
ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಘವು 1939 ರಿಂದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತ ಲಿದದ್ಧು ವಡಾಲದ ಪರಿಸರದಲ್ಲಿಯ ವಿದ್ಯಾರ್ಥಿಗಳಿಗೆ CBSE ಯಲ್ಲಿ ಶಿಕ್ಷಣವನ್ನು ದೊರಕಿಸುವ ನಿಟ್ಟಿನಲ್ಲಿ 2022- 23ರ ಶೈಕ್ಷಣಿಕ ಸಾಲಿನಲ್ಲಿ ಅಭಿನವ ಪಬ್ಲಿಕ್ ಸ್ಕೂಲ್ ಅನ್ನು ಪ್ರಾರಂಭಿಸುವ ಮೂಲಕ ತನ್ನ ಕೀರ್ತಿಯ ಮುಕುಟಕ್ಕೆ CBSE ಸ್ಕೂಲ್ ನ ಗರಿಯನ್ನು ಸೇರಿಸಿಕೊಂಡಿತು.

ಅಭಿನವ್ ಪಬ್ಲಿಕ್ ಸ್ಕೂಲ್ ನ ವಾರ್ಷಿಕ ಕ್ರೀಡಾಕೂಟವು ಇತ್ತೀಚಿಗೆ ಶಾಲಾ ಮೈದಾನದಲ್ಲಿ ಜರುಗಿತು. ಕ್ರೀಡಾ ಜ್ಯೋತಿಯನ್ನು ತಂದ ವಿದ್ಯಾರ್ಥಿಗಳು ಪ್ರಮಾಣ ವಚನವನ್ನು ಸ್ವೀಕರಿಸಿ ಕ್ರೀಡಾಕೂಟಕ್ಕೆ ವಿದ್ಯುಕ್ತವಾದ ಚಾಲನೆಯನ್ನು ಇತ್ತರು. ವಿದ್ಯಾರ್ಥಿಗಳಿಂದ ಆಕರ್ಷಕವಾದ ಕವಾಯತು ಪ್ರದರ್ಶಿಸಲ್ಪಟ್ಟಿತು.

N.K.E ಸೊಸೈಟಿಯ ಕಾರ್ಯದರ್ಶಿಗಳಾದ ಶ್ರೀಯುತ ಶಶಿಕಾಂತ ಜೋಶಿಯವರು ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸದೃಢ ಹಾಗೂ ಆರೋಗ್ಯವಂತರಾಗಿ ಎಂದು ಹಾರೈಸಿದುದಲ್ಲದೆ ಮಕ್ಕಳಿಗೆ ಆರೋಗ್ಯಕರ ಹಾಗೂ ಪೌಷ್ಟಿಕವಾದ ಆಹಾರವನ್ನು ನೀಡುವಂತೆ ಪಾಲಕರಿಗೆ ಕರೆಯುತ್ತರು.
ವಿಶಿಷ್ಟ ಹಾಗೂ ವಿನೂತನವಾದ ಆಟಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಅಧ್ಯಕ್ಷರಾದ ಪಾರ್ಥಸಾರಥಿ ನಾಯ್ಕ , ಕಾರ್ಯದರ್ಶಿಗಳಾದ ಶ್ರೀಮತಿ ಪದ್ಮಜಾ ಬನವಾಸಿ ಹಾಗೂ ಕೋಶಾಧಿಕಾರಿಗಳಾದ ಭವಾನಿ ಭಾರ್ಗವ್ ಅವರು ಬಹುಮಾನಗಳನ್ನು ವಿತರಿಸಿದರು.
ಸಭಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಅಭಿನವ ಪಬ್ಲಿಕ್ ಸ್ಕೂಲ್ ನ ಆಡಳಿತಾಧಿಕಾರಿ ಶ್ರೀಮತಿ ರೇನೀಸ್ ಆಗಮಿಸಿದ ಅಬ್ಯಾಗತರನ್ನು ಸ್ವಾಗತಿಸಿ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಸಂಸ್ಥೆಯ ವಿಶ್ವಸ್ಥರಾದ ಶ್ರೀಯುತ ಅನಂತ ಬನವಾಸಿ ಅವರ ಉಪಸ್ಥಿತಿಯು ಕ್ರೀಡಾಕೂಟಕ್ಕೆ ವಿಶೇಷ ಮೆರಗನ್ನು ತಂದಿತು .ಎಲ್ಲರ ಕೂಡುವಿಕೆಯಿಂದ ಕಾರ್ಯಕ್ರಮವು ಅದ್ದೂರಿಯಾಗಿ ಹಾಗೂ ವಿಜೃಂಭಣೆಯಿಂದ ಜರುಗಲು ಕಾರಣವಾಯಿತು.