ಮುಂಬಯಿ : ತುಳು ಸಂಘ ಬೊರಿವಲಿ ಇದರ ಯುವ ವಿಭಾಗವು ಸಂಘದ ಸದಸ್ಯರಿಗಾಗಿ ಹಾಗು ಇತರ ತುಳು ಕನ್ನಡಿಗರಿಗಾಗಿ ಸಂಘದ ಯುವ ವಿಭಾಗದ ವತಿಯಿಂದ ಜ. 5 ರಂದು ಮ್ಯಾರಥಾನ್ ನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 5.30 ರಿಂದ ಬೊರಿವಲಿ ಪೂರ್ವ ಸಂಜೆ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಮ್ಯಾರಥಾನ್ ನಡೆಯಲಿದ್ದು, ಇದರಲ್ಲಿ 10 ಕಿ.ಮೀ ಮತ್ತು 3 ಕಿ.ಮೀ ಗಳ ಎರಡು ಪ್ರತ್ಯೇಕ ವಿಭಾಗಗಳಿದ್ದು ಭಾಗವಹಿಸುವವರಿಗೆ ಟೀ ಶರ್ಟ್ ಮತ್ತು ಇತರ ಸವಲತ್ತುಗಳಿರುತ್ತವೆ. 3 ಕಿ.ಮೀ ಗಳ ಓಟ ‘ಮೋಜಿನ ಓಟ’ ಎಂದು ಖ್ಯಾತಿಯನ್ನು ಪಡೆದಿದ್ದು ಇದರಲ್ಲಿ ಓಟ ಅಥವಾ ಕಾಲ್ನಡಿಗೆಯ ಮೂಲಕ ಭಾಗವಹಿಸಬಹುದಾಗಿದೆ. ಈ ಮ್ಯಾರಥಾನ್ ನ ಹೆಚ್ಚಿನ ವಿವರಕ್ಕಾಗಿ ತುಳು ಸಂಘ ಬೊರಿವಲಿಯ ಅಧ್ಯಕ್ಷರಾದ ಹರೀಶ್ ಮೈಂದನ್ (ಮೊ. 9769491554) ಯಾ ಸಂಘದ ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ (ಮೊ. 9720897395), ಇವರನ್ನು ಸಂಪರ್ಕಿಸಬಹುದಾಗಿ ತುಳು ಸಂಘ ಬೊರಿವಲಿ ಇದರ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಅವರು ತಿಳಿಸಿದ್ದಾರೆ.