


ಡೊಂಬಿವಲಿ ಜ.1: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಡೊಂಬಿವಲಿ ಇದರ ಅಂಗ ಸಂಸ್ಥೆಯಾದ ಶ್ರೀ ಶನೀಶ್ವರ ಪೂಜಾ ಸಮಿತಿ ಇದರ ವತಿಯಿಂದ 33 ನೇ ವಾರ್ಷಿಕ ಸಾಮೂಹಿಕ ಶನೀಶ್ವರ ಮಹಾ ಪೂಜೆಯು ದಿನಾಂಕ 4-1-2025 ರ ಶನಿವಾರದಂದು ಬೆಳಿಗ್ಗೆ 9.00 ರಿಂದ ರಾತ್ರಿ 8.00 ರ ತನಕ ರೇತಿಭವನ, 3 ನೇ ಮಹಡಿ, ರೈಲ್ವೆ ನಿಲ್ದಾಣದ ಸಮೀಪ ಡೊಂಬಿವಲಿ ಇಲ್ಲಿ ಜರಗಲಿದೆ.
ಬೆಳಿಗ್ಗೆ 9.00 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನೆ, ಮಧ್ಯಾಹ್ನ 12.00 ಕ್ಕೆ ಪೂಜೆಯ ತೀರ್ಥಪ್ರಸಾದ ವಿತರಣೆ, 12.30 ರಿಂದ 3.00 ರ ತನಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30 ಕ್ಕೆ ಸುರೇಶ್ ಅಂಚನ್ ರಿಂದ ಶ್ರೀ ಶನೀಶ್ವರ ದೇವರ ಕಲಶ ಪ್ರತಿಷ್ಠೆ ಹಾಗೂ ಗ್ರಂಥ ಪಾರಾಯಣ, 7.30 ಕ್ಕೆ ಮಹಾ ಅರತಿ, ಭಜನೆ ರಾತ್ರಿ 8.00 ಕ್ಕೆ ತೀರ್ಥಪ್ರಸಾದ ವಿತರಣೆ ನಡೆಯಲಿದೆ.
ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಭಕ್ತರು ಉಪಸ್ಥಿತರಿದ್ದು ತೀರ್ಥಪ್ರಸಾದ ಸ್ವೀಕರಿಸ ಬೇಕೆಂದು ಶ್ರೀ ಶನೀಶ್ವರ ಪೂಜಾ ಸಮತಿಯ ಅಧ್ಯಕ್ಷರಾದ ನಿತ್ಯಾನಂದ ಜತ್ತನ್, ಉಪಾಧ್ಯಕ್ಷ ಬ್ರಹ್ಮನಂದ ಶೆಟ್ಟಿಗಾರ್, ಕಾರ್ಯದರ್ಶಿ ಸುನೀಲ್ ಎಸ್. ಶೆಟ್ಟಿ, ಕೋಶಾಧಿಕಾರಿ ಜಯಪ್ರಸನ್ನ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಮೈಂದನ್, ಜತೆ ಕೋಶಾಧಿಕಾರಿ ನಾರಾಯಣ ಭಂಡಾರಿ, ಪ್ರಧಾನ ಅರ್ಚಕ ಧರ್ಮದರ್ಶಿ ಅಶೋಕ ಶೆಟ್ಟಿ, ವಿನಂತಿಸಿದ್ದಾರೆ.
.
.