ಮಂಗಳೂರು ಪೆ 7. ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 11 ರಿಂದ 15 ರವರೆಗೆ ವಿಜೃಂಭಣೆಯಿಂದ ನಡೆಯುವ ಕುಂಭ ಮಹೋತ್ಸವದ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಹೊರೆಕಾಣಿಕೆ, ಉಗ್ರಾಣ ಕೇಂದ್ರವನ್ನು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಿರಿಯ ಉದ್ಯಮಿಯಾದ ಶ್ರೀಯುತ ಎಂ.ಎಸ್.ರಾವ್ ರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ಜನಾರ್ಧನ್ ಭಟ್, ಆಡಳಿತ ಮೊಕೇಸರರಾದ ಕೆ ಸುಂದರ್ ಕುಲಾಲ್ ಶಕ್ತಿನಗರ, ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ಕೋಡಿಕಲ್, ಕ್ಷೇತ್ರದ ಟ್ರಸ್ಟಿಗಳಾದ ಗಿರಿಧರ್ ಜೆ ಮೂಲ್ಯ, ರಾಜೇಶ್ ಶಕ್ತಿನಗರ ಹಾಗೂ ನಾಗೇಶ್ ಕದ್ರಿ, ಲೋಕನಾಥ್ ಎಲ್ಲೂರು, ನಾಗೇಶ್ ಕುಲಾಲ್ ಶಕ್ತಿನಗರ, ಶ್ರೀ ಕೃಷ್ಣ, ಭಾರತಿ ಕದ್ರಿ, ವಿಶ್ವನಾಥ ವಾಮಂಜೂರು, ಗೋಪಾಲ ಬಂಗೇರ, ರಾಜೇಂದ್ರ ಕುಮಾರ್ ಅಳಪೆ, ಶ್ರೀ ಜನಾರ್ಧನ್ ಸಾಲಿಯಾನ್, ರಾಜೇಶ್ ಸಾಲಿಯಾನ್, ವಿಶ್ವನಾಥ್ ಉಪಸ್ಥಿತರಿದ್ದರು.

previous post