24.7 C
Karnataka
April 3, 2025
ಸುದ್ದಿ

ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಶಾಕ್ ನೀಡಿದ ಸರ್ಕಾರ – ಬಸ್ ಪ್ರಯಾಣ ದರ ಶೇಕಡ 15ರಷ್ಟು ಏರಿಕೆ



.

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಬಸ್ ಪ್ರಯಾಣ ದರಗಳನ್ನು ಶೇಕಡ 15ರಷ್ಟು ಏರಿಸಲು ಅನುಮೋದನೆ ನೀಡಿದೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇಕಡ 15ರಷ್ಟು ಏರಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಸರ್ಕಾರ ಬಿಗ್ ಶಾಕ್ ನೀಡಿದೆ.
ಈಗಾಗಲೇ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಆಗಸ್ಟ್ ನಲ್ಲಿ ನಾಲ್ಕು ಸಾರಿಗೆ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಅದರ ಬೆನ್ನಲ್ಲೇ ಇಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಚಿವ ಸಂಪುಟ ಟಿಕೆಟ್ ದರ ಏರಿಕೆ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ದರ ಹೆಚ್ಚಳ ಮಾಡಬಾರದು, ಮಹಿಳೆಯರಿಗೆ ಉಚಿತ ಅಂದರೆ ನಮಗೆ ಉಚಿತ ಮಾಡಿ, ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಮಾಡುವುದು ಸರಿಯೇ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಬಿಎಂಟಿಸಿ, ಕೆಎಸ್ಆರ್ಟಿಸಿ, ಕೆಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್‌ಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳು ಈ ಹಿಂದೆ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದವು.

.

Related posts

ಕಟೀಲು:ಚಂದು ಪೂಜಾರಿ ನಿಧನ.

Mumbai News Desk

ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ವಿಜಯ್ ಬಿ ಹೆಗ್ಡೆ ನಿಧನ

Mumbai News Desk

ಮೇರು ಸಾಹಿತಿ ಅಮೃತ ಸೋಮೇಶ್ವರ ನಿಧನ.

Mumbai News Desk

ಫೆಂಗಲ್ ಚಂಡಮಾರುತದ ಎಫೆಕ್ಟ್ – ದಕ್ಷಿಣ ಕನ್ನಡ ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ, ನಾಳೆ (ಡಿ. 3)ಶಾಲಾ-ಕಾಲೇಜ್ ಗೆ ರಜೆ ಘೋಷಣೆ

Mumbai News Desk

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ   ‘ಸುವರ್ಣಯುಗ’ ಕೃತಿ ಬಿಡುಗಡೆ

Mumbai News Desk

ಉದ್ಯಮಿ, ಸಂಘಟಕ ಗೋಪಾಲ ಪುತ್ರನ್ ಅವರಿಗೆ ಪಿತೃ ವಿಯೋಗ

Mumbai News Desk