
ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಖೋಪರ್‌ಖೈರ್ನೆ ಶಾಖೆಯಲ್ಲಿ 10ನೇ ವರ್ಷದ ವಾರ್ಷಿಕೋತ್ಸವವನ್ನು ಜನವರಿ 9 ರಂದು ಬಲು ವಿಜೃಂಭಣೆಯಿಂದ ಆಚರಿಸಲಾಯಿತು.

ಅಂದು ಪೂರ್ವಾಹ್ನ ಗಣಹೋಮ ಮತ್ತು ಗುರುಪೂಜೆ ನೆರವೇರಿದ ಬಳಿಕ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಚಂದ್ರಶೇಖರ ಪೂಜಾರಿ ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ ಬ್ಯಾಂಕಿನ ಗ್ರಾಹಕರುಗಳಾದ ತರ‍್ಸೇಮ್ ಸಿಂಗ್ ಶೈನಿ, ಪ್ರಮೋದ ಸಾಲುಂಖೆ, ರಾಜು ರಾಜಪುರೋಹಿತ್ ಇವರುಗಳು ಬ್ಯಾಂಕಿನ ಅಭಿವೃದ್ಧಿ ಮತ್ತು ಸಿಬ್ಬಂದಿಗಳ ನಗು ಮುಖದ ತ್ವರಿತ ಸೇವಾ ಭಾವನೆಗೆ ಪ್ರಶಂಸೆ ವ್ಯಕ್ತಪಡಿಸಿ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಹಾಗೂ ಬ್ಯಾಂಕಿನ ಉತ್ತರೋತ್ತರ ಅಭಿವೃದ್ಧಿಗಾಗಿ ಶುಭ ಹಾರೈಸಿದರು ನಿರ್ದೇಶಕ ದಯಾನಂದ ಪೂಜಾರಿ, ಗ್ರಾಹಕರುಗಳಾದ ಕೃಷ್ಣ ಪೂಜಾರಿ, ಎನ್. ಜಿ. ಪೂಜಾರಿ, ಎನ್. ಎಮ್. ಬಿಲ್ಲವ, ಯೋಗೇಶ್ ಸುವರ್ಣ, ಪ್ರಕಾಶ ಪರಾಡ್, ಗಣೇಶ ಪೂಜಾರಿ, ಸಂತೋಷ ಹಾಗೂ ಈ ಶಾಖೆಯ ಹಿಂದಿನ ಶಾಖಾ ಪ್ರಬಂಧಕರಾದ ಗಣೇಶ ಅಂಚನ್ ಮತ್ತು ಸಂತೋಷ ಕೋಟ್ಯಾನ್ ಉಪಸ್ಥಿತರಿದ್ದರು.

ಖೋಪರ್‌ಖೈರ್ನೆ ಶಾಖೆಯ ಪ್ರಬಂಧಕ ರಾಜೀವ ಎಮ್. ಪೂಜಾರಿ ಆಗಮಿಸಿದ ಅತಿಥಿ ಗಣ್ಯರನ್ನು ಮತ್ತು ಗ್ರಾಹಕರನ್ನು ಸ್ವಾಗತಿಸಿದರು ಉಪಪ್ರಬಂಧಕ ಧರ್ಮೆಂದ್ರ ಸುವರ್ಣ, ಅಧಿಕಾರಿ ಶ್ರೀನಿಧಿ ಬಂಗೇರ ಸಿಬ್ಬಂದಿಗಳಾದ ಚಂದ್ರಹಾಸ ಅಮೀನ, ಸ್ನೇಹಲ್ ಮೊರಾಜ್ಕರ್, ಶಿಥಿಲ್ ಕುಮಾರ್ ಮತ್ತು ಚೈತ್ರಾ ಕರ್ಕೇರ ಸಹಕರಿಸಿದರು. ಖೋಪರ್‌ಖೈರ್ನೆ ಶಾಖೆಯ ದಶಮಾನೋತ್ಸವದ ಅಂಗವಾಗಿ ಅಂದು ಗ್ರಾಹಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
