24.2 C
Karnataka
April 3, 2025
ಮುಂಬಯಿ

ವಸಯಿ ಕರ್ನಾಟಕ ಸಂಘ 38ನೇ ವಾರ್ಷಿಕೋತ್ಸವ ಸಂಭ್ರಮ ಸಾಧಕರಿಗೆ ಸನ್ಮಾನ, ನೃತ್ಯ ವೈಭವ, ನಾಟಕ



ಯುವಜನಾಂಗ ಆಕರ್ಷಿಸಲು ಸಂಘಸಂಸ್ಥೆಗಳು ಮಾದರಿಯ ವೇದಿಕೆಯಾಗಬೇಕು: ದೇವೇಂದ್ರ ಬುನ್ನನ್

ಚಿತ್ರ, ವರದಿ : ರಮೇಶ್ ಉದ್ಯಾವರ

ವಸಯಿ, ಜ. 30: ಸಂಸ್ಥೆಯೊಂದನ್ನು ಹುಟ್ಟುಹಾಕುವುದರ ಜೊತೆಗೆ ಅದನ್ನು ಧನಾತ್ಮಕವಾಗಿ ಬೆಳೆಸುವುದು ಒಂದು ಸಾಹಸ. ಸಂಘ ಬೆಳೆದಾಗ ಸಾಮಾಜಿಕ ಪರಿಸರ ಬೆಳೆಯುತ್ತದೆ ಆವಾಗ ಸಂಘದ ಬೆಳವಣಿಗೆಯ ದೃಷ್ಟಿಕೋನ ಬದಲಿಸಿ ಹೊಸ ತಲೆಮಾರಿಗೆ ವೇದಿಕೆ ಸೃಷ್ಟಿಸುವ ರೀತಿಯಲ್ಲಿ ಕಾರ್ಯಕ್ರಮ ನೀಡಿ ಸಂಸ್ಥೆಯನ್ನು ಪರಿಸರದಲ್ಲಿ ಆಕರ್ಷಣ ಕೇಂದ್ರಬಿಂದುವನ್ನಾಗಿ ಮಾಡುವ ಉದ್ದೇಶ ಸಂಘ ಸಂಸ್ಥೆಗಳು ಹೊಂದಿರಬೇಕು . ಈ ದೂರದಷ್ಟಿ ಚಿಂತನೆಯ ಫಲವೇ ವಸಯಿ ಕರ್ನಾಟಕ ಸಂಘ ಸಂಘವೊಂದು ಸುಧೀರ್ಘ ಅವಧಿಯಲ್ಲಿ ಬೆಳೆಯುತ್ತಾ ಪರಿಸರದಲ್ಲಿ ಭಾಷೆ ಸಂಸ್ಕೃತಿಯ ಬೆಳವಣಿಗೆಗೆ ಸಹಕರಿಯಾಗಿದೆ. ಅದನ್ನು ಇನ್ನಷ್ಟು ಸದೃಢಗೊಳಿಸಿ ಪರಿಸರದ ತುಳು ಕನ್ನಡಿಗರಿಗೆ ಪ್ರಯೋಜನವಾಗುವ ಕಾಯಕ ಈ ಸಂಸ್ಥೆಯಿಂದ ಸದಾ ನಡೆತಿರಬೇಕು ಎಂದು ವಸಯಿ ಕರ್ನಾಟಕ ಸಂಘದ ಅಧ್ಯಕ್ಷರಾದ ದೇವೇಂದ್ರ ಬುನ್ನನ್ ಅಭಿಪ್ರಾಯ ಪಟ್ಟರು.


