
ಸಂಘಟನೆಯ ಬಲವರ್ಧನೆಗೆ ಕ್ರೀಡಾಕೂಟ ಅಗತ್ಯ: ಪ್ರವೀಣ್ ಭೋಜ ಶೆಟ್ಟಿ,
ದುಬೈ : ಯುಎಇ ಬಂಟ್ಸ್ ನ ಆಯೋಜಿಸಿದ “ಸ್ಪೋರ್ಟ್ಸ್ ಡೇ -2025″ಯಲ್ಲಿ ಯುಎಇಯಲ್ಲಿ ಇರುವ ಎಲ್ಲಾ ರಾಜ್ಯದ ಬಂಟ ಬಾಂದವರು ಜ.12 ರಂದು ಇತಿಸಲಾಟ್ ಅಕಾಡೆಮಿ ಸೋರ್ಟ್ಸ್ ನ ಕ್ಲಬ್ ಗಿಸಾಸ್ ನ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಒಂಬತ್ತರಿಂದ ರಾತ್ರಿ ವರೆಗೆ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ಯಶಸ್ವಿಯಾಗಿ ಜರುಗಿತು.

ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿ ಮಾತನಾಡಿ ದುಬೈಯಲ್ಲಿ ಬಂಟ ಬಂಧುಗಳನ್ನು ಒಗ್ಗೂಡಿಸುವ ಮೂಲಕ ಅವರ ಕ್ರೀಡಾ ಸ್ಫೂರ್ತಿಗೆ ಪ್ರೋತ್ಸಾಹ ಕಾರ್ಯ ನೀಡುವ ನಿರಂತರ ನಡೆಯಬೇಕು,ಸಂಘಟನೆಯ ಬಲವರ್ಧನೆಗೆ ಕ್ರೀಡಾಕೂಟ ಅಗತ್ಯ ಎಂದು ನುಡಿದರು,

ಬೆಳಿಗ್ಗೆ ವೈಷ್ಣವಿ ಶೆಟ್ಟಿ ಮತ್ತು ಸಂಗೀತ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಯುಎಇ ಬಂಟ್ಸ್ ನ ಪೋಷಕರಾದ ಡಾ.ಬಿ.ಆರ್ ಶೆಟ್ಟಿ ಮತ್ತು ಇಂಟರ್ನ್ಯಾಷನಲ್ ಇಂಡಿಯನ್ ಕರಾಟೆ ಪಟು ಪೂಜಾ ಶ್ರೀ ಶೆಟ್ಟಿ ಬಲೂನ್ ಹಾರಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯುಎಇ ಬಂಟ್ಸ್ ನ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ, ಮುಂಬಯಿ ಬಂಟರ ಸಂಘದ ಪ್ರಾದೇಶಿಕ ಸಮಿತಿಯ ಸೆಂಟ್ರಲ್ ವಲಯದ ಸಮನ್ವಯಕ ರವೀಂದ್ರನಾಥ ಭಂಡಾರಿಯವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಆರು ತಂಡಗಳ ಮಾಲೀಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ,ಉದಯ ಶೆಟ್ಟಿ, ಸುಂದರ ಶೆಟ್ಟಿ ಅಬುಧಾಬಿ,ಸುಜತ ಶೆಟ್ಟಿ, ಅಶ್ವಿತ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಕಾರ್ಯಕ್ರಮದ ಮುಖ್ಯ ಸಂಘಟಕರಾದ ಪ್ರಸಾದ್ ಶೆಟ್ಟಿ, ವಿವೇಕ್ ಶೆಟ್ಟಿ,ದಿನಕರ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಯಾಗಿ ಊರಿಂದ ಆಗಮಿಸಿದ ಇಂಟರ್ನ್ಯಾಷನಲ್ ಇಂಡಿಯನ್ ಕರಾಟೆ ಪಟು ಪೂಜಾ ಶ್ರೀ ಶೆಟ್ಟಿಯವರನ್ನು ಶಾಲು ಹೊದಿಸಿ, ಪೇಟ ಇಟ್ಟು ಸ್ಮರಣಿಕೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಸರ್ವೋತ್ತಮ ಶೆಟ್ಟಿ ಮತ್ತು ರೇಷ್ಮ ದೀವೆಶ್ ಅಳ್ವರವರು ಸನ್ಮಾನಿತರ ಪರಿಚಯಿಸಿದರು.
