
ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಕಾರ್ಯ ಪ್ರಶಂಸನೀಯ- ಪ್ರವೀಣ್ ಭೋಜ್ ಶೆಟ್ಟಿ.
ಡೊಂಬಿವಲಿ ಫೆ1: ಸಾಮಾಜ ಸೇವೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ನಿರ್ಮಿಸಿಕೊಳ್ಳುವದರ ಜೊತೆಗೆ ಸಮಾಜ ಬಾಂಧವರ ಮನೆ, ಮನೆಗೆ ಹಾಗೂ ಮನದಾಳದ ವರೆಗೂ ತಲುಪಿದ ಮುಂಬಯಿ ಬಂಟರ ಸಂಘದ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯ ಅಭಿನಂದನೀಯ ಹಾಗೂ ಅನುಕರಣನೀಯ ವಾಗಿದೆ ಎಂದು ಬಂಟರ ಸಂಘ ಮುಂಬಯಿ ಯ ಅಧ್ಯಕ್ಷ ಪ್ರವೀಣ್ ಭೋಜ್ ಶೆಟ್ಟಿ ಹೇಳಿದ್ದಾರೆ. ಅವರು ಜನವರಿ 31 ರಂದು ಸಂಜೆ ಬಂಟರ ಸಂಘ ಮುಂಬಯಿ ಯ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ವತಿಯಿಂದ ಡೊಂಬಿವಲಿ ಪೂರ್ವದ ಅಜ್ಡೆಪಾಡಾ ಪರಿಸರದ ಶ್ರೀ ಅಯ್ಯಪ್ಪ ಮಂದಿರದ ಸುಧರ್ಮ ಸಭಾಗೃಹದಲ್ಲಿ ಆಯೋಜಿಸಿದ್ದ ಅರಷಿಣ ಕುಂಕುಮ ಹಾಗೂ ಆರೋಗ್ಯದ ಸಂಬಂಧಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇಂದಿನ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಸಭಾಗೃಹ ಮಹಿಳೆಯರಿಂದ ಕಿಕ್ಕಿರಿದು ತುಂಬಿದ್ದು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಸುಕುಮಾರ ಶೆಟ್ಟಿ ಹಾಗೂ ಅವರ ಕಾರ್ಯಾಕಾರಿ ಸಮಿತಿ ಸದಸ್ಯೆಯರ ಒಗ್ಗಟ್ಟಿನ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ. ಸಂಘದ ಇತರ ಎಲ್ಲಾ ಪ್ರಾದೇಶಿಕ ಸಮಿತಗಳು ಡೊಂಬಿವಲಿ ಪ್ರಾದೇಶಿಕ ಸಮೀತಿಯ ಕಾರ್ಯ ವೈಖರಿಯನ್ನು ಅನುಸರಿಸಿದರೆ ಬಂಟರ ಸಂಘ ವಿಶ್ವದ ಗಮನವನ್ನು ಸೆಳೆಯುವದು ನಿಶ್ಚಿತ ಎಂದು ಹೇಳಿದ ಪ್ರವೀಣ್ ಭೋಜ್ ಶೆಟ್ಟಿ ಅವರು ಇತ್ತೀಚೆಗೆ ನಡೆದ ವಾರ್ಷಿಕ ಕ್ರೀಡಾಕೂಟದ ಪಥ ಸಂಚಲನದಲ್ಲಿ ದ್ವಿತೀಯ ಸ್ಥಾನ ಹಾಗೂ ಈ ವರ್ಷದ ಅತ್ಯುತ್ತಮ ಸೇವಾ ವಲಯ ಎಂಬ ಬಿರುದನ್ನು ಮುಡಿಗೇರಿಸಿ ಕೊಂಡಿದ್ದು, ಕಾರ್ಯಾಧ್ಯಕ್ಷ ಆನಂದ ಡಿ ಶೆಟ್ಟಿ ಎಕ್ಕಾರು ಹಾಗೂ ಸಮಸ್ತ ಕಾರ್ಯಕಾರಿ ಮಂಡಳಿಯ ಸದಸ್ಯರು ಪರಿಶ್ರಮ ಹಾಗೂ ಸಮಸ್ತ ಬಂಟ ಬಾಂಧವರ ಸಹಾಯ ಸಹಕಾರದ ಶ್ರೀರಕ್ಷೆ ಯೇ ಕಾರಣ ಎಂದರೆ ತಪ್ಪಾಗಲಾರದು,ಸನಾತನ ಧರ್ಮ ಹಾಗೂ ನಮ್ಮ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅರಷಿಣ ಕುಂಕುಮ ಹಾಗೂ ಉತ್ತಮ ಆರೋಗ್ಯವಂತರಾಗಿ ಸಮಾಜ ಬಾಂಧವರನ್ನು ಜಾಗೃತಗೊಳಿಸುವ ಡಾ.