
ಮಂಗಳೂರು: ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವವು ನೆರವೇರಿತು. ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಹಾಗೂ ಲಿಯೋ ಕ್ಲಬ್ ಮಂಗಳಾದೇವಿಯ ಸಹಯೋಗದೊಂದಿಗೆ ಕಲಾಭಿ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್ ಬೆಂಬಲದೊಂದಿಗೆ ರೂಪಿತವಾದ 6 ನಾಟಕಗಳನ್ನು ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಇಲ್ಲಿನ ಶಾಲಾ ರಂಗ ತಂಡವು ಪ್ರಸ್ತುತಪಡಿಸಿತು.

ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀ ಹರಿಕೇಶ್ ಶೆಟ್ಟಿ ಉದ್ಘಾಟಿಸಿದರು. ಕಣ್ಣಾ ಮುಚ್ಚೆ ಅದರಾಚೆ ಶಾಲಾ ಮಾಸ ಪತ್ರಿಕೆ ಯನ್ನು ಮೂಡಂಬೈಲು ಶಾಲೆಯ
ಮುಕ್ಯೋಪಾಧ್ಯಾಯರಾದ ಅರವಿಂದ್ ಕುಡ್ಲ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಕಮಲಾಕ್ಷ, ರಫೀಕ್, ಮನ್ಸೂರ್ ಅಹ್ಮಮದ್, ಅಬ್ದುಲ್ ರಹಿಮಾನ್ ಹಾಗೂ SDMC ಸದಸ್ಯರು ಉಪಸ್ಥಿತರಿದ್ದರು.
ಮುಕ್ಯೋಪಾಧ್ಯಾಯರಾದ ಜಾನೆಟ್ ರೋಚ್ ಪ್ರಾಸ್ತಾ ವಿಕ ಮಾತುಗಳನ್ನಾಡಿದರು.ಶಿಕ್ಷಕರಾದ ಜಯಶ್ರೀ ಸ್ವಾಗತಿಸಿ, ಗೀತಾ ಕೆ ವಂದಿಸಿದರು. ಚೇತನ್ ಹಾಗೂ ಪುಷ್ಪ ಲತಾ ಜೋಗಿ ಕಾರ್ಯಕ್ರಮ ನಿರೂಪಿಸಿದರು.