ಮುಂಬೈಯ ಹಿರಿಯ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿ ಕೋಟೆ, ಇದರ 81ನೇ ವಾರ್ಷಿಕ ಶನಿ ಮಹಾಪೂಜೆ ಹಾಗೂ ಜಾತ್ರಾ ಮಹೋತ್ಸವವು, ಫೆಬ್ರವರಿ 1ರಿಂದ ಮೊದಲ್ಗೊಂಡು ಫೆಬ್ರವರಿ 3ರ ತನಕ ವಿವಿಧ ಪೂಜಾ ವಿಧಿಗಳೊಂದಿಗೆ, ನಾಲಾಸೋಪಾರ ಪಶ್ಚಿಮ ಶ್ರೀಪ್ರಸ್ಥದ ಶ್ರೀ ಶನಿ ಮಂದಿರದಲ್ಲಿ, ಬ್ರಹ್ಮಶ್ರೀ ಕೊಯ್ಯುರು ನಂದ ಕುಮಾರ್ ತಂತ್ರಿಯವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಕಾರ್ಯಕ್ರಮದ ವಿವರ :
ತಾ. 01.02.25 ಶನಿವಾರ – ಬೆಳಿಗ್ಗೆ 7:00ಗಂಟೆಗೆ ದೇವತಾ ಪ್ರಾರ್ಥನಾ, ತೋರಣ ಪ್ರತಿಷ್ಠೆ, ನವಕ ಪ್ರಧಾನ (ಅಭಿಷೇಕ ), ಗಣಪತಿ ಹೋಮ 9 ಗಂಟೆಗೆ ಧ್ವಜಾರೋಹಣ, 10 ಗಂಟೆಗೆ ಶನೀಶ್ವರ ಮಂತ್ರ ಹೋಮ( ನವಗ್ರಹ ಹೋಮ ), 10:30ಕ್ಕೆ ಶ್ರೀ ಶನಿಮಹಾತ್ಮ ಗ್ರಂಥ ಪಾರಾಯಣ ( ಶ್ರೀ ಶನಿಮಹಾತ್ಮ ಪೂಜಾ ಸಮಿತಿ ಕೋಟೆ ಮುಂಬೈ ಇವರಿಂದ )
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಬಳಿಕ ತೀರ್ಥ ಪ್ರಸಾದ ವಿತರಣೆ
ಸಂಜೆ 6:00ಗಂಟೆಗೆ ಉತ್ಸವ, ಮಹಾ ರಂಗ ಪೂಜೆ, ನಿತ್ಯ ಬಲಿ ಬಳಿಕ ತೀರ್ಥ ಪ್ರಸಾದ ವಿತರಣೆ
ತಾ. 02.02.25, ಆದಿತ್ಯವಾರ – ಬೆಳಿಗ್ಗೆ 6 ಗಂಟೆಗೆ ದೀಪ ಬಳಿಕ 9:30ಕ್ಕೆ ನಾಗದೇವ ಅಶ್ಲೇಷ ಬಲಿ ಪೂಜೆ, 10:30 ಕ್ಕೆ ದುರ್ಗಾ ಹೋಮ, ಬಳಿಕ ಮಹಾಪೂಜೆ, ತೀರ್ಥ ಪ್ರಸಾದ
ಸಂಜೆ 6 ಗಂಟೆಗೆ ಉತ್ಸವ, ರಾತ್ರಿ ಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ಬಳಿಕ ತೀರ್ಥ ಪ್ರಸಾದ, ಕವಟ ಬಂಧನ
ತಾ. 03.03.25, ಸೋಮವಾರ – ಬೆಳಿಗ್ಗೆ 7:00ಗಂಟೆಗೆ ಕವಟ ಉದ್ಘಾಟನಾ, ಮಹಾಪೂಜೆ, ಚೂರ್ಣೋತ್ಸವ ಬಳಿಕ ತೀರ್ಥ ಪ್ರಸಾದ
ಸಂಜೆ 6 ಗಂಟೆಗೆ ಅವಬ್ರತೋತ್ಸವ, ದೇವರ ದರ್ಶನ, ಧ್ವಜಾವರೋಹಣ, ರಾತ್ರಿ ಪೂಜೆ ತೀರ್ಥ ಪ್ರಸಾದ
ತಾ. 04.02.25 ಮಂಗಳವಾರ – ಬೆಳಿಗ್ಗೆ 6:30ಕ್ಕೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ
ತಾ. 1ರಿಂದ, ತಾ 3ರ ತನಕ ಪ್ರತಿದಿನ ಅನ್ನದಾನ ( ಮಧ್ಯಾಹ್ನ 1.30ರಿಂದ 3.30 ಹಾಗೂ ರಾತ್ರಿ 8ರಿಂದ 10 ಗಂಟೆ ತನಕ )
81ನೇ ವಾರ್ಷಿಕ ಶ್ರೀ ಶನಿ ಮಹಾಪೂಜೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಶನಿ ದೇವರ ತೀರ್ಥಪ್ರಸಾದ ಸ್ವೀಕರಿಸಿ, ಶ್ರೀ ಶನಿ ದೇವರ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಟ್ರಸ್ಟಿಗಳು, ಆಡಳಿತ ಸಮಿತಿ, ಪೂಜಾ ಸಮಿತಿ ಮಹಿಳಾ ವಿಭಾಗ, ಸದಸ್ಯರು ಮತ್ತು ಹಿತೈಷಿಗಳು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ : 9322390999 ಸಂಪರ್ಕಿಸಬಹುದು.

previous post