ಮುಂಬಯಿ, ಜ. 27:ಬಿಲ್ಲವರ ಅಸೋಸಿಯೇಷನ್ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮವು ಜ. 30ರಂದು ಗುರುವಾರ ಸಂಸ್ಥೆಯ ಕಚೇರಿಯಲ್ಲಿ ( G-8, Shree Mahadev Nagar CHSL, Nr. Sai Darbar Temple, Behind Sheetal Shop Centre, B.P.Road Bhayander east) ನಡೆಯಲಿದೆ.
ಅಂದು ಸಾಯಂಕಾಲ ಗಂಟೆ 5ರಿಂದ ಸ್ಥಳೀಯ ಕಚೇರಿಯ ಸದಸ್ಯರಿಂದ ಮತ್ತು ಮೀರಾರೋಡು ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ ಮಹಿಳಾ ವಿಭಾಗದ ಸದಸ್ಯರಿಂದ ಭಜನೆ ಹಾಗೂ ಹಳದಿಕುಂಕುಮ ಕಾರ್ಯಕ್ರಮ ನಡೆಯಲಿದೆ.
ತದನಂತರ ಗುರುಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಗುರುಭಕ್ತರಾದ ತಾವೆಲ್ಲರೂ ಉಪಸ್ಥಿತರಿದ್ದು ಸಹಕರಿಸಬೇಕಾಗಿ ಭಾಯಂದರ್ ಸ್ಥಳೀಯ ಕಚೇರಿಯ ಕಾರ್ಯಾದ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ

previous post