24.7 C
Karnataka
April 3, 2025
ಮುಂಬಯಿ

ಬೈಂದೂರು-ಕುಂದಾಪುರ ಬಿಲ್ಲವರು ಮುಂಬಯಿ ಸ್ನೇಹ ಸಮ್ಮಿಲನ, ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮ



ಹಲವಾರು ವರ್ಷಗಳಿಂದ ಸಮುದಾಯದ ಸೇವೆ ಮಾಡಿರುವುದು ಸಾರ್ಥಕವಾಯಿತು : ನ್ಯಾಯವಾದಿ ಆನಂದ ಎಮ್. ಪೂಜಾರಿ

ಮುಂಬಯಿ ಜ.21 : ಯಾವುದೇ ಪ್ರತಿಫಲಾಪೇಕ್ಷೆ ಬಯಸದ ಸ್ವಾಭಿಮಾನಿ ಬಿಲ್ಲವರ ತಂಡವು ಸಮುದಾಯದ ಸೇವೆ ಮಾಡುವ ಸದುದ್ದೇಶದಿಂದ ಕಾರ್ಯನಿರತರಾಗಿದ್ದು ಆ ಪ್ರಯುಕ್ತ ಇಂದು ಪ್ರಥಮ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ರಥ ಸಪ್ತಮಿ ಬರುವ ಮೊದಲೆ ಅರಸಿನ ಕುಂಕುಮ ಕಾರ್ಯಕ್ರಮ ಆಯೋಜಿಸಬೇಕೆಂಬ ಶಕುಂತಲಾ ಪೂಜಾರಿಯವರ ಆಶಯದಂತೆ ನಾವೆಲ್ಲರು ಕಾರ್ಯನಿರತರಾಗಿ ಈ ಯಶಸ್ವಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ನಮ್ಮ ನಿರೀಕ್ಷೆಗೂ ಮೀರಿ ತಾವೆಲ್ಲರೂ ಸ್ಪಂದಿಸಿರುವುದು ಸಂತಸ ತಂದಿದೆ ನಮ್ಮದು ಯಾವುದೇ ಸಂಸ್ಥೆಯಲ್ಲ ಆದರೂ ನಮ್ಮ ಮೇಲಿನ ವಿಶ್ವಾಸದಿಂದ ತಾವೆಲ್ಲರೂ ಇಷ್ಟೊಂದು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದಿರುವುದು ತುಂಬಾ ಸಂತೋಷವಾಯಿತಲ್ಲದೆ ಹಲವಾರು ವರ್ಷಗಳಿಂದ ನಾವು ಸಮುದಾಯದ ಸೇವೆ ಮಾಡಿರುವುದು ಸಾರ್ಥಕವಾಯಿತು. ನಮ್ಮ ಸಮುದಾಯ ಸೇವೆ ಸಹಿಸಲಾಗದ ಕೆಲವರು ನಾವು ಬೇರೆ ಸಂಘ ಕಟ್ಟಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ನಾವೇ ಕಟ್ಟಿ ಬೆಳೆಸಿದ ಸಂಘ ಇರುವಾಗ ಬೇರೆ ಸಂಘ ಕಟ್ಟುವ ಅಗತ್ಯ ಸದ್ಯಕ್ಕಂತೂ ಇಲ್ಲ ಅಲ್ಲದೆ ನಮಗೆ ಸಂಘದ ಮೇಲೆ ಯಾವುದೇ ಬೇಸರವಿಲ್ಲ ಆದರೆ ಅಲ್ಲಿ ಕೆಲವರ ವರ್ತನೆಯಿಂದ ಬೇಸರ ಆಗಿರುವುದು ನಿಜ ಅದಕ್ಕಾಗಿ ನಾವೆಲ್ಲ ಸ್ವಲ್ಪ ಅಂತರ ಕಾಯ್ದು ಕೊಂಡಿದ್ದೇವೆ ಎಂದು ಮುಂಬಯಿ ಹೈಕೋರ್ಟ್ ನ್ಯಾಯವಾದಿ ಆನಂದ ಎಮ್. ಪೂಜಾರಿ ನುಡಿದರು.
ಅವರು ಜನವರಿ 19 ರಂದು ಥಾಣೆ ಪಶ್ಚಿಮದಲ್ಲಿರುವ ಮೋತಿಲಾಲ್ ಹರಗೋವಿಂದ ದಾಸ್ ವಿದ್ಯಾಲಯದ ಸಭಾಂಗಣದಲ್ಲಿ ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ನೆಲೆಸಿರುವ ಬೈಂದೂರು-ಕುಂದಾಪುರ ಬಿಲ್ಲವರಿಗಾಗಿ ಆಯೋಜಿಸಿದ ಸ್ನೇಹ ಸಮ್ಮಿಲನ ಅರಸಿನ ಕುಂಕುಮ ಮತ್ತು ಮನೋರಂಜನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಮುದಾಯದ ಸೇವೆಯನ್ನು ನಿಸ್ವಾರ್ಥ ಮನೋಭಾವದಿಂದ ಯಾರು ಬೇಕಾದರೂ ಮಾಡಬಹುದು ಇಂಥವರೇ ಮಾಡಬೇಕೆಂಬ ನಿಯಮಗಳಿಲ್ಲ, ಮುಂಬರುವ ದಿನಗಳಲ್ಲಿ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಿರಂತರವಾಗಿ ಸಮುದಾಯದ ಸೇವೆ ಮಾಡಲಿದ್ದೇವೆ ಎಂದು ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿದ ಮುಂಬಯಿ ಹೈಕೋರ್ಟ್ ನ್ಯಾಯವಾದಿ ಶಕುಂತಲಾ ಎ. ಪೂಜಾರಿ ಮತ್ತು ಗೌರವ ಅತಿಥಿ ನರಸಿಂಹ ಎಮ್. ಬಿಲ್ಲವ ಮಾತನಾಡಿ ಎಲ್ಲರಿಗೂ ಶುಭಕೋರಿದರು.

ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ನಮ್ಮದು ಯಾವುದೇ ಸಂಸ್ಥೆಯಲ್ಲ ಸಮುದಾಯ ಸೇವೆ ಮಾಡುವ ನಿಟ್ಟಿನಲ್ಲಿ ಸಮಾನ ಮನಸ್ಕರೆಲ್ಲರು ಒಂದೆಡೆ ಸೇರಿ ಈ ನಿರ್ಧಾರ ತಳೆದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮಲ್ಲಿ ಹೆಚ್ಚಿನವರು ಹಲವಾರು ವರ್ಷಗಳಿಂದ ಸಮುದಾಯದ ಸೇವೆ ಮಾಡುತ್ತಾ ಬಂದಿದ್ದೇವೆ
ಆದರೆ ಕೆಲವರು ನಮ್ಮನ್ನ ಸಮುದಾಯ ಸೇವೆಯಿಂದ ವಿಮುಖರನ್ನಾಗಿ ಮಾಡಲು ಸಾಕಷ್ಟು ಕಸರತ್ತು ಮಾಡಿ ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು ಈಗಲೂ ಕೂಡ ಮಾಡುತ್ತಲೇ ಇದ್ದಾರೆ. ಆದರೆ ಯಾರೇ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನ್ನು ಈ ಸಮುದಾಯ ಸೇವೆಯಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಏಕೆಂದರೆ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಇನ್ನು ನಮ್ಮಲ್ಲಿದೆ. ನಮಗೆ ಯಾವುದೇ ಅಧಿಕಾರದ ಲಾಲಸೆ, ಕುರ್ಚಿಯ ವ್ಯಾಮೋಹವಿಲ್ಲ ಆದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಸುಮ್ಮನಿರಲು ಮನಸ್ಸು ಒಪ್ಪುತ್ತಿಲ್ಲ ಅನ್ಯಾಯ ಹಾಗೂ ಅಪಪ್ರಚಾರಗಳ ಬಗ್ಗೆ ನ್ಯಾಯ ಕೇಳದೆ ಸುಮ್ಮನಿದ್ದು ಆತ್ಮ ವಂಚನೆ ಮಾಡಿಕೊಳ್ಳಲು ನಾವು ಸಿದ್ಧರಿಲ್ಲ.
ನಾವು ನೇರವಾಗಿ ಮಾತನಾಡುವುದು ಕೆಲವರಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ನಮ್ಮ ತೇಜೋವಧೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಅದಕ್ಕಾಗಿ ನ್ಯಾಯ ಸಿಗುವ ವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ.
ಯಾವುದೋ ವ್ಯಾಮೋಹಕ್ಕೆ ಬಲಿಯಾದ ಕೆಲವರು ನಮ್ಮ ವಿರುದ್ಧ ಷಡ್ಯಂತ್ರ ಮಾಡಿದರು ಆ ಮುಂದೆ ಎನಾಯಿತು ಎನ್ನುವುದು ನಾನು ಈಗಾಗಲೇ ಸಾಕಷ್ಟು ಜನರಿಗೆ ತಿಳಿಸಿದ್ದೆ ತಮಗೆಲ್ಲರಿಗೂ ಕೂಡ ಗೊತ್ತಿರಬಹುದು. ಕೆಲವರು ಈಗ ಹಳೆಯ ಮರಕ್ಕೆ ನೀರೆರೆಯಬೇಕು ಎಂದು ಉಪದೇಶ ನೀಡುವುದು ಹಾಸ್ಯಾಸ್ಪದ ಏಕೆಂದರೆ ಅದೇ ಹಳೆ ಮರಕ್ಕೆ ಎಲ್ಲರು ಸೇರಿ ನೀರೆರೆಯುವ ಸಂದರ್ಭದಲ್ಲಿ ತಾವು ಬಕೆಟ್ ಹಿಡಿದು ಬೇರೆಡೆ ಸಾಗಿರುವುದು ಮರೆತು ಹೋಯಿತೇ..? ಆ ಹಳೆ ಮರ ಇಷ್ಟು ದೊಡ್ಡವಾಗಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಆದುದರಿಂದ ಆ ಮರದ ಬೆಳವಣಿಗೆಗೆ ಅಡ್ಡಿಯಾಗುವ ಯಾವ ಯೋಚನೆ ಅಥವಾ ಯೋಜನೆ ನಮ್ಮಲ್ಲಿಲ್ಲ ಆದರೆ ಆ ಮರದ ನೆರಳಿನಲ್ಲಿ ಇರುವವರು ಆ ನೆರಳು ನಮಗೆ ಮಾತ್ರ ಸೀಮಿತ ಬೇರೆ ಯಾರು ಬರಬಾರದು ಎಂದು ಹೇಳಿದರೆ ಅಥವಾ ಆ ರೀತಿ ಹೇಳುವವರಿಗೆ ಬೆಂಬಲ ನೀಡಿದರೆ ಆಗ ನಾವು ಮರದ ಕೊಂಬೆ ಅಥವಾ ಮರದ ಬುಡ ಕಡಿಯುವುದಿಲ್ಲ ಬದಲಾಗಿ ಯಾರೋ ಬೆಳೆಸಿದ ಮರದ ನೆರಳಿನಲ್ಲಿ ನಿಂತು ಸುಳ್ಳು ಹೇಳುವವರನ್ನ ಅಪಪ್ರಚಾರ ಮಾಡುವವರನ್ನ ಆ ನೆರಳಿನಿಂದ ದೂರ ಸರಿಸುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಆದರೆ ನಾವು ಈವರೆಗೂ ಶಾಂತವಾಗಿರುವುದು ನಮ್ಮ ದೌರ್ಬಲ್ಯ ಎಂದು ಯಾರು ಭಾವಿಸಬಾರದು. ಇನ್ನು ಕೆಲವರು ಅವಕಾಶ ವಂಚಿತರಾದರು ಎಂದು ಶಂಖನಾದ ಮಾಡುವವರು ತಾವು ಒಮ್ಮೆಯಾದರು ವಂಚಿತರ ಬಗ್ಗೆ ಮಾತನಾಡಿರುವುದು ಇದೆಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಅದು ಅಲ್ಲದೆ ವಂಚಿತರು ಎಂದು ಬಿಂಬಿಸುವವರು ಸಮುದಾಯಕ್ಕಾಗಿ ವಂಚಿತರ ಕೊಡುಗೆ ಏನು ಎನ್ನುವುದನ್ನು ಕೂಡ ಬಹಿರಂಗ ಪಡಿಸಬೇಕು ನಾವು ಬೇರೆಯವರ ಬಗ್ಗೆ ಮಾತನಾಡುವ ಮೊದಲು ಹತ್ತು ಬಾರಿ ಯೋಚನೆ ಮಾಡಬೇಕು ಅದನ್ನ ಬಿಟ್ಟು ಅವಕಾಶ ಸಿಕ್ಕಿದೆ ಎಂದು ಬಾಯಿಗೆ ಬಂದ ಹಾಗೇ ಮಾತನಾಡುವುದು ಸರಿಯಲ್ಲ. ಇನ್ನು ಪ್ರಶಂಸೆ ಎನ್ನುವುದು ನಮ್ಮ ಕಾರ್ಯ ಚಟುವಟಿಕೆ ನೋಡಿದವರು ಹೇಳಬೇಕೆ ಹೊರತು ನಮ್ಮ ಬೆನ್ನನ್ನು ನಾವು ತಟ್ಟಿಕೊಳ್ಳುವುದಲ್ಲ ಆ ರೀತಿ ನಮ್ಮನ್ನ ನಾವು ಹೊಗಳಿಕೊಂಡು ಪ್ರಯೋಜನವು ಇಲ್ಲ. ಇದೆಲ್ಲ ಈ ಸಂದರ್ಭದಲ್ಲಿ ಹಂಚಿಕೊಳ್ಳಲು ಕಾರಣ ಹಲವಾರು ಜನ ಸಮುದಾಯ ಬಾಂಧವರು ಇತ್ತೀಚಿನ ವಿದ್ಯಮಾನಗಳ ಬಗ್ಗೆ ನನ್ನಲ್ಲಿ ಮಾತನಾಡಿರುವುದರಿಂದ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.


