September 6, 2026
Mumbai News Kannada
ಮುಂಬಯಿ

ಮುಂಬಯಿ ಕನ್ನಡ ಸಂಘದ ವತಿಯಿಂದ ಕನ್ನಡ ಮಾಧ್ಯಮದ ಮಕ್ಕಳಿಗೆ ಧನ ಸಹಾಯ ವಿತರಣೆ





ಮಾಟುಂಗಾ [ಪೂರ್ವ]ದ ಮುಂಬಯಿ ಕನ್ಡಡ ಸಂಘದ ವತಿಯಂದ ಪ್ರತಿ ವರ್ಷವೂ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮುಂಬಯಿಯ ಕನ್ನಡ ಮಾಧ್ಯಮದ ಒಂದು ಶಾಲೆಗೆ ಧನ ಸಹಾಯವನ್ನು ನೀಡಲಾಗುತ್ತಿದ್ದು ಈ ವರ್ಷ ಇದಕ್ಕಾಗಿ ಮುಂಬಯಿಯ ಪಶ್ಚಿಮ ಉಪನಗರದ ಖಾರ್‌ ದಾಂಡಾದ ಮುನಿಸಿಪಲ್‌ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ಆಯ್ಕೆ ಮಾಡಲಾಗಿದೆ.

ಮುಂಬಯಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್‌.ಕರ್ಕೇರ, ಜೊತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಬಡಿಗೇರ ಹಾಗೂ ಸಮಿತಿ ಸದಸ್ಯ ನಾರಾಯಣ ರಾವ್‌ ಈ ಧನ ಸಹಾಯದ ಹಣವನ್ನು ಶಾಲೆಯ ಹಿರಿಯ ಶಿಕ್ಷಕ ಶಿವಾನಂದ ಪೋದ್ದಾರ ಇವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಭಾಶಾಲಿ ವಿದ್ಯಾರ್ಥಿನಿ ಅದಿತಿ ಪವಾರ್‌ರಿಗೆ ಸೋಮನಾಥ ಎಸ್‌.ಕರ್ಕೇರ ಮತ್ತು ವಿಧ್ಯಾರ್ಥಿ ಸಚಿನ್‌ ಚವಾಣ್‌ರಿಗೆ ಮಲ್ಲಿಕಾರ್ಜುನ ಬಡಿಗೇರರ ವತಿಯಿಂದ ಪ್ರೋತ್ಸಾಹಕ ಧನವನ್ನು ಕೂಡಾ ನೀಡಲಾಯ್ತು. ಬಳಿಕ ಶಾಲೆಯ ಸ್ಥಿತಿಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಲಾಯ್ತು.



Related posts

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್, ಇದರ 16ನೇ ವರ್ಷದ ವಾರ್ಷಿಕ  ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಕುಲಾಲ ಸಂಘ ಮುಂಬಯಿ ; 93ನೇ ವಾರ್ಷಿಕ ಮಹಾಸಭೆ

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.

Mumbai News Desk

ಭಾರತ್ ಬ್ಯಾಂಕ್ : ಕುರ್ಲಾ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ

Mumbai News Desk

ಕರ್ನಾಟಕ ಸಂಘ ಕಲ್ಯಾಣ:ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಹಾಗೂ 22ನೇಯ ವಾರ್ಷಿಕೋತ್ಸವ

Mumbai News Desk

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

Mumbai News Desk