
ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಜನವರಿ 26 ರಂದು ಮಂದಿರದ ಸಭಾಗೃಹದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪ್ರಾರಂಭದಲ್ಲಿ ಅರ್ಚಕರಾದ ಶ್ರೀ ಚಂದ್ರಶೇಖರ ಸಾಲಿಯಾನ್ ಅವರು ಶ್ರೀ ಮಹಾವಿಷ್ಣು ದೇವರಿಗೆ ಪೂಜೆ ಸಲ್ಲಿಸಿ, ಮಂದಿರದ ಭೂವಜಿಯವರಾದ ಅರವಿಂದ ಪದ್ಮಶಾಲಿ ಭಜನೆಗೆ ಚಾಲನೆ ನೀಡಿ, ಮಹಿಳಾ ಸದಸ್ಯೆಯರಿಂದ ಒಂದು ತಾಸಿನ ಭಜನಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ಹಾಗೂ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಾಯತ್ರಿ ಪರಿವಾರದ ದೈವಭಕ್ತೆ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿ ಅವರಿಗೆ ಪ್ರಸಾದ ನೀಡಲಾಯಿತು.ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಅರವಿಂದ ಪದ್ಮಶಾಲಿ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್, ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ ಹಾಗೂ ಗೌರವ ಪ್ರದಾನ ಕಾರ್ಯದರ್ಶಿ ಸಚಿನ್ ಪೂಜಾರಿ ಅವರ ಉಪಸ್ಥಿಯಲ್ಲಿ ಮುಖ್ಯ ಅತಿಥಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಹಿಳಾ ಸದಸ್ಯೆಯರಾದ ಶ್ರೀಮತಿ ಪ್ರಭ ಸುವರ್ಣ ಶ್ರೀಮತಿ ಸುಮಾ ಪುತ್ರನ್, ಶ್ರೀಮತಿ ಸ್ನೇಹ ಪೆವೇಕರ್ ಪ್ರಾರ್ಥನೆಯನ್ನು ಹಾಡಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್ ಅವರು ಪ್ರಾಸ್ತಾವಿಕವಾಗಿ ಮಾತಾನ್ನಾಡುತ್ತಾ ನೆರೆದ ಸರ್ವ ಮಹಿಳಾ ವೃಂದ ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಪದಾಧಿಕಾರಿಗಳನ್ನು ಆದರದಿಂದ ಸ್ವಾಗತಿಸಿದರು. ಮಹಿಳಾ ವಿಭಾಗದ ಸದಸ್ಯೆಯರಾದ ಯಮುನಾ ಪಾಲನ್, ಶಶಿಕಲಾ ಮೆಂಡನ್ , ಚಂದ್ರವತಿ ಕರ್ಕೇರ, ಸುಮೇಧಾ ಕೋಟ್ಯಾನ್ ಹಾಗೂ ಭಾರತಿ ಶ್ರೀಯಾನ್ , ಸಮೂಹ ಗಾನ ಪ್ರಸ್ತುತ ಪಡಿಸಿದರು. ಅತಿಥಿ ಪರಿಚಯವನ್ನು ಶ್ರೀಮತಿ ಶಶಿಕಲಾ ಶ್ರೀಯನ್ ನವರು ವಾಚಿಸಿದರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಧುರ ಕಂಠದ ಬಾಲೆ ಕುಮಾರಿ ಕೃಪಾ ಒಂದು ಭಜನೆಯ ಮೂಲಕ ನೆರೆದವರ ಮನ ಗೆದ್ದರು ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಅವರು ರಸ ಪ್ರಶ್ನೆಗಳೊಂದಿಗೆ ಸಭಿಕರನ್ನು ರಂಜಿಸಿದರು. ಮುಖ್ಯ ಅತಿಥಿ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿಯವರು ಮಾತನಾಡುತ್ತ ಮಹಿಳೆ ಎಂದರೆ ಯಾರು, ಮಹಿಳೆಯ ಕರ್ತವ್ಯವೇನು, ಗತ ಕಾಲದಿ ದಾಂಪತ್ಯ ಜೀವನ ಹೇಗಿತ್ತು ಇಂದು ಯಾವ ತಿರುವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ವಿವರಿಸಿದರಲ್ಲದೆ ಅತೀವ ದೈವಭಕ್ತೆ ಆಗಿರುವ ಅವರು ಗಾಯತ್ರಿ ಮಂತ್ರದ ಪಠಣದಿಂದಾಗುವ ಪ್ರಯೋಜನಗಳನ್ನು ಮನದಟ್ಟಾಗುವಂತೆ ನೀಡಿದ ವಿವರಣೆಗೆ ನೆರೆದ ಮಹಿಳಾವೃಂದ ಮಂತ್ರಮುಗ್ಧರಾದರು ಹಾಗೂ ಮಹಿಳಾ ವಿಭಾಗದ ವತಿಯಿಂದ ನಡೆದ ಅಚ್ಚು ಕಟ್ಟಾದ ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಈ ಸಂಸ್ಥೆಯಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯುವಲ್ಲಿ ಆರಾಧ್ಯ ದೇವರಾದ ಶ್ರೀ ಮಹಾವಿಷ್ಣು ಹರಸಲಿ ಎಂದು ಶುಭ ಹಾರೈಸಿದರಲ್ಲದೆ ಈ ಒಂದು ಪುಣ್ಯ ಸಂಸ್ಥೆ ನಮ್ಮ ಸಂಪ್ರದಾಯ ಆಚರಣೆಯ ಈ ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಅಹ್ವಾಣಿಸಿ ಗೌರವಿಸಿದ ಸಂಸ್ಥೆಯ ಸರ್ವ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ನಿರೂಪಕರಾಗಿ ಕಾರ್ಯದರ್ಶಿ ಸಚಿನ್ ಪೂಜಾರಿ ಅವರು ತಮ್ಮ ಮಂದಿರದಲ್ಲಿ ನಡೆಯುತ್ತಾ ಬರುತ್ತಿರುವ ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರಣೆ ನೀಡಿದರಲ್ಲದೆ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಮಂದಿರ ಉತ್ತಮ ಸಾಧನೆಯನ್ನು ಮಾಡುತ್ತಾ ಬರುತ್ತಿದೆ ಇದರ ಹಿಂದೆ ಶ್ರಮಿಸುತ್ತಿರುವ ನಮ್ಮ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್ ಮತ್ತು ಅವರ ತಂಡವನ್ನು ಅಭಿನಂದಿಸಿದರು. ಹಾಗೂ ಮಂದಿರದ ಯಶಸ್ವಿಗೆ ಶ್ರಮಿಸುತ್ತಿರುವ ಸರ್ವ ಪದಾಧಿಕಾರಿಗಳು, ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿದರು. ಅಲ್ಲದೇ ಫೆಬ್ರವರಿ 2 ನೇ ತಾರೀಕಿನಂದು ಮಂದಿರವು ಆಯೋಜಿಸಿರುವ ರಕ್ತದಾನ ಶಿಬಿರದ ಬಗ್ಗೆ ವಿವರಿಸಿದರಲ್ಲದೆ ಇದರ ಯಶಸ್ವಿಗೆ ಸರ್ವರೂ ಸಹಕರಿಸಬೇಕೆಂದು ವಿನಂತಿಸಿ ನೆರೆದ ಸರ್ವರಿಗೂ ವಂದನೆಯನ್ನು ಸಲ್ಲಿಸಿದರು ಅರವಿಂದ ಪದ್ಮಶಾಲಿ ಅವರು ಮಾತಾನ್ನಾಡುತ್ತಾ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಅವರ ನೇತೃತ್ವದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ನೆರವೇರುತ್ತಿರುವುದು ಅತೀವ ಸಂತಸದ ವಿಷಯ. ಇಂದಿನ ಈ ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು




ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಅಧ್ಯಕ್ಷರು ಹಾಗೂ ಮುಖ್ಯ ಅತಿಥಿ ಯವರಿಂದ ಆಕರ್ಷಕ ಬಹುಮಾನವನ್ನು ವಿತರಿಸಲಾಯಿತು. ಕೊನೆಗೆ ಸಚಿನ್ ಪೂಜಾರಿಯವರು ಧನ್ಯವಾದ ಸಮರ್ಪಣೆ ಗೈದರು.. ತದನಂತರ ಮಹಿಳೆಯರು ಅರಸಿನ ಕುಂಕುಮವನ್ನು ಒಬ್ಬೊರಿಗೊಬ್ಬರು ಹಚ್ಚುತ ಸಂಭ್ರಮಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.