ಮಂಗಳೂರು:ದ.ಕ ಜಿಲ್ಲೆಯ ಕುಲಶೇಖರದಲ್ಲಿರುವ ಅತ್ಯಂತ ಪುರಾತಣ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ವೀರ ನಾರಾಯಣ ದೇವಸ್ಥಾನದಲ್ಲಿ ಪೆ 11 ರಿಂದ 15 ತನಕ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಶುಭಾಶಿರ್ವಾದಗಳೊಂದಿಗೆ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯ ವಾಮಂಜೂರು ಇವರ ಪೌರೋಹಿತ್ಯದಲ್ಲಿ ವಿಜೃಂಭಣೆಯಿಂದ ಜರುಗಲಿರುವುದು.
ಫೆ. 11 ಮಂಗಳವಾರ ಸಂಜೆ 3 ರಿಂದ ಭಜನಾ, ಕುಣಿತ ಭಜನೆಯೊಂದಿಗೆ ಸಂಜೆ ರಾಜಾಂಗಣದಲ್ಲಿರುವ ಭವ್ಯ ವೇದಿಕೆಯಲ್ಲಿ ಧಾರ್ಮಿಕ ಸಭೆಯು. ಶ್ರೀ ಕ್ಷೇತ್ರದ ಆಡಳಿತ ಮೊಕೇಸರರಾದ ಕೆ ಸುಂದರ್ ಕುಲಾಲ್ ಶಕ್ತಿನಗರ ಇವರ ಅಧ್ಯಕ್ಷತೆ ಮತ್ತು ಮಯೂರ್ ಉಳ್ಳಾಲ್(ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಅಧ್ಯಕ್ಷರು) ಇವರ ಗಣ ಉಪಸ್ಥಿತಿಯಲ್ಲಿ ಪರಮ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಶ್ರೀ ಜಗದ್ಗುರು ರಾಘವೇಂದ್ರ ಪೀಠ ಕರಿಂಜೆ ಶ್ರೀ ಕ್ಷೇತ್ರ ಕರಿಂಜೆ ಮಠ ಇವರು ಆಶೀರ್ವಾದ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಹಾಪೌರರು ಮನೋಜ್ ಕುಮಾರ್, ಲೋಕಸಭಾ ಸದಸ್ಯರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರು ದಕ್ಷಿಣ ವಿಧಾನಸಭಾ ಕ್ಷೇತ್ರ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ.. ಐವನ್ ಡಿಸೋಜಾ ಮತ್ತು ಕಿಶೋರ್ ಕುಮಾರ್, ಮ.ನ.ಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಸುನೀಲ್ ಸಾಲ್ಯಾನ್ ಮುಂಬಯಿ, ನಿತ್ಯಾನಂದ ಶೆಟ್ಟಿ, ಎಸ್. ಆರ್. ಬಂಜನ್, ಚಂದ್ರಶೇಖರ್ , ನ್ಯಾ. ರಾಮಪ್ರಸಾದ್, ಜಗದೀಶ ಆರ್ ಬಂಜನ್ ಮುಂಬಯಿ, ರಘ ಮೂಲ್ಯ ಪಾದೆಬೆಟ್ಟು ಮುಂಬಯಿ, ಶ್ರೀನಿವಾಸ್ ಪೂಜಾರಿ, ರಾಧಾಕೃಷ್ಣ ಮೂಲ್ಯ, ಸೂರತ್ , ರಾಕೇಶ್ ಸಾಲಿಯಾನ್, ನವೀನ್ ಕುಲಾಲ್, ಪದ್ಮನಾಭ ಬಂಗೇರ, ದಿವಾಕರ ಮೂಲ್ಯ ಬೆಂಗಳೂರು, ಹರಿಯಪ್ಪ ಮೂಲ್ಯ, ಸುಲೋಚನ ಕೆ, ದೊಡ್ಡಣ್ಣ ಪಿ ಮೂಲ್ಯ ಪೂಣೆ, ಕುಸುಮ ಎಂ ಬಂಜಾನ್, ಸದಾನಂದ, ಗೌತಮ್ ಜಿ ಕುಲಾಲ್, ಸುಕುಮಾರ್ ಕುಲಾಲ್, ಡಿ ಪ್ರಕಾಶ್. ಪಾಲ್ಗೊಳ್ಳಲಿದ್ದಾರೆ,
