
.ಕಳೆದ 66 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಜಿ ಎಸ್ ಬಿ ಸಭಾ, ಮುಲುಂಡ್, ಮುಂಬಯಿ ಚಾರಿಟೇಬಲ್ ಸಂಸ್ಥೆ ವರ್ಷದುದ್ದಕ್ಕೂ ನಡೆಯುವ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸ, ಕಲೆ ಮತ್ತು ಸಾಂಸ್ಕೃತಿಕ ಶೇಯೋಭಿವೃದ್ಧಿಗಾಗಿ ಸಕ್ರಿಯವಾಗಿದೆ.ಪ್ರತಿವರ್ಷ ಶಾಸ್ತ್ರೀಯ ಗಾಯಕ ಪಂಡಿತ್ ಭೀಮಸೇನ ಜೋಶಿ ಸ್ಮರಣಾರ್ಥ ಸಂಗೀತ ಸಮಾರೋಹವನ್ನು ಆಯೋಜಿಸಿ ಹಿರಿಯ ಹಾಗೂ ಹೆಸರಾಂತ ಸಂಗೀತ ಕಲಾವಿದರನ್ನು ಗೌರವಿಸುವ ಪ್ರತೀತಿ ಯನ್ನು ಹಮ್ಮಿಕೊಂಡಿದೆ.
ಜನವರಿ, 5, 2025 ರವಿವಾರದಂದು, ಸಂಸ್ಥೆಯ 4 ನೇಯ ಸಾಂಸ್ಕೃತಿಕ ಸಮ್ಮಿಲನವನ್ನು ದಿನವಿಡೀ ಮುಲುಂಡ್ ಪಶ್ಚಿಮದ ಮಹಾರಾಷ್ಟ್ರ ಸೇವಾ ಸಂಘ ದ ಸಭಾಗ್ರಹದಲ್ಲಿ ಅಯೋಜಿಸಲಾಗಿತ್ತು. ಖ್ಯಾತ ಕೊಂಕಣಿ- ಕನ್ನಡ ಹಾಸ್ಯ ಕಲಾವಿದರಾದ, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ದ ಉಪಾಧ್ಯಾಕ್ಷ ಕಮಲಾಕ್ಷ ಸರಾಫ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಕಿಕ್ಕಿರಿದು ನೆರೆದ ಸಭೆಯನ್ನು ಉದ್ದೇಶಿಸಿ ಹಿತ ನುಡಿಗಳನ್ನು ನೀಡಿದರು. ತಮ್ಮ ಭಾಷಣದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಜಿ ಎಸ್ ಬಿ ಮುಲುಂಡ್ ಸಂಸ್ಥೆಯ ಪ್ರೋತ್ಸಾಹನ ವಿದ್ಯಾರ್ಥಿಗಳ ಜೀವನದಲ್ಲಿ ಎಷ್ಟು ಮಹತ್ತರವಾದುದು ಎಂದು ಬಣ್ಣಿಸಿದರು.ಚಿತ್ರಕಲೆ, ಛದ್ಮ ವೇಷ ( ಫ್ಯಾನ್ಸಿ ಡ್ರೆಸ್ ), ನೃತ್ಯ ಹಾಗೂ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತೆಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಪಾಲಕರನ್ನು ಮುಖ್ಯ ಅತಿಥಿಗಳಿಂದ ಪಾರಿತೋಷಕ, ಗೌರವ ಧನ ನೀಡಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಕೆ ಜಿ ಎಸ್ ಬಿ ಬ್ಯಾಂಕಿನ ವಿನಯ್ ರಾವ್ ದಂಪತಿ ಗಳಿಂದ ಸುಂದರ, ಮನಮೋಹಕ ಇನ್ಸ್ಟಾರುಮೆಂಟಲ್ ಸಂಗೀತ ಮಾಧ್ಯಮದ ಮೂಲಕ ಹಳೆಯ ಚಲನ ಚಿತ್ರಗಳ ಗಾಯನ ಎಲ್ಲರನ್ನೂ
ರಂಜಿಸಿತು.

ಸಂಸ್ಥೆಯ ಪದಾಧಿಕಾರಿಗಳಾದ ಶ್ರೀಯುತ ಬಿ ಎಸ್ ಬಾಳಿಗಾ, ಗಣಪತಿ ಪೈ, ಸಚ್ಚಿದಾನಂದ ಪಡಿಯಾರ್ ಮತ್ತು ಅಜಯ್ ಭಂಡಾರ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ಗಣೇಶ್ ರಾವ್ ಇತರರ ನೆರವಿನಿಂದ ಸಂಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು.

ವಿಶೇಷವಾಗಿ ಬರಮಾಡಿದ ಲೇಖಕ ಮತ್ತುನಿರ್ದೇಶಕ ಕರೋಪಾಡಿ ಅಕ್ಷಯ ನಾಯಕ್ ತಮ್ಮ ಕೊಂಕಣಿ ಚಲನ ಚಿತ್ರ ‘ ಜೇವಣ( Jevan ) ದ ಸಂಗೀತ ವನ್ನು ಬಿಡುಗಡೆ ಮಾಡಿದರು.
ಕೊನೆಯಲ್ಲಿ ಹೊಸ ‘ ಅಂತು ‘ ಕೊಂಕಣಿ ಚಲನ ಚಿತ್ರ ಪ್ರದರ್ಶಿಸಲಾಯಿತು.
ಮುಂಜಾನೆ ಹಾಗೂ ಸಂಜೆಯ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.