಟೆಗೆ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ. ಭಕ್ತಾಧಿಗಳಾದ ತಾವೆಲ್ಲರೂ ಈ ಎಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ತನು-ಮನ-ಧನದೊಂದಿಗೆ ಸಹಾಯಾರ್ಥಕ್ಕೆ ಸಹಕರಿಸಿ ಕಲಿಪುರುಷ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಿ ದೇವಸ್ಥಾನದ ಕೋಮಲ್ ದೇವರಾಜ್ ಸ್ವಾಮಿ
ವಿನಂತಿಸಿಕೊಂಡಿದ್ದಾರೆ,
ಹೆಚ್ಚಿನ ಮಾಹಿತಿಗಾಗಿ 9987633968 ಸಂಪರ್ಕಿಸಬಹುದು,