
ಮುಲ್ಕಿ ಜ 30. ಮುಲ್ಕಿಗೆ ಸೇರಿದ ಕರ್ನಿರೆಯ ಗ್ರಾಮದ ಕಾರಣಿಕದ ಗ್ರಾಮ ದೈವ ಧರ್ಮ ಜಾರಂದಾಯ ದೈವದ ವಾರ್ಷಿಕ ನೇಮೋತ್ಸವ ಕರ್ನೀರೆ ಕೊಪ್ಪಲದ ಗಡುಪಾಡುವಿನಲ್ಲಿ ಮುಖ್ಯ ದೈವಸ್ಥಾನದಿಂದ ಭಂಡಾರ ತಂದು ದಿನಾಂಕ 20ನೇ ಜನವರಿ 2025 ರಂದು ಗಣ್ಯರು, ಗ್ರಾಮಸ್ಥರು, ಊರ ಪರವೂರ ಮಹನೀಯರು ಮತ್ತು ದೈವ ಭಕ್ತರ ಉಪಸ್ಥಿತಿಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು.
ಜನವರಿ 20ರಂದು ರಾತ್ರಿ ಕರ್ನಿರೆ ಧರ್ಮ ಜಾರಂದಾಯ ದೈವಸ್ಥಾನದಿಂದ ಬಂಡಾರ ಇಳಿದು ಕರ್ನಿರೆ ಕೊಪ್ಪಳ ಗಡುಪಾಡುವುನಲ್ಲಿ ಶ್ರದ್ಧಾ ಭಕ್ತಿಯಿಂದ ಈ ನೇಮೋತ್ಸವ ನಡೆಯಿತು,

ನೇಮೋತ್ಸವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕರ್ನಿರೆ ಗುತ್ತು ಹರಿಶ್ಚಂದ್ರ ಶೆಟ್ಟಿ(ಗುತ್ತಿನಾರ್), ಬಿಲ್ಲವ ಚೇಂಬರ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನಿರ್ದೇಶಕ, ಮುಂಬೈಯ ಹೋಟೆಲ್ ಉದ್ಯಮಿ ಗಂಗಾಧರ ಅಮೀನ್ ಕರ್ನಿರೆ, ಅಗರಗುತ್ತು ಗಣೇಶ್ ಪೂಜಾರಿ, ಮಾಗಂದಡಿ ವಾಸುದೇವ ಶೆಟ್ಡಿ(ಪಟ್ಲೇರ್), ರಿತೇಶ್ ಪೂಜಾರಿ, ಹೋಟೆಲ್ ಉದ್ಯಮಿ ಹಾಗೂ ಗ್ರಾಮದ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿದರು,

ನೇಮೋತ್ಸವಕ್ಕೆ ಮುಂಬೈಯ ಬಿಲ್ಲವ ಚೇಂಬರ‍್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ ನ ಕಾರ್ಯಾ ಧ್ಯಕ್ಷ, ಎನ್ ಟಿ ಪೂಜಾರಿ, ಬಿಲ್ಲವರ ಎಸೋಸಿಯೇಷನ್ ಮುಂಬೈಯ ಉಪಾಧ್ಯಕ್ಷ ಪುರುಷೋತ್ತಮ್ ಎಸ್ ಕೋಟ್ಯಾನ್ ಮತ್ತಿತರು ಪಾಲ್ಗೊಂಡು ಗಂಧ ಪ್ರಸಾದವನ್ನು ಸ್ವೀಕರಿಸಿದರು.
ಸುಮಾರ 1000ಕ್ಕೂ ಮಿಕ್ಕಿ ಸೇರಿದ ದೈವ ಭಕ್ತರೀಗೆ ಕರ್ನೀರೆ ಕೊಪ್ಪಲದ ದಿ.ಸೇಸಪ್ಪ ಸುವರ್ಣ ಮತ್ತು ಅವರ ಧರ್ಮಪತ್ನಿ ಭಗಿರಥಿಯವರ ಸ್ಮರಣಾರ್ಥ ಅವರ ಮಕ್ಕಳು ಮೊಮ್ಮಕ್ಕಳು ಅನ್ನದಾನದ ಸೇವೆ ನೀಡಿದರೆ, ಕರ್ನೀರೆ ಕೊಪ್ಪಲದ ಯುವಕರೆಲ್ಲರು ಸೇರಿ ಮುಖ್ಯ ದೈವಸ್ಥಾನದಿಂದ ಗಡುಪಾಡಿನವರೆಗಿನ ವಿದ್ಯುತ್ ಮತ್ತು ಹೂವಿನ ಅಲಂಕಾರದ ಜವಾಭ್ಧಾರಿಯನ್ನು ವಹಿಸಿದ್ದರು.