ಸಯನ್ ಹರೆಕ್ ನಿವಾಸ ಶ್ರೀ ಅಯ್ಯಪ್ಪ ಸೇವಾ ಮಂಡಳಿಯ 36ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಡಿಸೆಂಬರ್ 25 ರಂದು ಬುಧವಾರ ವಿಶ್ವನಾಥ್ ಗುರುಸ್ವಾಮಿ ಅವರ ಆಶೀರ್ವಾದದೊಂದಿಗೆ, ಮೋಹನ್ ಗುರುಸ್ವಾಮಿ ಅವರ ನೇತೃತ್ವದಲ್ಲಿ, ಸಯನ್ ನ ವಲ್ಲಬ್ ಸಂಗೀತ ವಿದ್ಯಾಲಯ ಮತ್ತು ಸ್ವಾಮಿ ನಿತ್ಯಾನಂದ ಸಭಾಗ್ರಹದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 6 ಗಂಟೆಗೆ : ಮಹಾಗಣಪತಿ ಹೋಮ
9.30 ರಿಂದ 11.30 : ಸಹಸ್ರನಾಮರ್ಚನೆ
11.30 ರಿಂದ ಮಧ್ಯಾಹ್ನ 1 : ಭಜನೆ
ಮಧ್ಯಾಹ್ನ 1ರಿಂದ 1.30 : ದೀಪಾರಾದನೆ
1.30ರಿಂದ ಸಂಜೆ 4ರ ತನಕ : ಅನ್ನದಾನ
ಈ ಸಂದರ್ಭ 18ನೇ ವರ್ಷದ ಶಬರಿಮಲೆ ಯಾತ್ರೆ ಗೈಯಲಿರುವ ಜಯಂತ್ ಸ್ವಾಮಿಯವರಿಗೆ ಮೋಹನ್ ಗುರುಸ್ವಾಮಿ ಅವರು ಸತ್ಕರಿಸಲಿರುವರು.
ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರಸಾದ ಸ್ವೀಕರಿಸಿ, ಅವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮೋಹನ್ ಗುರುಸ್ವಾಮಿ ಹಾಗೂ ಇತರ ಸ್ವಾಮಿಗಳು ವಿನಂತಿಸಿದ್ದಾರೆ.