ಪಿಸಿಯೋಥೆರಪಿ ಶಿಕ್ಷಣವನ್ನು ಮುಗಿಸಿ ವೃತ್ತಿ ಆರಂಭಿಸಿದ ಡಾ. ಸೌಜನ್ಯ ಎ. ಬಿಲ್ಲವ ಅವರನ್ನು ಸತ್ಕರಿಸಲಾಯಿತು ಕಾರ್ಯಕ್ರಮದ ಅದೃಷ್ಟವಂತ ಬಿಲ್ಲವ ವಿಜೇತರಾದ ಯಶೋದಾ ಪ್ರಭಾಕರ ಪೂಜಾರಿ, ಯಶೋದಾ ಸತೀಶ್ ಪೂಜಾರಿ, ಶ್ರೀಧರ ವಿ. ಪೂಜಾರಿ ಹಾಗೂ ನೃತ್ಯ ಪ್ರದರ್ಶಿಸಿದ ಚಾರ್ವಿಕಾ ಪೂಜಾರಿ, ಅನನ್ಯಾ ಪೂಜಾರಿ, ಆರಾಧ್ಯ ಪೂಜಾರಿ, ಶಿವಾನಿ ಪೂಜಾರಿ, ಸೌಜನ್ಯ ಬಿಲ್ಲವ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಿ ಗೌರವಿಸಲಾಯಿತು.