ಜ. 26ರಂದು ವಸಯಿ ಪಶ್ಚಿಮದ ದತ್ತ ನಿ ಮಾಲ್ ಅರ್ನ ಸ್ವರ್ಣ ಬ್ಯಾಂಕ್ವೆಟ್ ಸಭಾಗೃಹದಲ್ಲಿ ವಸಯಿ ಕರ್ನಾಟಕ ಸಂಘದ 38ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಲವಾರು ಹಿರಿಯ ಅಧ್ಯಕ್ಷರುಗಳ ಸಂಘಟನಾ ಚತುರತೆಯತೆ ಮೂಲಕ ಪ್ರತಿ ಅವಧಿಯಲ್ಲಿ ಸಂಘದ ಅಡಿಪಾಯ ಗಟ್ಟಿಗೊಳಿಸುವ ಮೂಲಕ ಇಂದು ವಸಯಿ ಪರಿಸರದ ಸಂಸ್ಥೆಯಾಗಿ ಮಹಾನಗರದ ಕನ್ನಡಿಗರ ಸಂಸ್ಥೆಯಲ್ಲೊಂದು ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿರುವುದು ನಮ್ಮ ಹೆಗ್ಗಳಿಕೆ ಎಂದು ಹೇಳಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸದಸ್ಯ ಬಾಂಧವರನ್ನು ಅಭಿನಂದಿಸಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬೈ ಎಸ್ಎಂ ಶೆಟ್ಟಿ ಶಿಕ್ಷಣ ಸಂಸ್ಥೆ ಪೊವಾಯಿ ಕಾರ್ಯಾಧ್ಯಕ್ಷರಾದ ರತ್ನಾಕರ ಶೆಟ್ಟಿ ಮುಡ್ಕೂರು ಮಾತೃ ಸಂಸ್ಥೆಯ ತಳದಿಯನ್ನು ಭದ್ರಗೊಳಿಸುವ ಜೊತೆಗೆ ಯಶಸ್ವಿ ಹಣಕಾ ಹಣಕಾಸು ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ವಸಯಿ ಪರಿಸರದಲ್ಲಿ ಅಲ್ಲದೆ ಮಹಾನಗರದಲ್ಲಿಯೇ ಮನೆ ಮಾತಾಗಿರುವ ಸಂಸ್ಥೆಯಾಗಿದೆ.ಬದುಕು ಮುಖ್ಯವಾಗಿರುವುದಕ್ಕಿಂತ ಬದುಕಿನ ರೀತಿ ನೀತಿಗಳಿಗೆ ಈ ಸಂಸ್ಥೆ ಮಾದರಿಯಾಗಿದೆ. ಸಂಸ್ಥೆಯ ಹುಟ್ಟು ಬೆಳವಣಿಗೆಯಲ್ಲಿ ಹಲವಾರು ಧೀಮಂತ ಅಧ್ಯಕ್ಷರುಗಳು ಅವರ ಕಾರ್ಯಕಾರಿ ಸಮಿತಿಗಳ ಸಹಕಾರ ಕಾರ್ಯೋನ್ಮುಖ ತತ್ಪುರತೆ ಸಂಸ್ಥೆ ಉತ್ತುಂಗಕ್ಕೆರಲು ಕಾಯರಣವಾಗಿದೆ ಎಂದು ಹೇಳಿ ಭವಿಷ್ಯದಲ್ಲಿ ಈ ಸಂಸ್ಥೆಯ ವತಿಯಿಂದ ಇನ್ನಷ್ಟು ಕಾರ್ಯಕ್ರಮಗಳು ಜರಗಲಿ ಎಂದು ಹಾರೈಸಿದರು.


@ ವಸಯಿ ಪರಿಸರದಲ್ಲಿತುಳು ಕನ್ನಡಿಗ,ರ ಸ್ನೇಹ ಸೌಹಾರ್ದ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಹಿರಿಯರಿಂದ ಮಕ್ಕಳವರೆಗಿನ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಬೆಳವಣಿಗೆಯಲ್ಲಿ ಈ ಸಂಸ್ಥೆ ಮಹತ್ತರ ಪಾತ್ರ ವಹಿಸಿದೆ ಭವಿಷ್ಯದಲ್ಲಿ ಸಂಸ್ಥೆ ಇನ್ನಷ್ಟು ಪ್ರಗತಿ ಸಾಧಿಸುವ ಮೂಲಕ ಪರಿಸರದ ತುಳು ಕನ್ನಡಿಗರ ಆಶಾದಾಯಕ ಸಂಸ್ಥೆಯಾಗಿ ಬೆಳೆಯಲಿ.

