
ಪರಮ ಪೂಜ್ಯನೀಯ ಶ್ರೀ ವಿಜಯಾನಂದ ಸ್ವಾಮೀಜಿಯವರ ಜೀವನ ಯಾತ್ರೆಯ ಸಮಗ್ರ ಅದ್ಯಾತ್ಮಿಕ ನೆಲೆಯ ಪಥವರಿತು ಸಿದ್ಧಿ -ಸಾಧನೆಗಳ ಸಂಕ್ಷಿಪ್ತ ಬರಹ.
ಶ್ರೀ ವಿಜಯಾನಂದ ಸ್ವಾಮೀಜಿಯವರಿಗೆ ಮೊದಲು ಗಾಯತ್ರಿ ಮಂತ್ರ ಬೋಧಿಸಿದವರು ಆರ್ಯ ಸಮಾಜದ ಮಂಗಳೂರಿನ ಪೂಜ್ಯ ಲಕ್ಷ್ಮಣದೇವ ವಿದ್ಯಾರ್ಥಿಯವರು. ಅವಧೂತ ಭಗವಾನ್ ಶ್ರೀ ಗುರು ನಿತ್ಯಾನಂದ ದೇವರ ಪರಮ ಶಿಷ್ಯ ಮೌನಿ ಬಾಬಾ ಕರುಣಾನಂದ ಸ್ವಾಮಿ ಅವರಿಂದ ಗಣೇಶ್ ಪುರಿಯಲ್ಲಿ ದೃಷ್ಟಿ ಮೂಲಕ ದ್ರಕ್ ದೀಕ್ಷೆ ನೀಡಿದರು. ಹೌದು ಭಗವಾನ್ ಶ್ರೀ ನಿತ್ಯಾನಂದ ಗುರುಗಳು ಹಾವಿನ ರೂಪದಲ್ಲಿ ದರುಷನ ಮತ್ತು ಮೂರು ಅಮೂಲ್ಯ ಮಂತ್ರ ಶಕ್ತಿ ಪಾಪ ದೀಕ್ಷೆ, ಹಾಗೂ ಸಂಕಲ್ಪದಿಂದ ಸಿದ್ಧಯೋಗ ದೀಕ್ಷೆ, ಹೀಗೆ ಸುಮಾರು 24ಕ್ಕೂ ಹೆಚ್ಚು ಪರಮಪೂಜ್ಯ ಸಿದ್ದ ಅವಧೂತ ದೀಕ್ಷೆ ಹಾಗೂ ಆಶೀರ್ವಾದ ಶ್ರೀ ವಿಜಯನಂದ ಸ್ವಾಮೀಜಿ ಅವರಿಗೆ ಲಭಿಸಿರುವುದು ಅವರ ವಿಶ್ವರೂಪದ ಅನಾವರಣ.
ಒಮ್ಮೆ ಅವದೂತ ಭಗವಾನ್ ಶ್ರೀ ನಿತ್ಯಾನಂದ ಸ್ವಾಮಿಗಳು ವಿಜಯಾನಂದ ಗುರುವರ್ಯರ ಮನೆಯಲ್ಲಿ ತಂಗಿದ್ದು , ವಿಜಯಾನಂದ ಗುರುಗಳಿಗೆ ಶ್ರೀ ಅವದೂತ ಭಗವಾನ್ ಶ್ರೀ ನಿತ್ಯಾನಂದರ ಬಗ್ಗೆ ಶ್ರದ್ಧೆ, ಭಕ್ತಿ ಯ ಜೊತೆಗೆ ಅಸಕ್ತಿ ಮೂಡಿತು .
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಲಪ್ರಭಾ ಜಲಾಶಯದ ಹಿನ್ನರಿನ ತಟದಲ್ಲಿರುವ ಬೇವಿನಕೊಪ್ಪವು ಒಂದು ಸಣ್ಣಗ್ರಾಮ, ಗುರುದೇವ ಭಗವಾನ್ ನಿತ್ಯಾನಂದರು ಮತ್ತು ಇತರ ಜೀವಿಗಳ ಆಶೀರ್ವಾದದಿಂದ ಇಲ್ಲಿ ವಿಜಯಾನಂದ ಸ್ವಾಮಿಜಿ ಅವರು ಆನಂದಾಶ್ರಮವನ್ನು ಬೆಳಗಿಸಿದರು. ಅವದೂತ ಭಗವಾನ್ ನಿತ್ಯಾನಂದರಿಗೆ ಮಕ್ಕಳೆಂದರೆ ಪ್ರೀತಿ, ವಾತ್ಸಲ್ಯ. ವಿಜಯಾವಂದರೂ ಮಕ್ಕಳಿಗಾಗಿ ಬಾಲಭೋಜನದ ವ್ಯವಸ್ಥೆಯನ್ನು ಮಾಡಿರುವರು. ಮಕ್ಕಳು ಆಶ್ರಮದಲ್ಲಿದ್ದು ಗುರುಗಳ ಸಲಹೆ, ಮಾರ್ಗದರ್ಶನ ಪಾಲಿಸುತ್ತಿದ್ದಾರೆ.
