ಡಿಸೆಂಬರ್ 9 2024 ರಂದು ಕುರ್ಲಾ ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದ ಬೆಸ್ಟ್ ಬಸ್ ನಿಯಂತ್ರಣ ತಪ್ಪಿ 20 ವಾಹನಗಳಿಗೆ ಡಿಕ್ಕಿ ಹೊಡೆದು, 9 ಜನರ ಸಾವಿಗೆ ಕಾರಣವಾಗಿತ್ತು. ಬಸ್ ಅಪಘಾತದ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೋಲಿಸರು, ಚಾಲಕ ಸಂಜಯ್ ಮೋರೆ ವಿರುದ್ಧ ಮಂಗಳವಾರ ಮೆಟ್ರೋ ಪಾಲಿಟಿನ್ ಮ್ಯಾಜಿಸ್ಟ್ರೇಟ್ ನ್ಯಾಯಲಯಕ್ಕೆ 1000 ಪುಟಗಳಿಗೂ ಹೆಚ್ಚು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಚಾಲಕನನ್ನು ನೇಮಿಸಿಕೊಂಡ ವೇಟ್ ಲೀಸ್ ಕಂಪನಿಯ ಸಿಇಒ ಮತ್ತು ಬ್ರಹನ್ ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್ )ಗೆ ಎಲೆಕ್ಟ್ರಿಕ್ ಬಸ್ ಪೂರೈಸಿದ ಸಂಸ್ಥೆ ನಿರ್ದೇಶಕರನ್ನೂ ಪೊಲೀಸರು ಆರೋಪಿಸಿದ್ದಾರೆ.
ಎಲೆಕ್ಟ್ರಾನ್ಸ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕರು ಮತ್ತು ಮೋರಿಯಾ ಟ್ರಾನ್ಸ್ ಇಂಡಿಯ ಲಿಮಿಟೆಡ್ನ ಸಿಇಓ ಅವರನ್ನು ಸಹ ಆರೋಪ ಪಟ್ಟಿಯಲ್ಲಿ ಆರೋಪಿಗಳಾಗಿ ಹೆಸರಿಸಲಾಗಿದೆ. ಏಕೆಂದರೆ ನಮ್ಮ ತನಿಖೆಯಲ್ಲಿ ಚಾಲಕನನ್ನು ನೇಮಿಸಿಕೊಳ್ಳುವಲ್ಲಿ ಮತ್ತು ತರಬೇತಿ ನೀಡವಲ್ಲಿ ನಿರ್ಲಕ್ಷ ವಹಿಸಿರುವುದು ಕಂಡು ಬಂದಿದೆ, ಇದು ಅಪಘಾತಕ್ಕೆ ಕಾರಣವಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಅಧಿಕ ರಕ್ತದೊತ್ತಡ ಮತ್ತು ದೃಷ್ಟಿ ದೋಷದಿಂದ ಬಳಲುತ್ತಿದ್ದ ಚಾಲಕ ಮೋರೆ ಎಲೆಕ್ಟ್ರಿಕ್ ಬಸ್ ಓಡಿಸಲು ವೈದ್ಯಕೀಯವಾಗಿ ಅನರ್ಹ ಎಂದು ಪೊಲೀಸರು ಆರೋಪ ಪಟ್ಟೆಯಲ್ಲಿ ತಿಳಿಸಿದ್ದಾರೆ. ಹೆಚ್ಚುವರಿಯಾಗಿ ಅವರಿಗೆ ಸಾಕಷ್ಟು ತರಬೇತಿ ನೀಡಲಾಗಿಲ್ಲ ಮತ್ತು ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಕಾರಣ ಇದು ಮಾನವ ದೋಷ ಎಂದು ಪುರಾವೆಗಳು ತೋರಿಸಿವೆ.
ಘಟನೆಯ ಸಿಸಿಟಿವಿ ದ್ರಶಾವಳಿಗಳು, ಚಾಲಕನ ರಕ್ತದ ಮಾದರಿ ಇತರ ವಿಧಿ ವಿಜ್ಞಾನ ಪರೀಕ್ಷಾ ವರದಿಗಳು, 40ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಮತ್ತು ಬಲಿಪಶುಗಳ ಮರಣ ಪ್ರಮಾಣ ಪತ್ರಗಳನ್ನು ಪೊಲೀಸರು ಆರೋಪ ಪಟ್ಟಿಯಲ್ಲಿ ಸೇರಿಸಿದ್ದಾರೆ.