ರೇಂಜರ್ಸ್, ಇಂಜಿಪಿಲ್ ರೆಡ್ ಇಂಡಿಯನ್, ಎಸಿ ಅವೇಂಜರ್ಸ್,ಜಿ.ಬಿ.ಎಮ್.ಟಿ.ಪಾಂತೆರ್ಸ್,ದುಮೆಖ್ ಟೈಟನ್ಸ್,ಅಬುಧಾಬಿ ಟೈಗರ್ಸ್ ಎಂಬ ಆರು ತಂಡಗಳನ್ನು ರೂಪಿಸಿ ರನ್ನಿಂಗ್ ರೇಸ್,ರಿಲೆ,ಲೋಂಗ್ ಜಂಪ್,ಸೊರ್ಟ್ ಪುಟ್,ಬ್ಯಾಡ್ಮಿಂಟನ್, ವಾಲಿಬಾಲ್, ಡಾಡ್ಜಿ ಬಾಲ್,ಗೋಣಿಚೀಲ ಓಟ,ಹಗ್ಗ ಜಗ್ಗಟ ಹಾಗೂ ಇನ್ನಿತರ ಆಟೋಟ ಸ್ಪರ್ಧೆಗಳನ್ನು ಆಡಿಸಲಾಯಿತು.ಉತ್ಸಾಹ ಹುಮ್ಮಸ್ಸುದಿಂದ ಮಕ್ಕಳು, ಮಹಿಳೆಯರು, ಪುರುಷರು ಆಡಿದರು.
ಬೆಳಿಗ್ಗೆಯಿಂದ ರಾತ್ರಿಯ ವರೆಗೆ ನಡೆದ ಆಟೊಟ ಸ್ಪರ್ಧೆಯಲ್ಲಿ ರೇಂಜರ್ಸ್ ತಂಡ ಪ್ರಥಮ ಸ್ಥಾನ, ಎಸಿ ಅವೇಂಜರ್ಸ್ ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು. ಅಬುಧಾಬಿ ಟೈಗರ್ಸ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.
ರಾತ್ರಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪೂಜಾ ಶ್ರೀ ಶೆಟ್ಟಿ, ಯುಎಇ ಬಂಟ್ಸ್ ನ ಮಹಾ ಪೋಷಕರಾದ ಸರ್ವೋತ್ತಮ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ,ಶರತ್ ಶೆಟ್ಟಿ, ಸುಂದರ ಶೆಟ್ಟಿ ಅಬುಧಾಬಿ,ರತ್ನಾಕರ ಶೆಟ್ಟಿ, ದಿವಾಕರ ಶೆಟ್ಟಿ, ತಾರನಾಥ ರೈಯವರು ವಿಜೇತ ತಂಡಗಳಿಗೆ ಹಾಗೂ ವಿಜೇತ ಕ್ರೀಡಾ ಪಟುಗಳಿಗೆ ಮೆಡಲ್ ಹಾಗೂ ಸರ್ಟಿಫಿಕೇಟ್ ನೀಡಿ ಅಭಿನಂದಿಸಿದರು.ಸರ್ವೋತ್ತಮ ಶೆಟ್ಟಿ ಮತ್ತು ಶಶಿ ರವಿರಾಜ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ರೂವರಿಗಳಾದ ವಿವೇಕ್ ಶೆಟ್ಟಿ, ಪ್ರಸಾದ್ ಶೆಟ್ಟಿ, ದಿನಾಕರ ಶೆಟ್ಟಿಯವರನ್ನು,ಕಾರ್ಯಕ್ರಮದ ಯಶಸಿಗೆ ದುಡಿದ ಕಾರ್ಯಕರ್ತರಿಗೆ ಹಾಗೂ ತೀರ್ಪುಗಾರರಿಗೆ ಸರ್ವೋತ್ತಮ ಶೆಟ್ಟಿಯವರು ಅಭಿನಂದನೆ ಸಲ್ಲಿಸಿ ಧನ್ಯವಾದವಿತ್ತರು.
ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)