ವೇದಿಕೆಯಲ್ಲಿ ಸಭಾಧ್ಯಕ್ಷರಾದ ಆನಂದ ಎಮ್. ಪೂಜಾರಿ, ಉದ್ಘಾಟಕರಾದ ಶಕುಂತಲಾ ಎ. ಪೂಜಾರಿ, ಗೌರವ ಅತಿಥಿಗಳಾದ ಎನ್. ಜಿ. ಪೂಜಾರಿ, ನರಸಿಂಹ ಎಮ್. ಬಿಲ್ಲವ, ಮಂಜುನಾಥ ವಿ. ಪೂಜಾರಿ, ಸಂಜೀವ ಸಿ. ಪೂಜಾರಿ, ರಾಜು ಬಿ. ಪೂಜಾರಿ ಹಾಗೂ ಸೂರ್ಯ ಎಸ್. ಪೂಜಾರಿ, ಆನಂದ ಕೆ. ಪೂಜಾರಿ, ಗಿರಿಜಾ ಬಿ. ಪೂಜಾರಿ ಉಪಸ್ಥಿತರಿದ್ದರು.
ಮಲ್ಲಿಕಾ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ಯಶೋದಾ ಎಸ್. ಪೂಜಾರಿ ಪ್ರಾರ್ಥಿಸಿದರು ಅಶೋಕ ಎನ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಲಕ್ಷ್ಮಣ ಪೂಜಾರಿ ಕೊಡೇರಿ ಕಾರ್ಯಕ್ರಮ ನಿರೂಪಿಸಿದರೆ ಗಿರಿಜಾ ಬಿ. ಪೂಜಾರಿ ವಂದಿಸಿದರು
ಕುಸುಮ ಎ. ಪೂಜಾರಿ, ವಿಜಯ ಎಮ್. ಚಂದನ್, ಕಮಲ ಎಮ್. ಪೂಜಾರಿ, ರೇಖಾ ಎನ್. ಬಿಲ್ಲವ, ಪೂರ್ಣಿಮಾ ಪೂಜಾರಿ, ಲಲಿತಾ ಪೂಜಾರಿ, ಸೋಮಯ್ಯ ಪೂಜಾರಿ, ಶ್ರೀಧರ ಪೂಜಾರಿ, ಅಯ್ಯಪ್ಪ ಪೂಜಾರಿ, ರತ್ನಾಕರ ಪೂಜಾರಿ ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ರಾಜೀವ ಪೂಜಾರಿ, ರಾಘವೇಂದ್ರ ಪೂಜಾರಿ, ಶಂಕರ ಪೂಜಾರಿ, ವಸಂತ ಪೂಜಾರಿ, ವರುಣ ಬಿಲ್ಲವ, ಶ್ರೇಯಾ ಪೂಜಾರಿ, ಚೈತ್ರಾ ಬಿಲ್ಲವ ಸಹಕರಿಸಿದರು.

Related posts

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ವತಿಯಿಂದ ಮಲಾಡ್ ಪೂರ್ವದ ತುಳು  ಕನ್ನಡಿಗರ ಮನೆ ಮನೆಯಲ್ಲಿ ರಾಮ ನಾಮಸ್ಮರಣೆ ಅಭಿಯಾನ: 

Mumbai News Desk

ಘೋಡ್ ಬಂದರ್ ರೋಡ್ ಕನ್ನಡ ಅಸೋಶಿಯೇಶನ್ ಅನಾಥ ಮಕ್ಕಳ ನಿರ್ವಹಣಾ ಕೇಂದ್ರಕ್ಕೆ ಭೇಟಿ ಮತ್ತು ವಿದ್ಯಾರ್ಥಿ ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ, ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿಯ ನೂತನ ಸಮಿತಿಯ ರಚನೆ.

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾಠ್ಯಕ್ರಮ ,

Mumbai News Desk