September 6, 2026
Mumbai News Kannada
ಸುದ್ದಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ  ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಅಶಕ್ತರಿಗೆ ನೆರವು





ಮುಂಬಯಿ:.  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಹೆಬ್ರಿಯ ಕುಚ್ಚೂರು ಗ್ರಾಮದ ನಿವಾಸಿ  ಶೇಖರ್ ಶೆಟ್ಟಿಯವರು ಲಿವರ್ ಕ್ಯಾನ್ಸರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು ಅವರ ಧರ್ಮಪತ್ನಿಯು ಸಹ ಮಲಗಿದ್ದಲ್ಲಿಯೇ ಇರುವುದರಿಂದ ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವುದನ್ನು ಮನಗಂಡು ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರು ಮಾಡಿದ ಸಹಾಯಧನದ ಚೆಕ್ಕನ್ನು ಅಧ್ಯಕ್ಷರ ಸೂಚನೆಯಂತೆ ಶೇಖರ್ ಶೆಟ್ಟಿಯವರ ಪುತ್ರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ  ಸವಿತಾ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ಕಾರ್ಕಳದ ಬಜಗೋಳಿಯ ನಿವಾಸಿ ಕುಮಾರಿ ಹರ್ಷಿತಾ ಶೆಟ್ಟಿಯವರ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು ತಾಯಿ ಬೀಡಿ ಕಾರ್ಮಿಕಳಾಗಿದ್ದು ಮನೆ ನಿರ್ವಹಣೆ ನಡೆಸಲು ತೀರಾ ಅಶಕ್ತರಾಗಿದ್ದು ಅವರ ವಿದ್ಯಾಭ್ಯಾಸಕ್ಕೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಅವರ ತಾಯಿ ಶ್ರೀಮತಿ ಉಷಾ ಶೆಟ್ಟಿಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

ಅಂತೆಯೇ ಮಂಗಳೂರಿನ ಮಚ್ಚೂರು ಗ್ರಾಮದ ನಿವಾಸಿ ಕುಮಾರಿ ಶ್ರಾವ್ಯ ಶೆಟ್ಟಿಯವರ ತಂದೆ ನಿರುದ್ಯೋಗಿಯಾಗಿದ್ದು ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಅವರ ವಿದ್ಯಾಭ್ಯಾಸಕ್ಕೆ ಮಂಜೂರು ಮಾಡಿದ ಧನಸಹಾಯದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.

      ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿರಿದ್ದರು.



Related posts

ಬಜೆ ಮೊಗವೀರ ಸುವರ್ಣ ಆದಿ ಮೂಲಸ್ಥಾನ, ಮುಂಬಾಯಿ ಶಾಖೆಯ 100ನೇ ಮಹಾಸಭೆ

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk

ಮೆಹ್ತಾ ಡಿಗ್ರಿ ಕಾಲೇಜ್ ಐರೋಲಿಯಲ್ಲಿ ಪದವಿ ಪ್ರಧಾನ ಸಮಾರಂಭ:

Mumbai News Desk

ಮೋದಿ-ಪುಟಿನ್ ಭೇಟಿ: ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ಎಂಆರ್‌ಜಿ ಗ್ರೂಪ್‌ ಸಂಸ್ಥಾಪಕ ಡಾ. ಕೆ. ಪ್ರಕಾಶ್ ಶೆಟ್ಟಿ ಅವರಿಂದ ಹೊಸ ಪ್ರೈವೇಟ್ ಜೆಟ್ ಖರೀದಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಶೇಷ ಪೂಜೆ

Mumbai News Desk