ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿ ಒಂದು ವಾರ ಕಳೆಯುತ್ತಾ ಬಂದರೂ, ಇನ್ನೂ ಹೊಸ ಹೊಸ ಸರ್ಕಾರ ರಚನೆ ಕಗ್ಗಂಟಾಗಿ ಉಳಿದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನೇ ಅಂತಿಮಗೊಳಿಸಲಾಗಿದೆ ಎನ್ನಲಾಗುತ್ತಿದ್ದರೂ, ಈ ಕುರಿತು ಬಿಜೆಪಿ ನೇತೃತ್ವದ ಮೈತ್ರಿಕೂಟ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ, ಈ ನಡುವೆ ಖಾತೆ ಹಂಚಿಕೆ ಕುರಿತು ನಡೆಯಬೇಕಿದ್ದ ಸಭೆ ರದ್ದಾಗಿರುವುದು ಬಾರಿ ಕುತೂಹಲ ಮೂಡಿಸಿದೆ . ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾ ಜಿಲ್ಲೆಯಲ್ಲಿರುವ ತಮ್ಮ ಗ್ರಾಮಕ್ಕೆ ಅನಿರೀಕ್ಷಿತವಾಗಿ ತೆರಳಿರುವುದು ಸಭೆ ರದ್ದಾಗಲು ಕಾರಣ.
ದಿಲ್ಲಿಗೆ ತೆರಳಿದ ಮಹಾಯುತಿಯ ಮೂವರು ಪ್ರಮುಖ ನಾಯಕರಾದ ದೇವೇಂದ್ರ ಪಡ್ನವೀಸ್, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಗುರುವಾರ ಸಂಜೆ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅವರ ಜೊತೆ ಸಭೆ ನಡೆಸಿದ್ದರು, ಬಳಿಕ ಮೂವರು ಮುಂಬೈಗೆ ಮರಳಿದ್ದರು. ಈ ಸಭೆ ಬಳಿಕ ಪಡ್ನವೀಸ್ ಅವರೇ ಸಿಎಂ ಅಭ್ಯರ್ಥಿ ಎಂದು ಬಹುತೇಕ ನಿಶ್ಚಿತವಾಗಿದೆ,
ಮುಂಬೈಯಲ್ಲಿ ನಡೆಯಬೇಕಿದ್ದ ಮಹಾಯುತಿ ಮೈತ್ರಿಕೂಟದ ಸಭೆ ರದ್ದಾಗಿದೆ. ಅಲ್ಲದೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷದ ಸಭೆಯನ್ನೂ ರದ್ದುಗೊಳಿಸಲಾಗಿದೆ. ಆದರೆ ಶಿಂಧೆ ಅವರ ದಿಡೀರ್ ಕಾರ್ಯಕ್ರಮದ ಹಿಂದಿನ ವಿವರ ಬಹಿರಂಗವಾಗಿಲ್ಲ. ಸರಕಾರ ರಚನೆಯ ಮಾತುಕತೆಗಳ ವಿಚಾರದಲ್ಲಿ ಶಿಂಧೆ ಅಸಮಾಧಾನಗೊಂಡಿದ್ದಾರೆಯೇ ಎಂಬ ಊಹಾಪೋಹಗಳಿಗೂ ಇದು ಕಾರಣವಾಗಿದೆ.