ಡಾ. ಸಾಗರ್ ಶೆಟ್ಟಿ ಒರಾಕಲ್ ಇಮೇಜಿಂಗ್ ಅಂಡ್ ಡಯಾಗ್ನೋಸ್ಟಿಕ್ ಸೆಂಟರ್, ವಸಯಿ.

@ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ ಆದರೆ ಅದನ್ನು ಸದೃಢಗೊಳಿಸುವುದು ಕಷ್ಟಕರ ಸಂಸ್ಥೆಯನ್ನು ಸಕಾರಾತ್ಮಕವಾಗಿ ಧನಾತ್ಮಕವಾಗಿ ಬೆಳೆಸಿದ ಕೀರ್ತಿ ಇದರ ಹಿರಿಯ ಪದಾಧಿಕಾರಿಗಳ ಸಲ್ಲುತ್ತದೆ ಪರಿಸರದ ತುಳು ಕನ್ನಡಿಗರು ಸ್ಥಳೀಯ ಈ ಸಂಸ್ಥೆಗೆ ಸದಾ ಸಹಕಾರ ನೀಡುತ್ತಾ ಅದನ್ನು ಅಭ್ಯುದಯಗೊಳಿಸುವ ಕಾಯಕದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ಸಂಸ್ಥೆ ಬೆಳೆದಾಗ ಪರಿಸರ ಭಾಷೆ ಸಂಸ್ಕೃತಿ ಬೆಳವಣಿಗೆಯಾಗಲು ಸಾಧ್ಯ.

