ಜೋಗೇಶ್ವರಿ ಪೂರ್ವದ ಪ್ರೇಮ್ ನಗರ ಕ್ವಾರ್ಟರ್ಸ್ ಕಾಲೋನಿಯಲ್ಲಿರುವ ಶ್ರೀ ಮಹಾಕಾಳಿ ಮಂದಿರದಲ್ಲಿ ಶ್ರೀ ಮಹಾಕಾಳಿ ಮಾತೆಯೊಂದಿಗೆ ವಿರಾಜಮಾನರಾಗಿರುವ ಶ್ರೀ ಶನಿ ದೇವರ ವಾರ್ಷಿಕ ಗ್ರಂಥ ಪಾರಾಯಣ ಸೇವೆಯು ನವಂಬರ್ 30ರ ಶನಿವಾರ ಸಂಜೆ 3:30 ರಿಂದ ರಾತ್ರಿ 9:30 ತನಕ ನಡೆಯಲಿದೆ.
ಗ್ರಂಥ ಪಾರಾಯಣವು ದಹಿಸರ್ ಪೂರ್ವ ರಾವಲ್ಪಾಡದ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ದೇವಸ್ಥಾನದ ಸದಸ್ಯರ ಸಹಯೋಗದಿಂದ ಜರಗಲಿದೆ.
ಶ್ರೀ ಶನಿ ದೇವರ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಹಾಕಾಳಿ ಮಾತೆಯ, ಶ್ರೀ ಶನಿದೇವರ ತೀರ್ಥ ಪ್ರಸಾದ ಸ್ವೀಕರಿಸುವಂತೆ ಮಂದಿರದ ಆಡಳಿತ ಮಂಡಳಿ, ಕಾರ್ಯಕಾರಿಣಿ ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.
