
ಚಿತ್ರ ವರದಿ : ಪಿ.ಆರ್.ರವಿಶಂಕರ್
ನಗರದ ಪ್ರತಿಷ್ಟಿತ ವೈದ್ಯಕೀಯ ಶುಷ್ರೂಷಾ ಸಂಸ್ಥೆಯಾದ ತುಂಗಾ ಹಾಸ್ಪಿಟಲ್ಸ್ ವರ್ಷಂಪ್ರತಿ ಆಯೋಜಿಸುವ ರಾಷ್ಟ್ರೀಯ ಡಾಕ್ಟರ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಇಂದು ಬೆಳಿಗ್ಗೆ ಆರಂಭವಾಯಿತು. ಬೊಯಿಸರ್ ಪಿ.ಡಿ ಟಿ ಎಸ್ ಮೈದಾನದಲ್ಲಿ ಬೆಳಿಗ್ಗೆ 9.30 ಕ್ಕೆ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು ಸಂಸ್ಥೆಯ ನಿರ್ದೇಶಕರಾದ ಡಾ• ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ ಇವರು ಕ್ರಿಕೆಟ್ ಪಿಚ್ ನಲ್ಲಿ ಶ್ರೀಫಲ ( ತೆಂಗಿನಕಾಯಿ) ಒಡೆದು ಟೂರ್ನಮೆಂಟ್ ಗೆ ಚಾಲನೆ ನೀಡಿದರು.

ತುಂಗಾ ಸಮೂಹ ಸಿ ಎಮ್ ಡಿ. ಡಾ• ಸತೀಶ್ ಭೋಜ ಶೆಟ್ಟಿ ಸ್ವಾಗತಿಸಿ ಅತಿಥಿಗಳ ಹಾಗೂ ಭಾಗವಹಿಸುವ ಡಾಕ್ಟರ್ಸ್ ತಂಡಗಳ ಸಂಕ್ಷಿಪ್ತ ಪರಿಚಯ ನೀಡಿದರು.
” ವರ್ಷವಿಡೀ ಸದಾ ಕಾಲ ಚಿಕಿತ್ಸಾಕೇಂದ್ರಗಳಲ್ಲಿ ವ್ಯಸ್ತರಾಗಿರುವ ಡಾಕ್ಟರ್ಸ್ ಗಳಿಗೆ ಇಂತಹ ಕ್ರೀಡಾ ಚಟುವಟಿಕೆಗಳು ಬದಲಾವಣೆಯ ಹೊಸ ಹುಮ್ಮಸ್ಸು ನೀಡುತ್ತದೆ . ದೇಶದ ವಿವಿಧ ಸ್ಥಳಗಳಿಂದ , ಊರುಗಳಿಂದ ಸಕಾಲದಲ್ಲಿ ಆಗಮಿಸಿ ಉತ್ಸಾಹದಿಂದ ಭಾಗವಹಿಸುವ ಈ ಎಲ್ಲಾ ಸ್ನೇಹಿತ ವೈದ್ಯರು ನೀಡಿದ ಪ್ರೋತ್ಸಾಹವು ಇನ್ನು ಮುಂದೆಯೂ ಈ ರೀತಿಯ ಭವಿಷ್ಯದಲ್ಲಿನ ಕಾರ್ಯಕ್ರಮಗಳಿಗೆ ನಮ್ಮನ್ನು ಉತ್ತೇಜಿಸುತ್ತದೆ “. ಎಂದು ಅಭಿಪ್ರಾಯ ಪಟ್ಟರು.
ವೇದಿಕೆಯಲ್ಲಿ ಡಾ• ವಿನೋದ್ ರಾಜ್ ಕುಂದಾಪುರ , ಡಾ• ಹೇಮಲ್ , ಸ್ಪೋರ್ಟ್ಸ್ ಕ್ಲಬ್ ಸದಸ್ಯರಾದ ನಿತಿನ್ ಅಂಗ್ರೆ ಮತ್ತು ರವಿ ಘರತ್ , ತುಂಗಾ ನಿರ್ದೇಶಕರಾದ ಡಾ• ರಾಜೇಶ್ ಶೆಟ್ಟಿ ಮತ್ತು ಡಾ• ಶ್ರೀಮತಿ ದಿವ್ಯಾ ಸತೀಶ್ ಶೆಟ್ಟಿ , ತುಂಗಾ ಸಮೂಹ ಸಿ .ಎಮ್ ಡಿ. ಡಾ• ಸತೀಶ್ ಬಿ. ಶೆಟ್ಟಿ , ಶ್ರೇಯಾ ಶೆಟ್ಟಿ , ತುಂಗಾ ಸಂಸ್ಥೆಯ ಡಾ• ಗುರುಪ್ರಸಾದ್ ಶೆಟ್ಟಿ , ರಿತೇಶ್ ಶೆಟ್ಟಿ ಹಾಗೂ ತುಂಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ವ್ಯವಸ್ಥಾಪಕರಾದ ಸಂತೋಷ್ ಕೆ.ಶೆಟ್ಟಿ ಉಪಸ್ಥಿತರಿದ್ದರು.
ಪಾಲ್ಘರ್ ಜಿಲ್ಲಾ ಸ್ಪೋರ್ಟ್ಸ್ ಅಸೋಸಿಯೇಶನ್ ಗ್ರೌಂಡ್ , ಟಾಟಾ ಸ್ಟೀಲ್ಸ್ ಗ್ರೌಂಡ್ ಮತ್ತು ಚಿಕಲೀಕರ್ ಗ್ರೌಂಡ್ ನಲ್ಲಿ ಇಂದಿನಿಂದ ಮೂರು ದಿನಗಳು ಜರಗುವ ಹದಿನಾರು ಓವರ್ಸ್ ನ ಈ ಟೂರ್ನಮೆಂಟ್ ನಲ್ಲಿ ವಿವಿಧ ಊರುಗಳಿಂದ ಆಗಮಿಸಿದ ಹದಿನೈದು ತಂಡಗಳು ಭಾಗವಹಿಸಿವೆ.
ಚಿತ್ರ ಹಾಗೂ ವಿವರ: ಪಿ.ಆರ್.ರವಿಶಂಕರ್
ಡಹಾಣೂ ರೋಡ್ 8483980035