ರಾತ್ರಿ 8.30 ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರದಿಂದ ನಿರ್ದೇಶಕಿಸವಿತಾ ಜೀವನ್ ಇವರ ತಂಡದಿಂದ ಕಾರ್ಯಕ್ರಮ
12.02.2025 ರಂದು ಬೆಳಿಗ್ಗೆ ಗಂಟೆ 8 ರಿಂದ : ಶ್ರೀದೇವರಿಗೆ ಪುಣ್ಯಾಹ, ಕಲಶ ಪ್ರಧಾನ ಹೋಮ, ಗಣಪತಿ ಹೋಮ, ಕಲಶಾಭಿಷೇಕ ಶ್ರೀ ನಾಗದೇವರಿಗೆ ಪಂಚಾಮೃತ, ನಾಗತಂಬಿಲ, ಪರಿವಾರ ದೈವಗಳಿಗೆ ಪರ್ವ ಪೂಜೆ,
ಮಧ್ಯಾಹ್ನ 12 ಗಂಟೆಗೆ :ಮಹಾಪೂಜೆ, ನಂತರ ಬಲಿ ಹೊರಟು ಮಹಾರಥೋತ್ಸವ, ಪಲಪೋಜೆ, ಬಟ್ಟಲು ಕಾಣಿಕೆ, ಮಹಾ ಅನ್ನಸಂತರ್ಪಣೆ , ಮಧ್ಯಾಹ್ನ ಭಜನಾ ಕಾರ್ಯಕ್ರಮ , ನಂತರ ಸಾಂಸ್ಕೃತಿಕ.ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, ಕು| ರಕ್ಷಾ ಎಸ್, ಕು| ಆತ್ಮಶ್ರೀ ಬಿ. ಶ್ರೀ ಸಂಗೀತ ಪಾಠ ಶಾಲೆ, ಕರ್ಮಾರ್, ಪಡೀಲ್ ಇವರಿಂದ
ಸಾಯಂಕಾಲ 7 ಕ್ಕೆ : ರಂಗಪೂಜೆ, ಬಯನ ಬಲಿ ಉತ್ಸವ, ಪಲ್ಲಕ್ಕಿ ಸೇವೆ ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ
ಪೆ13 ಬೆಳಿಗ್ಗೆ ಗಂಟೆ 9 ರಿಂದಪುಣ್ಯಾಹ, ಗಣಪತಿ ಹೋಮ, ಶ್ರೀ ವಿರನಾರಾಯಣ ದೇವರಿಗೆ ತುಳಸಿ ಅರ್ಚನೆ, ಸಾಮೂಹಿಕ ಆಶೇಷಾ ಬಲಿ, ತುಲಭಾರ ಸೇವೆ, ಮಹಾಪೂಜೆ, ಅನ್ನಪ್ರಸಾದ ಮಧ್ಯಾಹ್ನ ಭಜನಾ ಕಾರ್ಯಕ್ರಮ ,ಸಮಜೆ 6.00 ರಿಂದಶ್ರೀ ಕ್ಷೇತ್ರ ರಾಜಾಂಗಣದಲ್ಲಿ ರಸಿಕ ಆರ್ಟ್ಸ್, ರಂಗ್‌ದ ಮಜಲು ವಿಟ್ಲ, ಸುರೇಶ್ ಕುಲಾಲ್ ಇವರ ತಂಡದಿಂದ ಕೀಲು ಕುದುರೆ, ಕರಗನೃತ್ಯ, ಗೊಂಬೆಕುಣಿತ, ಶ್ರಿ ವೀರ ಮಾರುತಿ ವ್ಯಾಯಾಮ ಶಾಲೆ ಉಜ್ಯೋಡಿ ಬಿಕರ್ಣಕಟ್ಟೆ ಇವರ ತಂಡದಿಂದ ತಾಲೀಮು ಪ್ರದರ್ಶನ, ಚೆಂಡೆ .ಕುಣಿತ ಶ್ರೀ ಗಣೇಶ್ ಆಚಾರ್ಯ ನಿರ್ದೇಶನದಲ್ಲಿ ಧರ್ಮಶಾಸ್ತ್ರ ಚೆಂಡೆ ಬಳಗ, ಜ್ಯೋತಿನಗರ, ಕುಲಶೇಖರ, ಇವರ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ರಂಗ ಪೂಜೆ, ಬಲಿ, ಪೇಟೆ ಸವಾರಿ, .ವಸಂತಕಟ್ಟೆ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ನಂತರ ಪ್ರಸಾದ ವಿತರಣೆ, ಅನ್ನಪ್ರಸಾದ ಜರಗಲಿದೆ.