ಶ್ರೀ ವಿಜಯನಂದ ಸ್ವಾಮೀಜಿಯವರು ಪೂರ್ವಾಶ್ರಮದಲ್ಲಿ ಸಮಾಜವಾದ ಮತ್ತು ಸಮಾತವಾದದಲ್ಲಿ ವಿಶ್ವಾಸವಿಟ್ಟವರು ಸುಮಾರು 26 ತುಳು ಕನ್ನಡ ನಾಟಕಗಳನ್ನು ರಚಿಸಿ ಗೀತಾ ರಚನೆ ಮತ್ತು ಸಂಗೀತ ನಿರ್ದೇಶನ ನೀಡಿದ ಅಲ್ಲದೆ ಶಾಲಾ ಮಕ್ಕಳಿಗೆ 20 ನಿಮಿಷಗಳ ಹತ್ತಾರು ನಾಟಕಗಳನ್ನು ರಚಿಸಿದ್ದಾರೆ.
ಪರಮಪೂಜ್ಯ ಶ್ರೀ ವಿಜಯಾನಂದ ಗುರುಗಳಿಗೆ ಇದೀಗ ವಜ್ರ ಮಹೋತ್ಸವದ ಸಂಭ್ರಮ ಆ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮವು 2025, ಜನವರಿ 24 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೇವಿನ ಕೊಪ್ಪದಲ್ಲಿರುವ ಗುರುಗಳ ಆಶ್ರಮದಲ್ಲಿ ನಡೆಯಲಿರುವುದು ಇದೇ ಶುಭಾವಸರದಲ್ಲಿ ಶ್ರೀ ವಿಜಯನಂದರು ಬರೆದ “ಪತವರಿಯದ ಪಯಣಿಗ” ಮತ್ತು “ಅವಧೂತ ದರ್ಶನ” ಕೃತಿಗಳು ಲೋಕಾರ್ಪಣೆಗೊಳ್ಳಲಿರುವುದು.
ಶ್ರೀ ವಿಜಯನಂದ ಸ್ವಾಮೀಜಿ ಅವರು ಎಲ್ಲವನ್ನು ಅರಿತಿದ್ದರೂ, ಅರಿಯದಂತೆ ಸರಳ ಸದ್ಗುಣಗಳನ್ನು ಮೈಗೂಡಿಸಿಕೊಂಡಿರುವರಲ್ಲದೆ, ನಡೆದಾಡುವ ಜ್ಞಾನ ಭಂಡಾರ ಎಂದೇ ಪ್ರಸಿದ್ಧರಾಗಿದ್ದಾರೆ.
ಪರಮ ಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿ ಅವರ 75ನೇ ಜನ್ಮದಿನಚರಣೆಯ ಒಟ್ಟು ಕಾರ್ಯಕ್ರಮದ ವಿವರ :
ತಾ. 24.1.2025ರ ಬೆಳಿಗ್ಗೆ 6 ಗಂಟೆಗೆ ಭಗವಾನ್ ನಿತ್ಯಾನಂದರ ಪಾದುಕ ಪೂಜೆ
7 ರಿಂದ 8 ಗಂಟೆ ತನಕ : ಓಂ ನಮೋ ಭಗವತೇ ನಿತ್ಯಾನಂದಾಯ ಅಖಂಡ ನಾಮಸ್ಮರಣೆ
10 ಗಂಟೆಗೆ : ನಿತ್ಯಾನಪೂರ್ಣೇಶ್ವರಿ, ಬಾಲ ಭೋಜ ನಿಲಯ ಕಟ್ಟಡದ ಉದ್ಘಾಟನೆ.