ರಶ್ಮಾಎಂ. ಶೆಟ್ಟಿ ವಿಚಾರ ಸಂಕಿರಣ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಸಂಪೂರ್ಣ ತುಳು ಮಯವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಅತೀವ ಸಂತಸ ತಂದಿದೆ ನಿಮ್ಮ ಸಮಾಜ ಸೇವೆ ನಿರಂತರವಾಗಿ ನಡೆದು ಇತರರಿಗೆ ಮಾದರಿಯಾಗಲಿ ಎಂದರು.

ಅತಿಥಿ ಬಂಟರ ಸಂಘ ಮುಂಬಯಿ ಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಚಿತ್ರಾ ಶೆಟ್ಟಿ ಅವರು ಮಾತನಾಡಿ – ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಅರಷಿಣ ಕುಂಕುಮದ ಸ್ಥಾನ ಅನನ್ಯವಾಗಿದ್ದು, ಕುಂಕುಮವು ನಿರಂತರವಾಗಿ ದೈವಿ ಶಕ್ತಿ ಹಾಗೂ ದೈವಿ ಮನೋಭಾವವನ್ನು ಹೊರಸೂಸುವ ಗುಣದಿಂದ ಅಧ್ಯಾತ್ಮಿಕ ಮಹತ್ವವನ್ನು ಹೊಂದಿದ್ದು ಮಹಿಳೆಯರ ಸೌಭಾಗ್ಯದ ಪ್ರತೀಕವಾಗಿದೆ ಇಂತಹ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಆಯೋಜಿಸಿದ್ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ ಹಾಗೂ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ ಶ್ರೀಮತಿ ಚಿತ್ರಾ ಆರ್ ಶೆಟ್ಟಿ ಅವರು ಬಂಟರ ಸಂಘದ ಮಹಿಳಾ ವಿಭಾಗವೂ ವಜ್ರಮಹೋತ್ಸವದ ಸಂಭ್ರಮದಲ್ಲಿದ್ದು, ಫೆಬ್ರವರಿ 8ರಂದು ನಡೆಯಲಿರುವ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಬೇಕೆಂದು ಕರೆ ನೀಡಿದರು.

ಇನ್ನೂರ್ವ ಅತಿಥಿ ಡಾ. ರಷ್ಮಾ ಶೆಟ್ಟಿ ಅವರು ಮಾತನಾಡಿ- ನಮ್ಮ ಸನಾತನ ಭಾರತೀಯ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾದ ಇಂದಿನ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ನನ್ನನ್ನು ಆವ್ಹಾನಿಸಿ ಗೌರವಿಸಿದ್ದಕ್ಕೆ ಹೃದಯಾಂತರಾಳದ ಕೃತಜ್ಞತೆಗಳು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದ ಡಾ.ರಷ್ಮಾ ಶೆಟ್ಟಿ ಬಂಟರ ಸಂಘದ ಸಮಾಜಿಕ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.