ರಾತ್ರಿ 7.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಶಿರಡಿ ಸಾಯಿಬಾಬ ಮಂದಿರದ ಆಶ್ರಿತ ಸಾಯಿಶಕ್ತಿ ಕಲಾಬಳಗ ಕಲಾಕಾಣಿಕೆ “ಜೋಡು ಜೀಟಿಗೆ” ತುಳು ಜಾನಪದ ನಾಟಕ ಜರಗಲಿದೆ.
ತಾ: 14.02.2025 ಶುಕ್ರವಾರ ಬೆಳಿಗ್ಗೆ ಗಂಟೆ 8 ರಿಂದ : ಭಜನಾ ಕರ್ಯಕ್ರಮ ಲಕ್ಷ್ಮೀಹೃದಯ ಪೂಜೆ, ಮಹಾಪೂಜೆ, ಅನ್ನಪ್ರಸಾದ ಜರಗಲಿದೆ.
ಮದ್ಯಾಹ್ನ 3.00 ರಿಂದ : ಭಜನಾ ಕರ್ಯಕ್ರಮ – ಶ್ರೀ ದೇವಿ ಮಾತ್ಮ ಮಂಡಳಿ, ಓಲ್ಡ್ ಕೆಂಟ್ ರೋಡ್ ಮಂಗಳೂರು, ದಾಸ ಸಮಕೀರ್ತನೆ- ಅನಘಾ ಇವರ ಶಿಷ್ಠೆಯರಿಂದ ,ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ- ಸಿರಿಗನ್ನಡ ರಾಷ್ಟ್ರೀಯ ನೃತ್ಯ ಕಲಾರತ್ನ ಪ್ರಶಸ್ತಿ ಪುರಸ್ಕೃತೆ ಕು| ಅನ್ನಪೂರ್ಣ ವಗ್ಗ ಇವರ ನಿರ್ದೇಶನದ ಶ್ರೀ ಶಾರದಾ ನೃತ್ಯ ತಂಡ ಇಲ್ಲಿನ ಶಿಷ್ಯವೃಂದದಿಂದ ಸಾಂಸ್ಕೃತಿಕ ಝೇಂಕಾರ ಹಾಗೂ ಶ್ರೀ ದೇವರಿಗೆ ದೊಡ್ಡ ರಂಗಪೂಜೆ ನಂತರ ಬಲಿ ಉತ್ಸವ, ಬಟ್ಟಲು ಕಾಣಿಕೆ, ವಸಂತ ಕಟ್ಟೆಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ಜರಗಲಿದೆ.
: 15.02.2025 2ಬೆಳಿಗ್ಗೆ : ಶುದ್ಧಿಕಲಶ, ಮಂತ್ರಾಕ್ಷತೆ, ಮಹಾಪ್ರಸಾದ.ಈ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಕ್ಷೇತ್ರದ ಆಡಳಿತ ಮಂಡಳಿ ಜಿಲ್ಲಾ ಕುಲಾಲರ ಮಾತೃ ಸಂಘ, ಜೀರ್ಣೋದ್ಧಾರ ಸಮಿತಿ, ಸೇವಾ ಟ್ರಸ್ಟ್, ಸೇವಾ ಸಮಿತಿ, ಮಾತ್ಮ ಮಂಡಳಿ ವಿನಂತಿಸಿದೆ