#ಸರಿತಾ ನಾಯಕ್ ಗೌರವ ಪ್ರಧಾನ ಕಾರ್ಯದರ್ಶಿ ಗೊರೆಗಾಂವ್ ಕರ್ನಾಟಕ ಸಂಘ

ವಿನೀತ್ ಕೆಮಿಕಲ್ಸ್ ವೇದಿಕೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸದಸ್ಯರಾದ ಯಶೋದಾ ವಿ ಬಂಗೇರ ಪಲ್ಲವಿ ಪುತ್ರನ್ ಸಂಧ್ಯಾ ಶೆಟ್ಟಿ ಪ್ರಾರ್ಥನೆಗೈದರು. ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ ಅತಿಥಿಗಳನ್ನು ತುಳು ಕನ್ನಡಿಗರನ್ನು ಸ್ವಾಗತಿಸಿದ ಬಳಿಕ ಸಂಘದ ವತಿಯಿಂದ ಅತಿಥಿಗಳನ್ನು ಶಾಲು ಫಲಪುಷ್ಪ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಹಿರಿಯ ಸದಸ್ಯರಾಗಿ ಸಮಾಜ ಸೇವೆಯಲ್ಲಿ ಸಾಧಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘದ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ರಾಮ್ ಪ್ರಸಾದ್ ಸಿ ಶೆಟ್ಟಿ ದಂಪತಿ ಹಾಗೂ ಶ್ರೀಮತಿ ಸುಮತಿ ಓ. ಪೂಜಾರಿ ದಂಪತಿ ಅವರನ್ನು ಶಾಲು ಸನ್ಮಾನ ಪತ್ರ ಪಲಪುಷ್ಪ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಪರಿಸರದ ಸಂಗೀತ ವಿದುಷಿ ಮಮತಾ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಸಂಘದ ಜೊತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್ ಮತ್ತು ಸುರೇಖಾ ಶೆಟ್ಟಿ ಅತಿಥಿ ಗಣ್ಯರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ರಂಗನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ನಾಟಕಕಾರ ವಿ ಎನ್ ಕುಲಾಲ್ ಬೆಳಕು ಸಂಯೋಜಕರಾದ ಶೈಲೇಶ್ ಶೆಟ್ಟಿ ಕೂಡ ಇವರನ್ನು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಗಣ್ಯರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಸದಸ್ಯರಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಿತು. ಬಳಿಕ ಮಹಿಳಾ ವಿಭಾಗದ ಸದಸ್ಯರಿಂದ ವಿಎನ್ ಕುಲಾಲ್ ಬರೆದು ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶಿಸಿದ ಮದೆಟ್ಟು ಉಲ್ಲೆ ಮಾಧವೆ…‌ ತುಳು ಸಂಸಾರಿಕ ಹಾಸ್ಯಮಯ ತುಳು ನಾಟಕ ಯಶಸ್ವಿಯಾಗಿ ಜರುಗಿತು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ಕರ್ನೂರು ಶಂಕರ ಆಳ್ವ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ ಜೊತೆ ಕೋಶಾಧಿಕಾರಿ ಹರಿಪ್ರಸಾದ್ ಶೆಟ್ಟಿ ಸಲಹಾ ಸಮಿತಿಯ ಕಾರ್ಯಧ್ಯಕ್ಷರುಗಳಾದ ಪಾಂಡು ಎಲ್ ಶೆಟ್ಟಿ ಓ ಪಿ ಪೂಜಾರಿ ಕರ್ನಾಟಕ co-op ಕ್ರೆಡಿಟ್ ಸೊಸೈಟಿ ಯ ಕಾರ್ಯಾಧ್ಯಕ್ಷ ಭಾಸ್ಕರ್ ಶೆಟ್ಟಿ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಯಶೋಧರ ಕೋಟ್ಯಾನ್ ಸದಸ್ಯತ್ವ ನೊಂದಣಿ ಕಾರ್ಯಾಧ್ಯಕ್ಷ ವಿಠ್ಠಲ್ ರೈ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ವಿ ರೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಎನ್ ಅಮೀನ್ ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಮಹಿಳಾ ವಿಭಾಗದ ಕಾರ್ಯದರ್ಶಿ ಶಕುಂತಲಾ ಎಸ್ ಪೂಜಾರಿ ಕೋಶಾಧಿಕಾರಿ ಭಾರತಿ ಎಚ್ ಶೆಟ್ಟಿ ಯುವ ವಿಭಾಗದ ಕಾರ್ಯದರ್ಶಿ ರಿತೀನ್ ಶೆಟ್ಟಿ ಕೋಶಾಧಿಕಾರಿ ಶಾರಣ್ಯ ಪೂಜಾರಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ರಂಗನಟ ಸಚಿನ್ ಪೂಜಾರಿ ಭಿವಂಡಿ
ಅತಿಥಿಗಳನ್ನು ಪರಿಚಯಿಸಿ ಕಾರ್ಯ ಕ್ರಮ ನಿರೂಪಿಸಿ ಧನ್ಯವಾದವಿತ್ತರು.

Related posts

ಶ್ರೀ ಮದ್ಭಾರತ  ಮಂಡಳಿಯ ಶ್ರೀ ಲಕ್ಷ್ಮೀನಾರಾಯಣ ಮಂದಿರದ 22ನೇ ಪ್ರತಿಷ್ಟಾ ಮಹೋತ್ಸವ.

Mumbai News Desk

ಕರ್ನಾಟಕ ಸಂಘ ಡೊಂಬಿವಲಿ ಕ್ರೀಡಾ ವಿಭಾಗದ ವತಿಯಿಂದ ಕೇರಮ್ ಮತ್ತು ಚೆಸ್ ಸ್ಪರ್ಧೆ.

Mumbai News Desk

ಚಂದ್ರಶೇಖರ್ ಬಾವಂಕುಲೆ ಯವರಿಗೆ ರಥನ್ ಪೂಜಾರಿಯವರಿಂದ ಸನ್ಮಾನ.

Mumbai News Desk

ಭಾಂಡುಪ್ ಪಿಂಪಾಲೇಶ್ವರ ಮಹಾದೇವ ಮಂದಿರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ.

Mumbai News Desk

ಕರ್ನಾಟಕ ಸಂಘ ಪನ್ವೆಲ್ ಇದರ  34ನೇ ವಾರ್ಷಿಕೋತ್ಸವ.

Mumbai News Desk

ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿ ಅಂಧೇರಿ ಪಶ್ಚಿಮ – 35ನೇ ವಾರ್ಷಿಕ ಮಹಾಪೂಜೆ ಸಂಪನ್ನ, ಹಿರಿಯ ಸೇವಾ ಕರ್ತರಿಗೆ ಗೌರವ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