ಬಂಟರ ಸಂಘ ಮುಂಬಯಿ ಪೂರ್ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಸುಕುಮಾರ ಎನ್ ಶೆಟ್ಟಿ ಅವರು ಮಾತನಾಡಿ- ನಮ್ಮ ಸನಾತನ ಭಾರತೀಯ ಧರ್ಮ ಹಾಗೂ ಸಂಸ್ಕೃತಿಯ ಪ್ರತೀಕವಾದ ಅರಷಿಣ ಕುಂಕುಮ ಕಾರ್ಯಕ್ರಮ ಈ ವೇದಿಕೆಯಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಆಯೋಜಿಸಲಾಗಿದ್ದು ಡಾ ರಷ್ಮಾ ಶೆಟ್ಟಿ ಅವರು ನಮ್ಮೆಲ್ಲರ ಉತ್ತಮ ಆರೋಗ್ಯಕ್ಕಾಗಿ ನೀಡಿದ ಸಲಹೆ ಸೂಚನೆಗಳು ನೀಜವಾಗಿಯೂ ಅನುಕರಣನೀಯವಾಗಿದೆ ಈ ಸಲಹೆ ಸೂಚನೆಗಳನ್ನು ನಮ್ಮೆಲ್ಲರ ಜೀವನದಲ್ಲಿ ನಾವು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ ಎಂದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡೊಂಬಿವಲಿ ಪ್ರಾದೇಶಿಕ ಸಮಿತಯ ಕಾರ್ಯಾಧ್ಯಕ್ಷ ಆನಂದ ಡಿ ಶೆಟ್ಟಿ ಎಕ್ಕಾರು – ಸಂಘದ ಕಾರ್ಯಾಧ್ಯಕ್ಷನಾಗಿ ಕಳೆದ ಎರಡು ವರ್ಷಗಳ ಸಾಧನೆ ಪ್ರಶಂಸನೀಯವಾಗಿದ್ದು , ವಾರ್ಷಿಕ ಕ್ರೀಡೋತ್ಸವದಲ್ಲಿಯ ಅಪ್ರತಿಮ ಸಾಧನೆಯ ಜೊತೆಗೆ ಅತ್ಯುತ್ತಮ ವಲಯ ಎಂಬ ಬಿರುದನ್ನು ಪಡೆದದ್ದು ಸಮಸ್ತ ಕಾರ್ಯಕಾರಿ ಮಂಡಳಿ ವಿಶೇಷವಾಗಿ ಮಹಿಳಾ ವಿಭಾಗ ಹಾಗೂ ಯುವ ವಿಭಾಗಕ್ಕೆ ಹೃದಯಾಂತರಾಳದ ಕೃತಜ್ಞತೆಗಳು ನಿಮ್ಮೆಲ್ಲರ ಸಹಕಾರ ಸದಾ ಇದೇ ರೀತಿಯಲ್ಲಿ ಇರಲಿ ಎಂದರು.

ಸ್ವಾಗತ ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ – ಸಂಘದ ಮಹಿಳಾ ವಿಭಾಗದ ಕಾರ್ಯಾಚಟುವಟಿಗೆಗಳಲ್ಲಿ ಮಹಿಳೆಯರ ಸಹಕಾರ ಅನನ್ಯವಾಗಿದ್ದು ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಭಾಗವಹಿಸುತ್ತಿರುವದು ವಿಶೇಷವಾಗಿದ್ದು ಇಂದಿನ ವೈಶಿಷ್ಟ್ಯಪೂರ್ಣ ಅರಷಿಣ ಕುಂಕುಮ ಕಾರ್ಯಕ್ರಮದ ಜೊತೆಗೆ ಡಾ.ರಷ್ಮಾ ಶೆಟ್ಟಿ ಅವರ ವೈದ್ಯಕೀಯ ವಿಚಾರ ಸಂಕಿರಣ ಅಪ್ರತಿಮವಾಗಿದ್ದು , ಅವರು ನೀಡಿದ ಸಲಹೆ ಸೂಚನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯಭಾಗ್ಯವನ್ನು ಕಾಪಾಡಿ ಕೊಳ್ಳೋಣಾ ಎಂದರು
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲಿನ ಗಣ್ಯರನ್ನು ಶಾಲು ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ಹಾಗೂ ಸಮಾರಂಭಕ್ಕೆ ಆಗಮಿಸಿದ್ದ ಸಮಾಜದ ಹಿರಿಯರನ್ನು ಪುಷ್ಪಗುಚ್ಛ ನೀಡಿ ಗಣ್ಯರು ಗೌರವಿಸಲಾಯಿತು.
ಸಮಾರಂಭದಲ್ಲಿ ಉಪಸ್ತಿತರಿದ್ದ ನೂರಾರು ಮಹಿಳೆಯರು ಪರಸ್ಪರ ಅರಷಿಣ ಕುಂಕುಮ ಹಚ್ಚಿಕೊಂಡು ಶುಭಕೋರಿದರು.
ಸುನಂದಾ ಶೆಟ್ಟಿ ಹಾಗೂ ಆರತಿ ರೈ ಅವರ ಪ್ರಾರ್ಥನೆ ಜೋತೆಗೆ ಗಣ್ಯರು ಜ್ಯೋತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯ ಮೇಲೆ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ್ ಡಿ ಶೆಟ್ಟಿ ಎಕ್ಕಾರು, ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಎನ್ ಶೆಟ್ಟಿ, ಡಾ.ರಷ್ಮಾ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರ ಅರ್. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯೋಗಿನಿ ಎಸ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಲತಾ ಎ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯದರ್ಶಿ ಪೊರ್ಣಿಮಾ ಎಸ್ ಶೆಟ್ಟಿ, ಮಹಿಳಾ ವಿಭಾಗದ ಕೋಶಾಧಿಕಾರಿ ಸುಧಾ ಎಚ್ ಶೆಟ್ಟಿ, ಜತೆ ಕಾರ್ಯದರ್ಶಿ ಶಿಲ್ಪಾ ಎಸ್ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರತಿಭಾ ವೈ ಶೆಟ್ಟಿ ಮೊದಲಾದವರು ಉಪಸ್ತಿತರಿದ್ದರು.
ಶಿಲ್ಪಾ ಶೆಟ್ಟಿ ಹಾಗೂ ವಿಕ್ಷೀತ ವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರೆ ಪೊರ್ಣಿಮಾ ಸುರೇಶ್ ಶೆಟ್ಟಿ ವಂದಿಸಿದರು.
ಕು.ಆತ್ಮಿ ಪೂಂಜಾ ಇವರ ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೇಳೆದವು.
ಸಂಘದ ಸಮಾಜ ಕಲ್ಯಾಣ ಸಮಿತಿಯ ಕಾರಗಯಾಧ್ಯಕ್ಷರಾದ ಡಾ.ಇಂದ್ರಾಳಿ ದಿವಾಕರ ಶೆಟ್ಟಿ ಇಂದ್ರಾಳಿ, ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ ಶೆಟ್ಟಿ, ಸಂಚಾಲಕ ಕರುಣಾಕರ ಶೆಟ್ಟಿ ಕಲ್ಲಡ್ಕ, ಉಪ ಕಾರ್ಯಾಧ್ಯಕ್ಷ ಪ್ರಭಾಕರ್ ಆರ್ ಶೆಟ್ಟಿ, ಮಾಜಿ ಕಾರ್ಯಾಧ್ಯಕ್ಷ ರಾಜೀವ ಭಂಡಾರಿ, ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ವೈ ಶೆಟ್ಟಿ, ಕಾರ್ಯದರ್ಶಿ ಹೆಮಂತ್ ಶೆಟ್ಟಿ, ಕೋಶಾಧಿಕಾರಿ ಸಚಿನ್ ಕೆ ಶೆಟ್ಟಿ, ಜತೆ ಕಾರ್ಯದರ್ಶಿ ಜಯಂತ ಜೆ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಭಾಕರ್ ವ್ಹಿ ಶೆಟ್ಟಿ ಕಲ್ಲಡ್ಕ, ಯುವ ವಿಭಾಗದ ಕಾರ್ಯಾದ್ಯಕ್ಷ ಪ್ರಜ್ವಲ್ ಬಿ. ಶೆಟ್ಟಿ. ಮತ್ತಿತರರು ಉಪಸ್ಥಿತರಿದ್ದರು