.
.
ಅಧ್ಯಕ್ಷರಾಗಿ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರು ಪುನರಾಯ್ಕೆ, bಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಕೆ ಆಚಾರ್ಯ
ಮಲಾಡ್ ಪೂರ್ವದ ತುಳು ಕನ್ನಡಿಗರು ಸ್ಥಾಪಿಸಿದ ಧಾರ್ಮಿಕ ಸಂಘಟನೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆಯು ಉತ್ಕೃಷ್ಟ ವಿದ್ಯಾಮಂದಿರದ ಸಭಾಗೃಹ, ದಪ್ತರಿ ರೋಡ್ ಮಲಾಡ್ ಪೂರ್ವ ಮುಂಬಯಿ ಇಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರುರವರ ಅಧ್ಯಕ್ಷತೆಯಲ್ಲಿ ಜರಗಿತು.
ಗೌರವ ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ ನಿಂಜೂರು ಅವರು ವಾರ್ಷಿಕ ವರದಿಯನ್ನು ಮಂಡಿಸಿದರು, ಕೋಶಧಿಕಾರಿ ಜಗನ್ನಾಥ್ ಮೆಂಡನ್ ಲೆಕ್ಕಪತ್ರಗಳನ್ನು ಸಭೆಗೆ ತಿಳಿಸಿದರು.
ಆ ಬಳಿಕ ಎರಡು ವರ್ಷಗಳ ಕಾಲಾವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸದಸ್ಯರ ಸಮ್ಮುಖದಲ್ಲಿ ನಡೆಯಿತು,
ನ್ಯಾ. ಜಗನ್ನಾಥ್ ಎನ್ ಶೆಟ್ಟಿ ಪಣಿಯೂರ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಕುಮರೇಶ್ ಆಚಾರ್ಯ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಸುದೀಪ್ ದಿನೇಶ್ ಪೂಜಾರಿ ಆಯ್ಕೆಯಾಗಿದ್ದಾರೆ.
ಸಮಿತಿ ಯ ಉಪಾಧ್ಯಕ್ಷರುಗಳಾಗಿ ಜಗನ್ನಾಥ್ ಎಚ್ ಮೆಂಡನ್ ಸಾಲಿಗ್ರಾಮ, ಕುಮರೇಶ್ ಆಚಾರ್ಯ , ಸಂತೋಷ್ ಕೆ ಪೂಜಾರಿ, ದಿನೇಶ್ ಪೂಜಾರಿ ನಿಂಜೂರು , ಪ್ರಧಾನ ಕಾರ್ಯದರ್ಶಿಯಾಗಿ ಸನತ್ ಪೂಜಾರಿ , ಕೋಶಾಧಿಕಾರಿಯಾಗಿ ಸುರೇಂದ್ರ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಲಕ್ಷ್ಮಣ್ ರಾವ್ , ಜೊತೆ ಕೋಶಾಧಿಕಾರಿಯಾಗಿ ಸುಂದರ ಪೂಜಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆರುಗಳಾಗಿ ಲಲಿತ ಎಸ್ ಗೌಡ, ಗೀತಾ ಜೆ ಮೆಂಡನ್, ಸಂಧ್ಯಾ ಎಸ್ ಪ್ರಭು, ಕಾರ್ಯದರ್ಶಿಯಾಗಿ ಶೀಲ ಮಹಾಬಲ ಪೂಜಾರಿ, ಜೊತೆ ಕಾರ್ಯದರ್ಶಿ ಭಾರತಿ ಎಸ್ ಆಚಾರ್ಯ, ವಿಧ್ಯಾ ಡಿ ಆಚಾರ್ಯ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ , ಜೊತೆ ಕೋಶಾಧಿಕಾರಿ ಶೋಭಾ ಎಲ್ ರಾವ್, ವಿದ್ಯಾ ಎಸ್ ನಾಯಕ್, ಸಲಹೆಗಾರರಾಗಿ ಮೋಹಿನಿ ಜಗನ್ನಾಥ ಶೆಟ್ಟಿ ರತ್ನ ದಿನೇಶ್ ಕುಲಾಲ್, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷರುಗಳಾಗಿ ಪ್ರಣೀತ ವರುಣ್ ಶೆಟ್ಟಿ, ನವೀನ್ ಯು ಸಾಲಿಯಾನ್, ದಿಶಾ ಪಿ ಕರ್ಕೇರ, ನಿಧಿ ಜಿ ನಾಯಕ್ ಕಾರ್ಯದರ್ಶಿಯಾಗಿ ಸಿ ಎ ರಾಜೇಶ್ ಕೆ ಮೂಲ್ಯ, ಜೊತೆ ಕಾರ್ಯದರ್ಶಿಯಾಗಿ ಪ್ರಥಮ್ ಪೂಜಾರಿ , ಶ್ವೇತಾ ಎಸ್ ಪೂಜಾರಿ, , ಕೋಶಾಧಿಕಾರಿ ಶಿವಾನಿ ಎಸ್ ಪ್ರಭು, ಜೊತೆ ಕೋಶಾಧಿಕಾರಿ ದೀಕ್ಷಿತ್ ಎಂ ಪೂಜಾರಿ, ವಿನೀತ್ ಜಿ ಪೂಜಾರಿ, ಸಂಚಾಲಕರಾಗಿ ಡಾಕ್ಟರ್ ಶಶಿನ್ ಕೆ ಆಚಾರ್ಯ , ಸಲಹೆಗಾರರಾಗಿ ರಶ್ಮಿ ಎಸ್ ಪೂಜಾರಿ, ದಿವ್ಯ ಎನ್ ಅಮೀನ್, ಸೌಮ್ಯ ಜೆ ಮೆಂಡನ್, ಸಾಮಾಜಿಕ ಜಾಲತಾಣಾದ ಮುಖ್ಯಸ್ಥರಾಗಿ ಹರ್ಷ ಕುಂದರ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಯನ್ನು ವಹಿಸಿದ್ದ ಜಗನ್ನಾಥ್ ಶೆಟ್ಟಿ ಮಾತನಾಡುತ್ತಾ 15 ವರ್ಷಗಳು ಸಾಮಾಜಿಕ ಧಾರ್ಮಿಕ ಸೇವೆಗಳ ಮೂಲಕ ಸಂಸ್ಥೆ ಸದೃಢ ಗೊಂಡಿದೆ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ನೂತನವಾಗಿ ಸಮಿತಿಗೆ ಆಯ್ಕೆಗೊಂಡಿರುವ ಪದಾಧಿಕಾರಿಗಳು ಒಗ್ಗಟ್ಟಿನಿಂದ ಸೇವೆ ಮಾಡಬೇಕು ಎಂದು ತಿಳಿಸಿದರು,
ನಿರ್ಗಮನ ಕಾರ್ಯಧ್ಯಕ್ಷೆ ಮಾತನಾಡಿ ನನ್ನ ಅಧಿಕಾರದ ಸಂದರ್ಭದಲ್ಲಿ ಮಹಿಳೆಯರೆಲ್ಲರೂ ಉತ್ತಮ ರೀತಿಯಲ್ಲಿ ಸೇವೆಗಳನ್ನು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಒಗ್ಗಟ್ಟಿನಿಂದ ದಾರ್ಮಿಕ ಸಾಮಾಜಿಕ ಸೇವೆಗಳನ್ನು ಮಾಡುವ ಎಂದು ನುಡಿದರು.
ನೂತನವಾಗಿ ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳನ್ನು ಹೂ ಗುಚ್ಚೆ ನೀಡಿ ಗೌರವಿಸಲಾಯಿತು
ಕೊನೆಯಲ್ಲಿ ದಿನೇಶ್ ಪೂಜಾರಿ ಧನ್ಯವಾದ ನೀಡಿದರು,