10.30ರಿಂದ ಸಭಾ ಕಾರ್ಯಕ್ರಮ
ದಿವ್ಯ ಉಪಸ್ಥಿತಿ : ಪರಮ ಪೂಜ್ಯ ಶ್ರೀ ಅವಧೂತ ವಿನಯ ಗುರೂಜಿ ( ದತ್ತಾಶ್ರಮ ಗೌರಿಗದ್ದೆ )
ತಪೋನಿಷ್ಠ ಬಿ. ಸಿ. ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿ (ಸುಖದೇವಾನಂದ ಪುಣ್ಯಶ್ರಮ , ನಯನಗರ್ )
ಡಾ. ಮಹಂತೇಶ ಶಾಸ್ತ್ರಿ ಆರಾದ್ರಿಮಠ ( ಕರ್ನಾಟಕ ರಾಜ್ಯ ಧಾರ್ಮಿಕ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು )
ಕಾರ್ಯಧ್ಯಕ್ಷ : ಗೌರವನಿತ ಮಹಾಂತೇಶ್ ಕೌಜಲಗಿ (ಶಾಸಕರು, ಬೈಲಹೊಂಗಲ )
ಮುಖ್ಯ ಅತಿಥಿ : ಗೌರವಾನ್ವಿತ ಎಚ್ ಕೆ ಪಾಟೀಲ್ ( ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ )
ಗ್ರಂಥ ಬಿಡುಗಡೆ “ಅವದೂತ ದರ್ಶನ (ಕೃತಿಕಾರ : ಪರಮಪೂಜ್ಯ ಶ್ರೀ ವಿಜಯಾನಂದ ಸ್ವಾಮೀಜಿ ) ಪರಮಪೂಜ್ಯ ಶ್ರೀ ಅವಧೂತ ವಿನಯ ಗುರೂಜಿ ಅವರಿಂದ
“ಪಥವರಿಯದ ಪಯಣಿಗ” ಆತ್ಮ ಚರಿತ್ರೆ ಬಿಡುಗಡೆ : ಚತುರ್ಭಾಷಾ ನಟ ಕಾಸರಗೋಡು ಚಿನ್ನ ಇವರಿಂದ
ಬಳಿಕ ಭಕ್ತರಿಂದ ಗುರುವಂದನೆ ಮತ್ತು ವಜ್ರ ಮಹೋತ್ಸವ ಆಚರಣೆ.
ಸಂಜೆ 6ರಿಂದ 7 : ಭಜನೆ (ಬೆಳಗಾವಿ ನಿತ್ಯಾನಂದ ಸತ್ಸಂಗ ಬಳಗದವರಿಂದ )
7 ರಿಂದ 7.45 : “ಕರುಣಾಸಿಂಧು” ( ಹರಿಕೀರ್ತನಕಾರ ಪುಷ್ಕಲ್ ಕುಮಾರ್ ಇವರಿಂದ )
ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ಬಳಿಕ ಅವದೂತ ದರ್ಶನ ಪ್ರವಚನ – ತೊಂಟದರಯ ನಿಜಗುಣನಂದ ಸ್ವಾಮೀಜಿ (ನಿಷ್ಕಳ ಮಂಡಪ, ಬೇಲೂರು ) ಇವರಿಂದ
ರಾತ್ರಿ 9 ರಿಂದ ಎನ್ ಎಸ್ ಪ್ರಸಾದ್ ಮತ್ತು ಬಳಗ ಬೆಂಗಳೂರು ಇವರಿಂದ ಸಂಗೀತ ಕಛೇರಿ.
ಗುರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು -ಮನ -ಧನದಿಂದ ಸಹಕಾರ ನೀಡಿ ಭಗವಾನ್ ಶ್ರೀ ನಿತ್ಯಾನಂದರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸ್ವಾಗತ ಸಮಿತಿ, ಭಗವಾನ್ ನಿತ್ಯಾನಂದ ಸದ್ಭಕ್ತ ಮಂಡಳಿ, ನಿತ್ಯಾನಂದ ಸೇವಾ ಸಮಿತಿಯ ಸದಸ್ಯರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : 8 9 5 1 0 5 6 3 1 4, 9 8 4 4 2 9 4 0 0 4, 9 9 4 5 0 5 1 3 1 4 ಹಾಗೂ 90 0 0 8 4 4 2 0 2 8 – ಸಂಪರ್ಕ ಮಾಡಬಹುದು.