ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸಮಿತಿಯ ವತಿಯಿಂದ
ಡೊಂಬಿವಲಿ – ಕಲ್ಯಾಣ್ ಪರಿಸರದ ಮೊಗವೀರ ಭಾಂಧವರಿಗಾಗಿ ಇದೇ ಬರುವ ರವಿವಾರ ತಾ : 02.02.2025 ರ ಸಂಜೆ 4.00 ಗಂಟೆಗೆ ವೈಭವ ಮಂಗಲ ಕಾರ್ಯಾಲಯ, ಒಂದನೇ ಮಾಳಿಗೆ, ಥಾಕುರ್ ವಾಡಿ, ಗಿರಿಜಾ ಮಾತಾ ಮಂದಿರದ ಹತ್ತಿರ, ಡೊಂಬಿವಲಿ ಪಶ್ಚಿಮ – 421202 ಇಲ್ಲಿ ಅರಿಶಿಣ ಕುಂಕುಮ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಚೆಂದಗಾಣಿಸಿ ಕೊಡಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ವಿಶೇಷ ಆಕರ್ಷಣೆ : ಲಕ್ಕಿ ಡ್ರಾ ಇದೆ