ಮುಂಬಯಿ : ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ, ಮಲಾಡ್ ಇದರ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮವು ರವಿವಾರ ಜ. 26 ರಂದು ಸಂಜೆ 4.30 ರಿಂದ ರಾತ್ರಿ 9 ರ ತನಕ ಉತ್ಕರ್ಷ ಸಭಾಗೃಹ, ಉತ್ಕರ್ಷ ವಿದ್ಯಾ ಮಂದಿರ, ಮಲಾಡ್ ಪೂರ್ವ ಇಲ್ಲಿ ಮಲಾಡ್ ಶ್ರಿ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ ಅಧ್ಯಕ್ಷರಾದ ನ್ಯಾ. ಜಗನ್ನಾಥ್ ಎನ್. ಶೆಟ್ಟಿ ಪಣಿಯೂರು ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕುಮರೇಶ್ ಆಚಾರ್ಯ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಮಹಿಳಾ ವಿಭಾಗದವರಿಂದ ಭಜನೆ, ಯುವ ವಿಭಾಗದವರಿಂದ ಕುಣಿತ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ನಡೆಯಲಿರುವ
ಸಭಾ ಕಾರ್ಯಕ್ರಮ. ಮುಖ್ಯ ಅತಿಥಿಯಾಗಿ, ಅಡ್ವಕೇಟ್ ಮತ್ತು ಸಾಲಿಸಿಟರ್ಸ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರುದ ನ್ಯಾಯವಾದಿ. ಮೀನಾಕ್ಷಿ ಆಚಾರ್ಯ ಮತ್ತು ಇಮೇಜ್ ಕಂಸಲ್ಟೆಂಟ್ ಪ್ರವರ್ತಕರು,
ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಯ ವ್ಯವಸ್ಥಾಪಕರು, ಮಿಸ್ ಸುಂದರಿ | ಮಿಸ್ಸೆಸ್ ಕರ್ನಾಟಕ ಶೈಲಿಯ ಐಕಾನ್ ನಿಶಿತಾ ಸೂರ್ಯಕಾಂತ್ ಸುವರ್ಣ ಪಾಲ್ಗೊಳ್ಳಲಿದ್ದಾರೆ.
, ಆ ಬಳಿಕ ಹಳದಿ ಕುಂಕುಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಲಾ ಎಂ. ಪೂಜಾರಿ, ಕೋಶಾಧಿಕಾರಿ ನಳಿನಿ ಪಿ. ಕರ್ಕೇರ, ಉಪಕಾರ್ಯಾಧ್ಯಕ್ಷೆರುಗಳಾದ ಗೀತಾ ಜೆ. ಮೆಂಡನ್, ಲಲಿತಾ ಎಸ್ ಗೌಡ, ಸಂಧ್ಯ ಎಸ್. ಪ್ರಭು, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್ ಆಚಾರ್ಯ, ವಿಧ್ಯಾ ಡಿ. ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್ ರಾವ್, ವಿಧ್ಯಾ ಎಸ್ ನಾಯಕ್, ಸಲಹಾ ಸಮಿತಿಯ ಮೋಹಿನಿ ಜೆ. ಶೆಟ್ಟಿ ಮತ್ತು ರತ್ನ ಡಿ. ಕುಲಾಲ್ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
——