
ಕುಂದರ್ ಮೂಲಸ್ಥಾನ ಸಭಾ ಮುಂಬೈ ಇದರ ವಾರ್ಷಿಕ ವಿಹಾರ ಕೂಟ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ತಾರೀಕು 22-12-24ರಂದು ವಸಯಿ ತಾಲೂಕಿನ ನಾಯ್ಗoವ್ ನ ಮುಂಬೈ ಅಹಮದಾಬಾದ್ ಹೈವೇ ಬಳಿಯ ಸರೋಸ ಗ್ರಾಂಡ್ ವಿಲ್ಲಾ ರೆಸಾರ್ಟ್ ನಲ್ಲಿ ಜರಗಿತು.
ವಿಹಾರ ಕೂಟದ ಉದ್ಘಾಟನೆಯನ್ನು ಗೌರವ ಅಧ್ಯಕ್ಷರಾದ ಲೋಕನಾಥ್ ಕೊಂದರ್, ಉಪಸ್ಥಿತರಿದ್ದ ಹಿರಿಯ ಗಣ್ಯರೊಂದಿಗೆ ದೀಪ ಬೆಳಗಿಸಿ ಪ್ರಾರಂಭಿಸಿದರು. ಪುಷ್ಪ ಬಂಗೇರ (ಕುಂದರ್ )ಪ್ರಾರ್ಥನೆಗೈದರು.
ಬಳಿಕ ವಿಹಾರಕೂಟದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರು ಮನ ಹಗುರವಾಗುವಂತೆ ವಿವಿಧ ಮನೋಂಜನಾ ಕಾರ್ಯಕ್ರಮದ ಚಟುವಟಿಕೆಗಳಲ್ಲಿ ಪಾಲ್ಗೊಂಡರು.
ಕುಮಾರಿ ಶ್ರೇಯ ಕಾರ್ಯಕ್ರಮವನ್ನು ಉತ್ತಮವಾಗಿ ಮುನ್ನಡೆಸಿದರು.
ಸಮರೋಪ ಸಮಾರಂಭದಲ್ಲಿ ಅಧ್ಯಕ್ಷರಾದ ಲೋಕನಾಥ್ ಕುಂದರ್ ಮಾತನಾಡುತ್ತಾ ” ವಿಹಾರ ಕೂಟದ ಮಹತ್ವ, ಮೂಲಸ್ಥಾನಗಳ ವಿಶೇಷತೆ, ಪ್ರತಿಭಾ ಪುರಸ್ಕಾರದಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಸಿದರು.

ಆ ಬಳಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಉಪಾಧ್ಯಕ್ಷರಾದ ಗಣೇಶ್ ಕಾಂಚನ್ ಪ್ರಧಾನ ಕೋಶಾಧಿಕಾರಿ ಸಂತೋಷ ಸುವರ್ಣ, ಜೊತೆ ಕಾರ್ಯದರ್ಶಿ ನಾಗೇಶ್ ಕುಂದರ್, ಮಹಿಳಾ ವಿಭಾಗದ ಅಧ್ಯಕ್ಷೆ ವೇದ ಪುತ್ರನ್, ಕಾರ್ಯದರ್ಶಿ ವಸಂತಿ ಸಾಲ್ಯಾನ್, ಕೋಶಾಧಿಕಾರಿ ಗೌರಿ ಪನಿಯಾಜಿ ಅವರು ಕಾರ್ಯಕ್ರಮದ ನಿರ್ವಹಣೆಯಲ್ಲಿ ಸಹಕರಿಸಿದರು. ಪ್ರಧಾನ ಕಾರ್ಯದರ್ಶಿಯವರಾದ ನೀಲದರ್ ಕುಂದರ್ ಕೊನೆಗೆ ಧನ್ಯವಾದ ಸಮರ್ಪಿಸಿದರು.